Advertisement

ಸಂತೆಗೆ ಷರತ್ತುಬದ್ಧ ಅನುಮತಿ

03:56 PM Apr 12, 2020 | mahesh |

ಮಂಡ್ಯ : ತಾಲೂಕಿನ ಬಸರಾಳು ಗ್ರಾಮದಲ್ಲಿ ಶನಿವಾರ ನಡೆಯುವ ಸಂತೆಗೆ ಸ್ಥಳೀಯ ಗ್ರಾಪಂ ಅಧಿಕಾರಿಗಳು ಷರತ್ತುಬದ್ಧ ಅವಕಾಶ ಕಲ್ಪಿಸಿದ್ದರು. ಸುತ್ತಮುತ್ತಲ ಹಳ್ಳಿಗಳಿಗೆ ಬಸರಾಳು ಕೇಂದ್ರ ಸ್ಥಾನವಾಗಿದ್ದು, ಪ್ರತಿ ಶನಿವಾರ ಗ್ರಾಮದಲ್ಲಿ ಸಂತೆ ನಡೆಯುತ್ತದೆ. ಸಂತೆಗೆ ಆಗಮಿಸುವ ಜನಸಾಮಾನ್ಯರು ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದರು. ಕಳೆದ ಎರಡು ವಾರಗಳಿಂದ ಸಂತೆ ನಡೆಯದೆ ಒಂದು ಕಡೆ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲಾಗದೇ ಪರಿತ ಪಿಸುತ್ತಿದ್ದರೆ, ಮತ್ತೂಂದು ಕಡೆ ಜನಸಾಮಾನ್ಯರು ಅಗತ್ಯ ವಸ್ತುಗಳನ್ನು ಖರೀದಿಸಲಾಗದೇ ತೊಂದರೆಗೆ ಸಿಲುಕಿದ್ದರು. ಇದನ್ನು ಮನಗಂಡ ಬಸರಾಳು ಗ್ರಾಪಂ ಪಿಡಿಒ ಚಂದ್ರಶೇಖರ್‌ ಗ್ರಾಮದ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಷರತ್ತುಬದ್ಧ ಸಂತೆ ನಡೆಸಲು ಅನುಮತಿ ನೀಡಿದರು.

Advertisement

ನಾಲ್ಕು ಗಂಟೆಗಳ ಕಾಲ ಸಂತೆಯಲ್ಲಿ ವ್ಯಾಪಾರ ವಹಿವಾಟು ನಡೆಯಿತು. ಬೆಳಗ್ಗೆ 6ರಿಂದ 10ರವರೆಗೆ ಸಂತೆಯಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿದರು. ಈ ವೇಳೆ ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಸ್ಪಂದಿಸಿದರು. ರೈತರು ತಮ್ಮ ಉತ್ಪನ್ನಗಳನ್ನು ಸಂತೆಯಲ್ಲಿ ಮಾರಾಟ ಮಾಡಿ ಬಂದ ಹಣದಲ್ಲಿ ತಮಗೆ ಅಗತ್ಯ ವಸ್ತುಗಳನ್ನು ಖರೀದಿಸಿ ಖುಷಿಯಿಂದ ಮನೆ ಕಡೆಗೆ ಸಾಗಿದರೆ, ಜನಸಾಮಾನ್ಯರು ಸಹ ತಮಗಿಷ್ಟವಾದ ವಸ್ತುಗಳನ್ನು ಖರೀದಿಸಿ ಸಂತಸದಿಂದ ಸಾಗುತ್ತಿದ್ದುದು ಕಂಡುಬಂದಿತು.

Advertisement

Udayavani is now on Telegram. Click here to join our channel and stay updated with the latest news.

Next