Advertisement

ಐಫೋನ್‌ ಮರಳಿಸಿದ ನಿರ್ವಾಹಕ

04:20 AM Jul 20, 2018 | Karthik A |

ಉಳ್ಳಾಲ: ಬಸ್ಸಿನಲ್ಲಿ ಸಿಕ್ಕಿದ ಹೊಸ ಐಫೋನ್‌ ಮೊಬೈಲನ್ನು ವಾರಸುದಾರರಿಗೆ ತಲುಪಿಸುವ ಮೂಲಕ ಬಸ್‌ ನಿರ್ವಾಹಕರೊಬ್ಬರು ಪ್ರಾಮಾಣಿಕತೆ ಮೆರೆದಿದ್ದಾರೆ. ಮಂಗಳೂರು – ಕೊಣಾಜೆ ನಡುವೆ ಸಂಚರಿಸುವ ಸುಷ್ಮಿತಾ ಬಸ್ಸಿನ ನಿರ್ವಾಹಕ ನಾರಾಯಣ ಮಂಜನಾಡಿ ಅವರಿಗೆ ವಿವಿ ವಿದ್ಯಾರ್ಥಿ ಅಪಘಾನಿಸ್ಥಾನದ ಸದ್ದಾಂ ಮುಕ್ರೇಷಿ ಅವರ ಐಫೋನ್‌ ಸಿಕ್ಕಿತ್ತು.ಪ್ರಥಮ ವರ್ಷದ ಪದವಿ ವ್ಯಾಸಂಗಕ್ಕೆ ಸೇರಿದ್ದ ಮುಕ್ರೇಷಿ ಹೊಸ ಫೋನ್‌ ಖರೀದಿಸಿ ಹೊಸ ಸಿಮ್‌ ಹಾಕಿದ್ದರು. ಆದರೆ ಸಿಮ್‌ ಆ್ಯಕ್ಟಿವೇಟ್‌ ಮಾಡಿರಲಿಲ್ಲ.

Advertisement

ಕೊಣಾಜೆಯಿಂದ ದೇರಳಕಟ್ಟೆಯಲ್ಲಿರುವ ಹಾಸ್ಟೆಲ್‌ ಗೆ ಸಂಚರಿಸುತ್ತಿದ್ದಾಗ ಮೊಬೈಲ್‌ ಕಳಕೊಂಡಿದ್ದರು. ಬಸ್ಸಿನಲ್ಲಿ ಸಿಕ್ಕಿದ್ದ ಮೊಬೈಲ್‌ಗೆ ಕಳಕೊಂಡವರು ಕರೆ ಮಾಡಬಹುದು ಎಂದು ನಿರ್ವಾಹಕ ಭಾವಿಸಿದ್ದರು. ಆದರೆ ಕರೆ ಬಾರದೆ ಇದ್ದಾಗ ಮೊಬೈಲ್‌ ಅನ್ನು ತಡಕಾಡಿದಾಗ ವಿವಿಯಲ್ಲಿ ಶುಲ್ಕ ಪಾವತಿಸಿದ ರಶೀದಿ ಸಿಕ್ಕಿತು. ಇದರ ಆಧಾರದಲ್ಲಿ ವಿವಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಿಯಾ ನಾಯಕ್‌ ಅವರನ್ನು ಸಂಪರ್ಕಿಸಿ ವಾರಸುದಾರರಿಗೆ ತಲುಪಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next