Advertisement
ಪ್ರವಾಹದಿಂದ ಹಾನಿಗೊಳಗಾದ ಮುಧೋಳ ತಾಲೂಕಿನ ಒಂಟಗೋಡಿ ಶಾಲೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಇಂದು ಪ್ರಚಾರಕ್ಕೂ ಬರದೇ ಇರುವಂತಹ ದಯನೀಯ ಸ್ಥಿತಿಗೆ ಬಂದು ತಲುಪಿದೆ. ರಾಜ್ಯದಲ್ಲಿ, ದೇಶದಲ್ಲಿ ಉತ್ತಮ ವಿರೋಧ ಪಕ್ಷ ಇರಬೇಕು. ಅದನ್ನು ಉಳಿಸಿಕೊಳ್ಳುವುದು ಅವರಿಗೆ ಬಿಟ್ಟದ್ದು. ಮಹಾರಾಷ್ಟ್ರ, ಹರಿಯಾಣ ಚುನಾವಣೆ ಫಲಿತಾಂಶ ಕಾಂಗ್ರೆಸ್‌ಗೆ ಎಚ್ಚರಿಕೆಯ ಗಂಟೆಯಾಗಿದೆ. ಇನ್ನಾದರೂ ಅವರು ಎಚ್ಚೆತ್ತುಕೊಳ್ಳಬೇಕು ಎಂದರು.
ಒಂಟಗೋಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಳೆದ ಆಗಸ್ಟ್‌ನಲ್ಲಿ ಸುರಿದ ಮಳೆಯಿಂದ ಬಿರುಕುಬಿಟ್ಟು ಬೀಳುವ ಸ್ಥಿತಿ ತಲುಪಿದ್ದು, ಇಲ್ಲಿನ ಮಕ್ಕಳಿಗೆ ತಾತ್ಕಾಲಿಕ ಶೆಡ್‌ನಲ್ಲಿ ಪಾಠ ಮಾಡಲಾಗುತ್ತಿದೆ. ಈ ಸ್ಥಳಕ್ಕೆ ಡಿಸಿಎಂ ಗೋವಿಂದ ಕಾರಜೋಳ ಜತೆಗೆ ಭೇಟಿ ನೀಡಿದ ಸಚಿವ ಸುರೇಶಕುಮಾರ, ನೆಲದ ಮೇಲೆ ಮಕ್ಕಳನ್ನು ಕೂಡಿಸಿರುವುದು ಕಂಡು ಗರಂ ಆದರು. ಶೆಡ್ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಲು ಬೋರ್ಡ್ ಇಲ್ಲ. ದಾನಿಗಳು ನೀಡಿದ ಮ್ಯಾಟ್ ಮಕ್ಕಳು ಕುಳಿತಕೊಳ್ಳಲು ಹಾಕಿಲ್ಲ ಎಂದು ಮುಧೋಳ ಬಿಇಒ ವಿಠuಲ ಅವರನ್ನು ತರಾಟೆಗೆ ತೆಗೆದುಕೊಂಡರು.
Related Articles
ಒಂಟಗೋಡಿಯಲ್ಲಿ ಶೆಡ್‌ನಲ್ಲಿ ನಡೆಯುತ್ತಿರುವ ಶಾಲೆಗೆ ಭೇಟಿ ನೀಡಿದ ಶಿಕ್ಷಣ ಸಚಿವ ಸುರೇಶಕುಮಾರ, ಮಕ್ಕಳೊಂದಿಗೆ ಆತ್ಮೀಯವಾಗಿ ಬೆರೆತು ಅವರಿಂದ ಮಗ್ಗಿ ಹೇಳಿಸಿದರು. ಸಚಿವರು, ವಿದ್ಯಾರ್ಥಿಗಳತ್ತ ಬೊಟ್ಟು ಮಾಡಿ ನೀನು ಮಗ್ಗಿ ಹೇಳು ಎಂದು ಕೇಳುತ್ತಿದ್ದರು. ಈ ವೇಳೆ ಡಿಸಿಎಂ ಕಾರಜೋಳ ಸಹಿತ ಇದ್ದರು.
Advertisement