Advertisement
ಯಾವುದೇ ಹೊಸ ಹೊಸ ಯೋಜನೆ, ಕೊಡುಗೆಗಳ ಘೋಷಣೆಗಳನ್ನು ಗಮನಿಸಿದರೆ ಅವುಗಳ ಕೊನೆಯಲ್ಲಿ ಒಂದು ನಕ್ಷತ್ರವನ್ನು ಮುದ್ರಿಸಿರುತ್ತಾರೆ. ಆ ನಕ್ಷತ್ರದ ಅರ್ಥ; ಷರತ್ತುಗಳು ಅನ್ವಯಿಸುತ್ತವೆ ಎಂದು, ಈ ಒಂದು ಮಾತಿನಿಂದಲೇ ಗ್ಯಾರಂಟಿ, ನಂಬಿಕೆಗೆ ಅರ್ಹ ಎಂಬ ಮಾತು ಮರೆಯಾಗುವಂತೆ ಮಾಡಲಾಗಿರುತ್ತದೆ.
ನಿಜ, ಷರತ್ತುಗಳು ಅನ್ವಯಿಸುತ್ತವೆ ಎಂಬ ಮಾತು ಬೇಕು. ಆದರೆ ಶೀರ್ಷಿಕೆಯಲ್ಲಿ ಶೇ. 100ರ ಕ್ಯಾಷ್‌ಬ್ಯಾಕ್ ಎಂದು ಪ್ರಕಟಿಸುವ ಒಂದು ಕಂಪನಿ ಅದರ ಷರತ್ತುಗಳಲ್ಲಿ ಪರಮಾವಧಿ 10 ರೂ.ಗಳು ಮಾತ್ರ ಕ್ಯಾಷ್‌ಬ್ಯಾಕ್ ಆಗುತ್ತದೆ ಎಂದು ಸಾರುತ್ತದೆಂದಾದರೆ ಅದು ನ್ಯಾಯಸಮ್ಮತವಾದ ಪ್ರಚಾರ ಎನ್ನಿಸಿಕೊಳ್ಳುವುದಿಲ್ಲ. ಜಾಹೀರಾತು ಸುಳ್ಳನ್ನು ಹೇಳುತ್ತಿಲ್ಲ ಎಂಬ ಸಮರ್ಥನೆಗಿಂತ ಅದು ಗ್ರಾಹಕರನ್ನು ಅರ್ಧ ಸತ್ಯದ ಮೂಲಕ ತಪ್ಪುದಾರಿಗೆಳೆಯುತ್ತಿದೆಯೇ ಎಂಬ ಅಂಶ ಮುಖ್ಯವಾಗುತ್ತದೆ.
Related Articles
Advertisement
ಇದೇ ಡಿಷ್ ಟಿವಿ ತನ್ನ ಗ್ರಾಹಕರಿಗೆ ಹೆಚ್‌ಡಿಗೆ ಅಪ್‌ಗೆÅàಡ್ ಆಗುವ ಅವಕಾಶವನ್ನು ಆನ್‌ಲೈನ್ ವಿನಂತಿಯ ಮೂಲಕ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಿದೆ. ಇಂತಹ ಗ್ರಾಹಕರಿಗೆ ಒಂದು ತಿಂಗಳು ಉಚಿತವಾಗಿ ಹೆಚ್‌ಡಿ ಚಾನೆಲ್‌ಗಳನ್ನು ವೀಕ್ಷಿಸುವ ಬೋನಸ್ ಬೇರೆ. ಒಂದು ತಿಂಗಳ ನಂತರ ಗ್ರಾಹಕ ಇದನ್ನು ಅನೂರ್ಜಿತಗೊಳಿಸದಿದ್ದರೆ ಅವನಿಗೆ ಮೌಲ್ಯಾಧಾರಿತ ಸೇವೆಯ ಹೆಚ್ಚುವರಿ ವೆಚ್ಚ ಬೀಳುತ್ತದೆ ಎಂದು ಮೃದು ಎಚ್ಚರಿಕೆಯನ್ನು ಷರತ್ತುಗಳ “ಎಯ್r ಪಾಯಿಂಟ್ ಫಾಂಟ್’ ಅಕ್ಷರ ಹೇಳಿರುತ್ತದೆ.
ಒಬ್ಬ ಜಾಣ ಒಂದು ತಿಂಗಳು ಬಿಡಿ, 28ನೇ ದಿನಕ್ಕೆ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ ತನ್ನ ಪ್ಯಾಕೇಜ್‌ನಲ್ಲಿರುವ ಹೆಚ್‌ಡಿ ಪ್ಯಾಕ್ ಅನ್ನು ಅನೂರ್ಜಿತಗೊಳಿಸುವ ಶಾಣ್ಯಾತನ ತೋರಿಸಲು ಮುಂದಾದರೆ ಡಿಟಿಎಚ್ ಸೇವಾದಾತರ ಗ್ರಾಹಕ ಅಧಿಕಾರಿ “ಸ್ವಾಮಿ ನಿಮ್ಮ ಹೆಸರಿನಲ್ಲಿ ಯಾವುದೇ ವ್ಯಾಸ್ ಅಲಿಯಾಸ್ ಮೌಲ್ಯವರ್ಧಿತ ಸೇವೆ ಚಾಲನೆಯಲ್ಲಿ ಇಲ್ಲ, ಸಾರ್ ‘ಎನ್ನುತ್ತಾನೆ. ಚಾಲನೆಯಲ್ಲಿಯೇ ಇಲ್ಲದ ಚಂದಾ ಪ್ಯಾಕ್ ಅನ್ನು ಅನೂರ್ಜಿತಗೊಳಿಸುವುದಾದರೂ ಹೇಗೆ?ವಿಚಿತ್ರ ಎಂದರೆ ಈ 30 ದಿನದ ಅವಧಿ ಮುಗಿಯುವ ಮಧ್ಯರಾತ್ರಿ 12ರ ನಂತರದ ನಿಮಿಷದಲ್ಲಿಯೇ ನಮಗೆ 300-400 ರೂ.ಗಳ ಹೆಚ್‌ಡಿ ಪ್ಯಾಕ್ ಊರ್ಜಿತವಾಗಿರುತ್ತದೆ. ಮರುದಿನ ನಾವು ಕಾಲ್ ಸೆಂಟರ್‌ಗೆ ಕರೆ ಮಾಡಿದರೆ ಆತ ಹೇಳುತ್ತಾನೆ. ಈಗಾಗಲೇ ಚಾಲ್ತಿಯಾಗಿರುವ ಪ್ಯಾಕ್ ಬಗ್ಗೆ ನಾವೇನೂ ಮಾಡಲಾಗುವುದಿಲ್ಲ. ಬೇಕಿದ್ದರೆ ಇದನ್ನು ಸ್ಥಗಿತಗೊಳಿಸಿಕೊಡುತ್ತೇನೆ. ಈ ತರಹದ ಮೋಸವನ್ನು ಮೊಬೈಲ್ ಕಂಪನಿಗಳು, ಡಿಟಿಎಚ್ ಸೇವಾದಾತರು ಎಗ್ಗಿಲ್ಲದೆ ಮಾಡುತ್ತಿದ್ದಾರೆ. ದೂರಿಗೆ ಮೂರು ದಾರಿ!
ಜಾಹೀರಾತು ಎಂದರೆ ಒಂದು ಪ್ರಾಡಕ್ಟ್ ಕುರಿತು ಏನು ಬೇಕಾದರೂ ಸುಳ್ಳೂ ಹೇಳಬಹುದು ಎಂಬ ತೀರಾ ತಪ್ಪು ತಿಳುವಳಿಕೆ ಜನರಲ್ಲಿದೆ. ಇದೊಂದು ತರಹ ರಾಜಕಾರಣದಲ್ಲಿದ್ದವರಿಗೆ ಭ್ರಷ್ಟಾಚಾರ ಮಾಡಲು ಲೈಸೆನ್ಸ್ ಇದೆ ಎಂದಂತೆ! ಜಾಹೀರಾತುಗಳನ್ನು ಓದುವಾಗ, ನೋಡುವಾಗ ಗರಿಷ್ಠ ಗಮನ ಕೊಡಬೇಕು. ಷರತ್ತುಗಳನ್ನು ಓದುವಾಗಲಂತೂ ವಾಕ್ಯಗಳ ನಡುವಿನ ಒಳಾರ್ಥಕ್ಕೂ ಗಮನ ಕೊಡಬೇಕು. ಅಪ್ ಟು ಶೇ.80ರಷ್ಟು ಉಳಿತಾಯ ಎಂದಿದ್ದರೆ ಆ ಆಫರ್ ಕೈ ಕಚ್ಚುವ ಸಾಧ್ಯತೆ ಬಗ್ಗೆ ಹೆಚ್ಚು ಎಚ್ಚರ ಇರಬೇಕು. ಸುಳ್ಳು ಸುಳ್ಳು ಭರವಸೆಗಳನ್ನು ನೋಡಿಯೂ ಸುಮ್ಮನೆ ಕುಳಿತುಕೊಳ್ಳುವುದು ಜಾಗೃತ ಗ್ರಾಹಕರ ಲಕ್ಷಣವಲ್ಲ. ಅದನ್ನು ದೇಶದ ಸರ್ಕಾರ ಕೂಡ ಸಮ್ಮತಿಸುವುದಿಲ್ಲ. ಒಂದೊಮ್ಮೆ ಜಾಹೀರಾತು ನಮ್ಮನ್ನು ಹಾದಿ ತಪ್ಪಿಸುತ್ತಿದ್ದರೆ ಅದನ್ನು ದೂರಲು ಅಧಿಕೃತ ಅವಕಾಶವಿದೆ. www.ascionline.orgನಲ್ಲಿ ದೂರು ಸಲ್ಲಿಸಬಹುದು. ಈ ವೆಬ್ ಜಾಹೀರಾತುಗಳ ದೋಷ, ಮೋಸಗಳತ್ತ ವಿಶೇಷ ಮಾತಿಗಳನ್ನು ನೀಡುತ್ತದೆ. ಕೊಟ್ಟ ದೂರಿನ ಫಾಲೋಅಪ್‌ಗ್ೂ ಇಲ್ಲಿ ಅವಕಾಶದೆ. ಈಗ ವಾಟ್ಸ್‌ಆ್ಯಪ್ ದೂರಿಗೆ ಜಾಗವಿದೆ, ಎಎಸ್‌ಸಿಐನ +91 7710012345ಗೆ ದೂರು ಸಲ್ಲಿಸಬಹುದು. ಟ್ವಿಟ್ಟರ್ ಆದರೂ ಸರಿ,@aiceonline ಸಂಬಂಧವಾಗಿ ಒಂದು ಅಂಕಿಅಂಶವನ್ನು ಗಮನಿಸಬಹುದು. ಜನವರಿಯಲ್ಲಿ ಎಎಸ್‌ಸಿಐಗೆ 191 ದೂರುಗಳು ಬಂದಿವೆ. ಆ್ಯಪಲ್‌ನ ಐಫೋನ್, ಭಾರ್ತಿ ಏರ್‌ಟೆಲ್‌ನ ಫ್ರೀ ಡಾಟಾ, ಮೊಬಿಕ್‌ನ ಅತಿ ಸುರಕ್ಷಿತ ಹೇಳಿಕೆ, ಹೆಚ್‌ಯುಎಲ್‌ನ ರಿನ್ ಜಾಹೀರಾತು, ನೀವಿಯಾ, ಒಪೆರಾ ಬ್ರೌಸರ್ ಕಡಿಮೆ ಡಾಟಾ ಬಳಕೆ ಮೊದಲಾದ ಪ್ರತಿಷ್ಟಿತರು ಕೂಡ ದಾರಿತಪ್ಪಿಸುವ, ಅತಿರಂಜಿತ ಜಾಹೀರಾತು ನೀಡಿರುವ ಕುರಿತು ದೂರುಗಳಿವೆ. 102 ದೂರು ಆರೋಗ್ಯಕ್ಕೆ ಸಂಬಂಧಿಸಿದ ಹಾಗೂ 20 ಶಿಕ್ಷಣಕ್ಕೆ ಲಗತ್ತಾದ ದಾರಿ ತಪ್ಪಿಸುವ ದೂರುಗಳು ಎಂಬುದು ಸರ್ಕಾರ ಇನ್ನಷ್ಟು ಎಚ್ಚರಗೊಳ್ಳಬೇಕಾದ ಅಗತ್ಯವನ್ನು ಸಾರುತ್ತವೆ. ಆರು ದೂರು ವೈಯುಕ್ತಿಕ ಆರೈಕೆ ತಯಾರಿಕೆಗಳು, ಆರು ಸಿದ್ಧ ಆಹಾರ ಪ್ರಾಡಕ್ಟ್ ಹಾಗೂ ತಂಪು ಪಾನೀಯ ಕ್ಷೇತ್ರದ್ದು ಎಂಬುದು ಅಪಾಯವನ್ನು ದಟ್ಟವಾಗಿಸುತ್ತದೆ. ಪ್ರಜಾnವಂತರು “ಬ್ಯುಸಿ’ ಇದ್ದಾರೆ!
ಕಾನೂನುಗಳು ತೀವ್ರವಾಗಿ ಕೆಲಸ ಮಾಡುವುದಿಲ್ಲ ಎಂಬ ಆರೋಪ ಹಳೆಯದು. 99 ಅಪರಾಧಿ ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿ ಶಿಕ್ಷೆಗೊಳಗಾಗಬಾರದು ಎಂಬ ಪುಣ್ಯಕೋಟಿ ಹಸುವಿನ ನೀತಿ ನಮ್ಮದು. ಆದರೆ ಇತ್ತೀಚಿನ ದಿನಗಳಲ್ಲಿ ಲಂಚ ಇರಬಹುದು, ದಿಕ್ಕು ತಪ್ಪಿಸುವ ಜಾಹೀರಾತು ಇರಬಹುದು ಅಥವಾ ಬ್ಯಾಂಕ್, ಇನುÒರೆನ್ಸ್ ಕಂಪೆನಿ ಮೊದಲಾದವುಗಳ ವಂಚನೆ ಇರಬಹುದು…. ಸರ್ಕಾರದ ವ್ಯವಸ್ಥೆ ದೂರುಗಳನ್ನು ದಾಖಲಿಸಲು ಹಾಗೂ ಅದನ್ನು ಪ್ರಸರಿಸುವ ಮೂಲಕ ಹೆಚ್ಚು ಎಚ್ಚರಿಕೆಯಿಂದ ಸೇವಾದಾತರು ನಡೆದುಕೊಳ್ಳುವಂಥ ವಾತಾವರಣವನ್ನು ಸೃಷ್ಟಿಸಿದೆ. ದುರಂತವೆಂದರೆ, ಈ ದೇಶದ “ಪ್ರಜಾnವಂತ’ ಜನ ನೆಟ್ ಬಳಸುತ್ತಾರೆ, ಮೊಬೈಲ್ ಇಂಟರ್‌ನೆಟ್ ಬಳಸುತ್ತಾರೆ, ಸಾಮಾಜಿಕ ತಾಣಗಳಲ್ಲಿ ನಿರಂತರವಾಗಿ ಸಿಗುತ್ತಾರೆ. ಆದರೆ ನಮ್ಮ ಕೈಗೆ ಕೊಟ್ಟಿರುವ ಅಸ್ತ್ರಗಳನ್ನು ಬಳಸಿ ವ್ಯವಸ್ಥೆಯನ್ನು ನೇರ್ಪುಗೊಳಿಸುವ ಕುರಿತು ಆಸಕ್ತರಾಗುವುದಿಲ್ಲ. ಇದಕ್ಕೇನು ಮಾಡೋಣ? ಕೊನೆ ಮಾತು: ಜಾಹೀರಾತುಗಳು “ಷರತ್ತುಗಳು ಅನ್ವಯಿಸುವುದಿಲ್ಲ’ ಎಂದು ಘೋಷಿಸುವ ಪಾರದರ್ಶಕ ಕಾಲ ಬರಬೇಕು! – ಮಾ.ವೆಂ.ಸ.ಪ್ರಸಾದ್, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ