Advertisement

ಪ್ರಾಥಮಿಕ ಶಾಲಾ ಶಿಕ್ಷಕರ ಹಿಂಬಡ್ತಿ ಕ್ರಮಕ್ಕೆ ಖಂಡನೆ

01:02 PM Jun 30, 2019 | Team Udayavani |

ಕೋಲಾರ: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರಾಜ್ಯ ಸರ್ಕಾರ ನೀಡಿರುವ ಹಿಂಬಡ್ತಿಯ ಕ್ರಮ ಖಂಡಿಸಿ, ಇಲ್ಲಿನ ಡಿಡಿಪಿಐ ಕಚೇರಿ ಮುಂದೆ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಜಿಲ್ಲಾ ಮತ್ತು ತಾಲೂಕು ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ರವಿಕುಮಾರ್‌ ಮಾತನಾಡಿ, ರಾಜ್ಯ ಸರ್ಕಾರ ಹೊಸ ವೃಂದ ಮತ್ತು ವೃಂದಬಲ ನಿರ್ಧರಿಸುವ ಆದೇಶವನ್ನು ಕಳೆದ 2017ರ ಮೇ 19 ರಂದು ರಾಜ್ಯ ಪತ್ರಕ್ಕೆ ತಿದ್ದುಪಡಿ ಮಾಡಿ ಒಂದರಿಂದ 5ನೇ ತರಗತಿಯ ವೃಂದಕ್ಕೆ ಹಿಂಬಡ್ತಿ ಹೊಂದಿರುವ ಪದವೀಧರ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೃದಂಕ್ಕೆ ವಿಲೀನ ಮಾಡಿ ಮುಂದಿನ ಬಡ್ತಿಗಳಿಗೆ ಸೇವಾ ಜೇಷ್ಠತೆ ಕಾಪಾಡುವಂತಾಗಬೇಕು ಎಂದು ಒತ್ತಾಯಿಸಿದರು.

ವಿಷಯವಾರು ಹುದ್ದೆ ಸೃಷ್ಟಿಸಿ: ಪ್ರಸ್ತುತ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಯಲ್ಲಿ ಜಿಪಿಟಿ ಶಿಕ್ಷಕರ ಖಾಲಿ ಹುದ್ದೆಗಳಿಗೆ ಅವಕಾಶವನ್ನು ನೀಡಿ ವಿಷಯವಾರು ಹುದ್ದೆಗಳನ್ನು ಸೃಷ್ಟಿಸಬೇಕಾಗಿದೆ ಎಂದು ಆಗ್ರಹಿಸಿದರು.

ಪದವೀಧರ ಶಿಕ್ಷಕರಿಗೆ ಮಾರಕ: ಒಂದನೇ ತರಗತಿಯಿಂದ 7ನೇ ತರಗತಿಗಳಿಗೆ ನೇಮಕಾತಿಯಾದ ಶಿಕ್ಷಕರಲ್ಲಿ ಪದವಿ ವಿದ್ಯಾರ್ಹತೆ ಮತ್ತು ಸೇವಾನುಭವ ಹೊಂದಿರುವ ಪದವೀಧರ ಸೇವಾನಿರತ ಶಿಕ್ಷಕರರೆಲ್ಲರನ್ನು ಒಂದರಿಂದ 5ನೇ ತರಗತಿಯ ವೃಂದಕ್ಕೆ ಹಿಂಬಡ್ತಿಯನ್ನು ನೀಡಲಾಗಿದೆ ಎಂದು ದೂರಿದರು.

ಸೇವಾ ಅನುಭವಕ್ಕೆ ಬೇಲೆಯೇ ಇಲ್ಲ: ಒಂದೇ ತರಗತಿಯಿಂದ ಐದನೇ ತರಗತಿ ವೃಂದದ ಶಿಕ್ಷಕರಿಗೆ 6ನೇ ತರಗತಿಯಿಂದ 8ನೇ ತರಗತಿಯ ವೃಂದಕ್ಕೆ ಬಡ್ತಿ ಪ್ರಮಾಣ ಶೇ.25 ನಿಗದಿಪಡಿಸಿ ಸಾಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ ನೀಡಲು ಸೂಚಿಸಲಾಗಿರುವ ರಾಜ್ಯ ಸರ್ಕಾರದ ಕ್ರಮದಿಂದ ನಮ್ಮ ಸೇವಾನುಭವಕ್ಕೆ ಯಾವುದೇ ಬೆಲೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಮುನಿರಾಜು, ಉಪಾಧ್ಯಕ್ಷ ರಘುನಾಥರೆಡ್ಡಿ, ಖಜಾಂಚಿ ಎಂ.ಎಸ್‌.ರವಿಪ್ರಕಾಶ್‌, ಸಹ ಕಾರ್ಯದರ್ಶಿ ಸುಬ್ರಮಣಿ, ತಾಲೂಕು ಅಧ್ಯಕ್ಷರಾದ ಭಾಸ್ಕರ್‌ರೆಡ್ಡಿ, ಚನ್ನಪ್ಪ, ಶಿವರಾಜ್‌, ವೇಣುಗೋಪಾಲ್, ವೆಂಕಟಾಚಲಪತಿ, ಶ್ರೀನಿವಾಸ್‌ಮೂರ್ತಿ, ಶಿಕ್ಷಕರಾದ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಿ.ಬಾಬು, ರವಿಕುಮಾರ್‌, ಮುನಿಸ್ವಾಮಿರೆಡ್ಡಿ, ಪಾಪಣ್ಣ, ಬೈರೇಗೌಡ, ಸುಬ್ರಮಣಿ, ಮುರಳಿ, ತ್ರಿವೇಣಿ, ಅನಂದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next