ಚಾಮರಾಜನಗರ: ಜಿಲ್ಲೆಯಲ್ಲಿ ಎಲ್ಲಾ ಹೋಟೆಲ್, ರೆಸ್ಟೋರೆಂಟ್, ಇತರೆ ಆತಿಥ್ಯ ವಲಯದಲ್ಲಿನ ಜಂಗಲ್ ಲಾಡ್ಜ್ಗಳು, ರೆಸಾರ್ಟ್ ಹಾಗೂ ಇದೇ ರೀತಿಯ ಅತಿಥ್ಯ ಸೇವೆ ಒದಗಿಸುವ ಖಾಸಗಿ ಸಂಸ್ಥೆಗಳು, ಸಫಾರಿಗಳು, ಚಾರಣಗಳು ಮತ್ತು ಇತರೆ ಚಟುವಟಿಕೆಗಳನ್ನು ಪುನರಾರಂಭ ಮಾಡಲು ಕೆಲ ಷರತ್ತುಗಳೊಂದಿಗೆ ಅನುಮತಿ ನೀಡಿ ಡೀಸಿ ಡಾ.ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ.
ಹೋಟೆಲ್, ರೆಸ್ಟೋರೆಂಟ್, ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್‌ಗಳು ಸೇರಿದಂತೆ ಅತಿಥ್ಯ ಸೇವೆ ಒದಗಿಸುವ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು, ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್, ಹ್ಯಾಂಡ್‌ಗ್ಲೌಸ್‌ಗಳನ್ನು ಧರಿಸಿರಬೇಕು. ಗ್ರಾಹಕರು, ಪ್ರವಾಸಿಗರ ಮಾಹಿತಿಗಾಗಿಫಲಕಗಳನ್ನು ಪ್ರದರ್ಶಿಸಬೇಕು. ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡಬೇಕು. ಪ್ರವೇಶ ದ್ವಾರ ದಲ್ಲಿ ಥರ್ಮಲ್ ಸ್ಕಾನರ್‌ನಿಂದ ಗ್ರಾಹಕರ, ಪ್ರವಾಸಿಗರ ತಪಾಸಣೆ ನಡೆಸಬೇಕು.
ಕೈಗಳನ್ನು ಸ್ವತ್ಛಗೊಳಿಸಿಕೊಳ್ಳಲು ಸ್ಯಾನಿಟೈಸರ್ ನೀಡುವ ವ್ಯವಸ್ಥೆ ಮಾಡಬೇಕು. ಬೆಳಗ್ಗೆ 6ರಿಂದ ರಾತ್ರಿ 8 ಗಂಟೆವರೆಗೆ ಮಾತ್ರ ಹೋಟೆಲ್, ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಿದೆ. ಕಡ್ಡಾಯ ವಾಗಿ ಟೋಕನ್ ಅಳವಡಿಸಿ ಕೊಳ್ಳಬೆಕು. ಶೇ.50ರಷ್ಟು ಗ್ರಾಹಕರಿಗೆ ಆಸನದ ವ್ಯವಸ್ಥೆ ಕಲ್ಪಿಸಬೇಕು. ಗ್ರಾಹಕರು ಹೆಚ್ಚಾದಲ್ಲಿ ಕಾಯ್ದಿರಿಸುವ ಕುರ್ಚಿಗಳ ವ್ಯವಸ್ಥೆ ಮಾಡಿ ಕೊಳ್ಳಬೇಕು. ಮಕ್ಕಳು, ವೃದಟಛಿರು, ಗರ್ಭಿಣಿಯರ ಪ್ರವೇಶ ನಿರ್ಬಂಧಿಸಿದ್ದು, ಪಾರ್ಸೆಲ್ ಮಾತ್ರ ನೀಡಲು ಅನುಮತಿ ನೀಡಲಾಗಿದೆ.
ಪ್ಲಾಸ್ಟಿಕ್ ಹೊರತುಪಡಿಸಿ ಬಿಸಾಡುವಂತಹ ತಟ್ಟೆ, ಲೋಟ ಬಳಸಬೇಕು. ಗ್ರಾಹಕರು, ಪ್ರವಾಸಿಗರು ಕಾರ್ಮಿಕರಿಗೆ ಜ್ವರ, ನೆಗಡಿ, ಕೆಮ್ಮು ಅಥವಾ ಕೊರೊನಾ ಲಕ್ಷಣ ಕಂಡುಬಂದಲ್ಲಿ ಹೋಟೆಲ್, ರೆಸ್ಟೋರೆಂಟ್‌ಗಳ ಪ್ರವೇಶ ನಿರ್ಬಂಧಿಸಿ, ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಅಥವಾ ಜಿಲ್ಲಾ ಕಂಟ್ರೋಲ್ ರೂಂ ನಂ: 1077 ಕ್ಕೆ ಮಾಹಿತಿ ನೀಡಬೇಕು. ಷರತ್ತುಗಳು ಉಲ್ಲಂಘ ನೆಯಾದಲ್ಲಿ ಸಂಬಂಧಪಟ್ಟವರ ವಿರುದಟಛಿ ಕ್ರಮ ಕೈಗೊಳ್ಳ ಲಾಗುವುದು ಎಂದು ಡೀಸಿ ಆದೇಶದಲ್ಲಿ ತಿಳಿಸಿದ್ದಾರೆ.
ಪ್ರವಾಸಿಗರಿಗೆ ಅವಕಾಶ: ಸಾಮಾಜಿಕ ಅಂತರವನ್ನು ಕಾಯ್ದಿರಿಸುವ ನಿಟ್ಟಿನಲ್ಲಿ ಸಫಾರಿ ವಾಹನಗಳಲ್ಲಿ ಶೇ.50ರಷ್ಟು ಪ್ರವಾಸಿಗರಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಸಫಾರಿ ವಾಹನಗಳನ್ನು ಪ್ರತಿ ಟ್ರಿಪ್ಪಿಗೂ ರಾಸಾಯನಿಕ ಸಿಂಪಡಿಸಬೇಕು. ಸಫಾರಿ ವಾಹನ ಪ್ರವೇಶದ್ವಾರದಲ್ಲಿ ಹ್ಯಾಂಡ್ ಸ್ಯಾನಿಟೈ ಸರ್‌ಗಳನ್ನು ಇಟ್ಟು ಪ್ರಯಾಣಿಕರು ಕೈ ಸ್ವತ್ಛಗೊಳಿಸಿದ ನಂತರ ವಾಹನಗಳನ್ನು ಹತ್ತಲು ಅನುವು ಮಾಡಿಕೊಡಬೇಕು ಎಂದು ಡೀಸಿ ಆದೇಶಿಸಿದ್ದಾರೆ.