Advertisement

ಸಮ್ಮೇಳನದಲ್ಲಿ ಕನ್ನಡಮ್ಮ!

11:17 AM Nov 26, 2017 | |

ತಾಯಿ ಭುವನೇಶ್ವರಿಯ ಚಿತ್ರ, ಕರ್ನಾಟಕದ ಮ್ಯಾಪ್‌, ಕನ್ನಡ ಕಾದಂಬರಿಕಾರರ ಭಾವಚಿತ್ರಗಳನ್ನು ಹೊಂದಿರುವ ಬ್ಯಾಡ್ಜ್ಗಳಿಂದಲೇ ಈಕೆ ಸರ ತಯಾರಿಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯದ ಸಾಲುಗಳನ್ನು ಹೊಂದಿರುವ ಬಟ್ಟೆಗಳನ್ನು ವಿಶೇಷವಾಗಿ ಡಿಸೈನ್‌ ಮಾಡಿಸಿಕೊಂಡು ಅದನ್ನು ಹೆಮ್ಮೆಯಿಂದ ಧರಿಸುತ್ತಾರೆ.

Advertisement

ಹಣೆಗೆ ಜೈ ಕನ್ನಡ ಎಂಬ ಫ‌ಲಕ  ಹಾಕಿಕೊಂಡು, ಅರಿಶಿನ-ಕುಂಕುಮ ವರ್ಣದ ದಿರಿಸಿನೊಂದಿಗೆ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಬರುತ್ತಾರೆ! ಜೈ ಕರ್ನಾಟಕ ಮಾತೆ ಎಂದು ಘೋಷಣೆ ಕೂಗುತ್ತಲೇ ಎಲ್ಲರ ಗಮನ ಸೆಳೆಯುತ್ತಾರೆ. ಅಂದಹಾಗೆ ಇವರ ಹೆಸರು ಶೋಭಾ. ಹುಬ್ಬಳ್ಳಿಯವರು, ನಾನು ಸೋಷಿಯಲ್‌ ವರ್ಕರ್‌, ಸಾಹಿತ್ಯ ಪ್ರೇಮಿ.

ಕನ್ನಡದ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕು ಹಾಗೂ ಉಳಿದವರಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳಬೇಕು ಎಂಬುದು ನನ್ನ ಹಿರಿಯಾಸೆ, ಹಾಗಾಗಿ ವಿಶೇಷವಾಗಿ ಡ್ರೆಸ್‌ ಮಾಡಿಕೊಂಡು ಬರುತ್ತೇನೆ. ಈ ಹಿಂದೆ ಶ್ರವಣಬೆಳಗೊಳ, ರಾಯಚೂರಿನಲ್ಲಿ ನಡೆದ ಸಮ್ಮೇಳನಗಳಿಗೂ ಹೋಗಿದ್ದೆ. ಮುಂದಿನ ವರ್ಷದ ಸಮ್ಮೇಳನಕ್ಕೂ ತಪ್ಪದೇ ಹೋಗ್ತೀನೆ ಅನ್ನುತ್ತಾರೆ ಶೋಭಾ.

Advertisement

Udayavani is now on Telegram. Click here to join our channel and stay updated with the latest news.

Next