ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಭಯೋತ್ಪಾ ದನೆಯ ಸ್ವಾತಂತ್ರ್ಯ ಎಂದು ಭಾವಿಸಬೇಡಿ. ಕೆನಡಾದಲ್ಲಿರುವ ಹಿಂದೂಗಳ ಮೇಲೆ ಅಷ್ಟೊಂದು ದ್ವೇಷ ಅಪರಾಧಗಳು ನಡೆ ಯು ತ್ತಿದ್ದರೂ ಮೌನ ವಹಿಸಿದರೆ ದುಷ್ಕ ರ್ಮಿ ಗಳಿಗೆ ಪರೋಕ್ಷ ಬೆಂಬಲ ನೀಡಿದಂತೆ ಎಂಬುದನ್ನು ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡೊ ಅರ್ಥ ಮಾಡಿಕೊಳ್ಳಬೇಕು. ಖಲಿ ಸ್ಥಾನಿ ಉಗ್ರರ ವಿರುದ್ಧ ಕಠಿನ ಕ್ರಮ ಕೈಗೊಳ್ಳ ಬೇಕು ಎಂದು ಭಾರತೀಯ-ಅಮೆರಿಕನ್ ಗಣ್ಯರ ಗುಂಪೊಂದು ಆಗ್ರಹಿಸಿದೆ.
Advertisement
ತನಿಖೆಗೆ ಸಹಕರಿಸಿ ಎಂದ ಅಮೆರಿಕ: ಈ ನಡುವೆ ವಿದೇಶಾಂಗ ಸಚಿವ ಜೈಶಂಕರ್ ಅವರು ಗುರುವಾರ ರಾತ್ರಿ ಅಮೆರಿಕ ವಿದೇ ಶಾಂಗ ಸಚಿವ ಬ್ಲಿಂಕನ್‌ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ, ಖಲಿಸ್ಥಾನಿ ಉಗ್ರ ನಿಜ್ಜರ್ ಹತ್ಯೆ ಸಂಬಂಧ ಕೆನಡಾ ನಡೆಸುತ್ತಿರುವ ತನಿಖೆಯಲ್ಲಿ ಸಂಪೂರ್ಣ ಸಹಕಾರ ನೀಡುವಂತೆ ಭಾರ ತಕ್ಕೆ ಬ್ಲಿಂಕನ್ ಮನವಿ ಮಾಡಿದ್ದಾರೆ ಎಂದು ಅಲ್ಲಿನ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೇ ವೇಳೆ ಬ್ಲಿಂಕನ್ ಭೇಟಿ ವೇಳೆ ಕೆನಡಾ ಕುರಿತು ಚರ್ಚೆಯಾಯಿತೇ ಎಂಬ ಪ್ರಶ್ನೆಗೆ ಜೈಶಂಕರ್ ಅವರು “ಹೌದು’ ಎಂದು ಉತ್ತರಿಸಿದ್ದಾರೆ. ಈ ಮಧ್ಯೆ, ಕೆನಡಾ ಪ್ರಧಾನಿ ಟ್ರಾಡೊ ಭಾರತದೊಂದಿಗೆ ಉತ್ತಮ ಬಾಂಧವ್ಯ ವನ್ನು ನಾವು ಬಯಸುತ್ತೇವೆ. ಆದರೆ ನಿಜ್ಜರ್ ಹತ್ಯೆಯ ಸತ್ಯಾಂಶ ಹೊರಬರಲು ನಮ್ಮೊಂದಿಗೆ ಭಾರತ ಕೈಜೋಡಿಸಲಿ ಎಂದು ಹೇಳಿದ್ದಾರೆ.
ಅಕ್ಟೋಬರ್ 5ರಿಂದ ಭಾರತದಲ್ಲಿ ನಡೆಯಲಿರುವ “ಕ್ರಿಕೆಟ್ ವಿಶ್ವಕಪ್’ ಅನ್ನು “ವಿಶ್ವ ಭಯೋತ್ಪಾದನ ಕಪ್’ ಆಗಿ ಬದಲಿಸುವುದಾಗಿ ನಿಷೇಧಿತ ಸಿಕ್ಖ್$Õ ಫಾರ್ ಜಸ್ಟಿಸ್ ಮುಖ್ಯಸ್ಥ, ಖಲಿಸ್ಥಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನೂನ್ ಬೆದರಿಕೆ ಹಾಕಿದ್ದಾನೆ. ಇದರ ಬೆನ್ನಲ್ಲೇ ಗುಜರಾತ್‌ನಲ್ಲಿ ಈತನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.