Advertisement

ತಹಶೀಲ್ದಾರ್‌ ಹತ್ಯೆಗೆ ಖಂಡನೆ

01:14 PM Jul 11, 2020 | Suhan S |

ಭದ್ರಾವತಿ: ಬಂಗಾರಪೇಟೆ ತಹಶೀಲ್ದಾರ್‌ ಬಿ.ಕೆ. ಚಂದ್ರಮೌಳೇಶ್ವರ ಅವರ ಹತ್ಯೆಯನ್ನು ರಾಜ್ಯ ಸರ್ಕಾರಿ ನೌಕರರ ಸಂಘ ಬಲವಾಗಿ ಖಂಡಿಸುತ್ತದೆ ಎಂದು ತಾಲೂಕು ಸಂಘದ ಅಧ್ಯಕ್ಷ ಎನ್‌. ಕೃಷ್ಣಪ್ಪ ಹೇಳಿದರು.

Advertisement

ತಹಶೀಲ್ದಾರ್‌ ಹತ್ಯೆ ಖಂಡಿಸಿ ಶುಕ್ರವಾರ ರಾಜ್ಯ ಸರ್ಕಾರಿ ನೌಕರರ ಸಂಘದ ಭದ್ರಾವತಿ ಶಾಖೆಯಿಂದ ಏರ್ಪಡಿಸಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಿನಿ ವಿಧಾನ ಸೌಧಕ್ಕೆ ತೆರಳಿ ತಹಶೀಲ್ದಾರ್‌ರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು. ಸರ್ಕಾರಿ ನೌಕರರಿಗೆ ಸರ್ಕಾರ ಸೂಕ್ತ ರಕ್ಷಣೆ ಒದಗಿಸಬೇಕು ಮತ್ತು ಕೊಲೆ ಮಾಡಿರುವ ಆರೋಪಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಹೇಳಿದರು.

ಸಂಘದ ಉಪಾಧ್ಯಕ್ಷೆ ಲೀಲಾವತಿ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಕರ್ತವ್ಯ ನಿರ್ವಹಣೆ ಕಾಲದಲ್ಲಿ ಕೆಲವರು ಕ್ಷುಲ್ಲಕವಾಗಿ ಮಾತನಾಡುವ ಸಂದರ್ಭಗಳನ್ನು ಕಾಣುತ್ತೇವೆ. ಸರ್ಕಾರಿ ನೌಕರರು ಉತ್ತಮ ವಾತಾವರಣದಲ್ಲಿ ಕಾರ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಬೇಕು ಎಂದರು. ತಹಶೀಲ್ದಾರ್‌ ಶಿವಕುಮಾರ್‌ ಮನವಿ ಸ್ವೀಕರಿಸಿ ಮಾತನಾಡಿ, ಬಂಗಾರಪೇಟೆಯ ಘಟನೆ ಖಂಡನೀಯ. ಈಗಾಗಲೇ ಆರೋಪಿಯನ್ನು ಬಂಧಿಸಿರುವುದಲ್ಲದೆ ಕೊಲೆಯಾದ ತಹಶೀಲ್ದಾರ್‌ ಚಂದ್ರಮೌಳಿ ಅವರ ಕುಟುಂಬಕ್ಕ 25 ಲಕ್ಷ ಪರಿಹಾರ ಸರ್ಕಾರ ಘೋಷಿಸಿದೆ. ಸಂಘವು ನೀಡಿರುವ ಮನವಿಯನ್ನು ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸುವುದಾಗಿ ಹೇಳಿದರು.

ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ಚಂದ್ರಪ್ಪ, ರಾಜ್ಯ ಪರಿಷತ್‌ ಸದಸ್ಯ ಸಿದ್ದಬಸಪ್ಪ, ಖಜಾಂಚಿ ರಾಜಪ್ಪ, ಕಾರ್ಯದರ್ಶಿ ರಂಗನಾಥ ಪ್ರಸಾದ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next