Advertisement

ಕಾಡುಗೊಲ್ಲರ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ

03:17 PM Oct 30, 2021 | Team Udayavani |

ಹೊಳಲ್ಕೆರೆ: ಕಾಡುಗೊಲ್ಲರನ್ನು ಅಲೆಮಾರಿ ಸಮುದಾಯಕ್ಕೆ ಸೇರಿಸಲು ರಾಜ್ಯದಲ್ಲಿ ಕಾಡುಗೊಲ್ಲರ ಸಾಮಾಜಿಕ ಸ್ಥಿತಿಗತಿ, ಆಚಾರವಿಚಾರ, ಕಲೆ ಸಾಹಿತ್ಯ ಕುರಿತು ಅಧ್ಯಯನ ನಡೆಸಿ ಸರಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ಹೇಳಿದರು.

Advertisement

ಅವರು ಹೊಳಲ್ಕೆರೆ ತಾಲೂಕಿನಲ್ಲಿರುವ ಗೊಲ್ಲರಹಟ್ಟಿಗಳಲ್ಲಿ ಗೊಲ್ಲರ ಸಮುದಾಯದ ಕುರಿತು ಮಾಹಿತಿ ಪಡೆದು ಮಾತನಾಡಿದರು. ರಾಜ್ಯದಲ್ಲಿರುವ ಕಾಡು ಗೊಲ್ಲರ ಸಾಮಾಜಿಕ, ಆರ್ಥಿಕ, ಸ್ಥಿತಿಗತಿ ಅಧ್ಯಯನ ಮಾಡಲು ತಾಲೂಕಿನ ವಿವಿಧ ಗೊಲ್ಲರಹಟ್ಟಿಗಳಿಗೆ ಭೇಟಿ ನೀಡಿ ಪರಿಶೀಲನೆನಡೆಸಿದೆ. ಇದು ಸಾಕಷ್ಟು ಶೋಷಿತ ಹಾಗೂ ಹಿಂದುಳಿದ ಸಮುದಾಯವಾಗಿದೆ. ರಾಜ್ಯದ12 ಜಿಲ್ಲೆಯಲ್ಲಿ ಅತಿಹೆಚ್ಚು ಕಾಣಿಸಿಕೊಳ್ಳುವಕಾಡುಗೊಲ್ಲರಿಗೆ ಸಾಮಾಜಿಕ ಸ್ಥಾನ ಮಾನ ಕಲ್ಪಿಸಲು ಸರಕಾರಕ್ಕೆ ಸೂಕ್ತ ವರದಿ ಸಲ್ಲಿಸಲು ಎಲ್ಲಾ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಾಗಿದೆ ಎಂದರು.

ಕಾಡುಗೊಲ್ಲರನ್ನು ಅಲೆಮಾರಿಗಳ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯದ 12ಜಿಲ್ಲೆಗಳಲ್ಲಿ ಕಾಡುಗೊಲ್ಲರಿದ್ದಾರೆ. ಗೊಲ್ಲರ ಹಟ್ಟಿಗಳಲ್ಲಿ ಮೂಲ ಸೌಕರ್ಯಗಳಿಲ್ಲ. ಗೊಲ್ಲರು ಬಡತನದಿಂದಜೀವನ ನಡೆಸುತ್ತಿದ್ದು, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮುಂದೆ ಬರಬೇಕಿದೆ. ಶಿಕ್ಷಣ ಪಡೆದರೆ ಮಾತ್ರ ಇವರಸ್ಥಿತಿ ಸುಧಾರಣೆ ಆಗಲಿದೆ. ಗೊಲ್ಲರ ಹಟ್ಟಿಗಳಲ್ಲಿ ಇನ್ನೂ ಮೌಢ್ಯಾಚರಣೆ ಜೀವಂತವಾಗಿದ್ದು, ಅವುಗಳಿಂದ ಹೊರ ಬರಬೇಕಿದೆ. ಗೊಲ್ಲರ ಹಟ್ಟಿಗಳನ್ನು ಕಂದಾಯ ಗ್ರಾಮ ಮಾಡಲು ಬೇಡಿಕೆ ಇದ್ದು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.

ಕುರಿ ಕಾಯುವುದು ಕಾಡುಗೊಲ್ಲರ ಮುಖ್ಯ ಕಸುಬು. ಅದಕ್ಕೂ ಅನೇಕ ಅಡೆತಡೆಗಳು ಎದುರಾಗುತ್ತಿವೆ. ಕುರಿ ಮೇಯಿಸುವ ಉದ್ದೇಶದಿಂದ ಅರಣ್ಯ ಪ್ರದೇಶದಲ್ಲಿ ಟೆಂಟ್‌ ಹಾಕಿಕೊಂಡರೆ ಅರಣ್ಯ ಇಲಾಖೆಯ ಅಧಿಕಾರಿಗಳು ಕಿರುಕುಳಕೊಡುತ್ತಿದ್ದಾರೆ ಎಂದು ದೂರುಗಳು ಬಂದಿವೆ. ಈ ಬಗ್ಗೆ ಡಿಸಿಎಫ್‌ ಜೊತೆ ಮಾತನಾಡಿದ್ದು, ವೃತ್ತಿಗೆ ಅಡ್ಡಿಪಡಿಸದಂತೆ ಸೂಚಿಸಿದ್ದೇನೆ. ಗೋಮಾಳಗಳಲ್ಲಿ ಬೇಲಿಹಾಕಿಕೊಂಡು ಕುರಿ ಸಾಕಲು ಅವಕಾಶ ಕೊಡಬೇಕು.ಅನುಗ್ರಹ ಯೋಜನೆ ಮುಂದುವರಿಸಲಾಗಿದ್ದು,ಆಕಸ್ಮಿಕವಾಗಿ ಸಾವನ್ನಪ್ಪುವ ಪ್ರತಿ ಕುರಿಗೆ 5 ಸಾವಿರರೂ. ಪರಿಹಾರ ವಿತರಿಸಲಾಗುವುದು ಎಂದು ಹೇಳಿದರು.

ತಾಲೂಕಿನ ನಂದನಹೊಸೂರು ಗೊಲ್ಲರಹಟ್ಟಿ, ಅವಳಿಹಟ್ಟಿ, ಕಂಬದೇವರಹಟ್ಟಿಗ್ರಾಮದಲ್ಲಿರುವ ಹಟ್ಟಿಗೊಲ್ಲ ಹಾಗೂ ಕಾಡುಗೊಲ್ಲಸಮುದಾಯದವರನ್ನು ಭೇಟಿ ಮಾಡಿ ಪರಿಶೀಲನೆ ನಡೆಸಿದರು.  ಹೊಳಲ್ಕೆರೆ ಪಟ್ಟಣದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯ ಭೇಟಿ ನೀಡಿವಿದ್ಯಾರ್ಥಿಗಳ ಜತೆ ಊಟ ಮಾಡಿದರು.

Advertisement

ಕಾಂಗ್ರೆಸ್‌ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷಕೆ.ಎಂ. ಹಾಲೇಶ್‌, ರಾಜ್ಯ ಹಿಂದುಳಿದ ವರ್ಗಗಳಆಯೋಗದ ಸದಸ್ಯ ಎಚ್‌.ಎಸ್‌. ಕಲ್ಯಾಣ್‌ಕುಮಾರ್‌, ರಾಜಶೇಖರ್‌, ಅರುಣ್‌ಕುಮಾರ್‌, ಕೆ.ಟಿ ಸುವರ್ಣ, ಜಿಲ್ಲಾ ಗೊಲ್ಲರ ಸಂಘದ ಅಧ್ಯಕ್ಷಮಹಾಲಿಂಗಪ್ಪ, ಜಿಪಂ ಮಾಜಿ ಸದಸ್ಯ ಡಿ.ಕೆ.ಶಿವಮೂರ್ತಿ, ರಾಜ್ಯ ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷ ಶಿವು ಯಾದವ್‌, ತಾಲೂಕು ಹಿಂದುಳಿದವರ್ಗಗಳ ಕಲ್ಯಾಣಾಧಿಕಾರಿ ಎಂ. ಪ್ರದೀಪ್‌ ಕುಮಾರ್‌, ಪತ್ರಕರ್ತ ಚಿತ್ತಪ್ಪ, ರಂಗಸ್ವಾಮಿ, ರೇವಣ್ಣ, ಹರ್ಷ ಯಾದವ್‌, ಉಮೇಶ್‌, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next