ಹೊಸದಿಲ್ಲಿ/ಲಂಡನ್: ಕೋವಿಡ್ ಸೋಂಕಿನ ಬಗ್ಗೆ ಮತ್ತಷ್ಟು ಹೆಚ್ಚಿನ ಎಚ್ಚರಿಕೆ, ಪರೀಕ್ಷೆ, ಸೀರೋ ಸರ್ವೆಗಳನ್ನು ನಡೆಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೊರೊನಾ ಲಸಿಕೆ ಸಂಶೋಧನೆಗೆ ಸಂಬಂಧಿಸಿದಂತೆ ಹೊಸದಿಲ್ಲಿ ಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಭಾಗ ವಹಿಸಿ ಅವರು ಮಾತನಾಡಿದರು. ಸೋಂಕಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡುವುದರ ಬಗ್ಗೆ ದೇಶದ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳ ಬಳಕೆ ಬಗ್ಗೆ ಪದೇಪದೆ ಪರೀಕ್ಷೆಗಳನ್ನು ನಡೆಸಬೇಕಾಗಿದೆ ಎಂದು ಸೂಚಿಸಿದರು.
ದ್ವಿಗುಣ ಅವಧಿ ಸುಧಾರಣೆ: ಮತ್ತೂಂದೆಡೆ ದೇಶದಲ್ಲಿ ಸೋಂಕು ದ್ವಿಗುಣಗೊಳ್ಳುವ ಪ್ರಮಾಣ ಗಣನೀಯವಾಗಿ ಸುಧಾರಿಸಿದ್ದು, ಅದು 73 ದಿನ ಗಳಾಗಿವೆ. ಆಗಸ್ಟ್‌ನ ಮಧ್ಯಭಾಗದಲ್ಲಿ ಅದು 25.5 ದಿನಗಳಾಗಿದ್ದವು. ಬುಧವಾರದಿಂದ ಗುರು ವಾರದ ಅವಧಿಯಲ್ಲಿ 81,514 ಮಂದಿ ಚೇತರಿಸಿ ಕೊಂಡಿದ್ದಾರೆ.
2ನೇ ಬಾರಿ ಕನಿಷ್ಠ ಸಾವು: ಬುಧವಾರದಿಂದ ಗುರುವಾರದ ಅವಧಿಯಲ್ಲಿ ಹೊಸತಾಗಿ 67,708 ಕೇಸುಗಳು ದೃಢಪಟ್ಟಿವೆ. ಸಮಾ ಧಾನಕರ ಅಂಶವೆಂದರೆ ಇದೇ ಅವಧಿಯಲ್ಲಿ 680 ಮಂದಿ ಮಾತ್ರ ಸೋಂಕಿಗೆ ಜೀವ ಕಳೆದು ಕೊಂಡಿದ್ದಾರೆ. ಜು.28ರಂದು 654 ಮಂದಿ ಒಂದು ದಿನದ ಅವಧಿಯಲ್ಲಿ ಅಸುನೀಗಿದ್ದರು.
ಬಿಗಿ ಕ್ರಮಕ್ಕೆ ನಿರ್ಧಾರ: ಐರೋಪ್ಯ ಒಕ್ಕೂಟದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ . ಜರ್ಮನಿ, ಚೆಕ್ ರಿಪಬ್ಲಿಕ್, ಇಟಲಿ, ಬೆಲ್ಜಿಯಂ, ನೆದರ್‌ಲ್ಯಾಂಡ್, ಸ್ಪೇನ್‌ಗಳಲ್ಲಿ ಲಾಕ್‌ಡೌನ್ ನಿಯಮಗಳನ್ನು ಮತ್ತೆ ಬಿಗಿಗೊಳಿಸಲಾಗುತ್ತಿದೆ. ಇದೇ ವೇಳೆ ಆರೋಗ್ಯವಂತರಿಗೆ ಲಸಿಕೆ ಸಿಗಲು 2022ರ ವರೆಗೆ ಕಾಯಬೇಕಾಗಿದೆ.
ಐದೇ ನಿಮಿಷದಲ್ಲಿ ಸೋಂಕು ಪತ್ತೆ
ಐದೇ ನಿಮಿಷಗಳಲ್ಲಿ ಸೋಂಕು ಪತ್ತೆ ಹಚ್ಚುವ ವಿಶೇಷ ಕಿಟ್ ಒಂದನ್ನು ಆಕ್ಸ್‌ಫರ್ಡ್ ವಿವಿ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಹೊಸ ವ್ಯವಸ್ಥೆಯಲ್ಲಿ ಗಂಟಲಿನಿಂದ ಸ್ವಾಬ್ ತೆಗೆಯಲಾಗುತ್ತದೆ ಮತ್ತು ಇದು ವಿವಿಧ ರೀತಿಯ ಕೊರೊನಾ ಸೋಂಕುಗಳನ್ನೂ ಪತ್ತೆ ಹಚ್ಚುವ ಸಾಮರ್ಥ್ಯ ಹೊಂದಿದೆ. ಇದು ಅತ್ಯಂತ ವೇಗವಾಗಿ ಸೋಂಕು ಪತ್ತೆ ಹಚ್ಚುವ ವಿಧಾನ ಎಂದು “ಮೆಡ್‌ರೆಕ್ಸಿ(MedRxiv)ಎಂಬ ನಿಯತಕಾಲಿಕ ದಲ್ಲಿ ಪ್ರಕಟಗೊಂಡ ಲೇಖನದಲ್ಲಿ ವಿವರಿಸಲಾಗಿದೆ. ರಾಯಲ್ ಸೊಸೈಟಿ ಡೊರೊತಿ ಹಾಡ್ಜ್ ಕಿನ್ ರಿಸರ್ಚ್ ಫೆಲೋಶಿಪ್‌ನ ನೆರವಿನಿಂದಾಗಿ ಈ ಸಾಧನೆ ಕೈಗೂಡಿದೆ.