Advertisement

ಅಸಮರ್ಪಕ ಪರಿಹಾರ ಕಿಟ್ ವಿತರಣೆಗೆ ಖಂಡನೆ

10:36 AM Aug 28, 2019 | Team Udayavani |

ಅಮೀನಗಡ: ನೆರೆ ಸಂತ್ರಸ್ತರಿಗೆ ಅಸಮರ್ಪಕವಾಗಿ ಪರಿಹಾರ ಕಿಟ್ ವಿತರಣೆ ಆರೋಪಿಸಿ 30ಕ್ಕೂ ಹೆಚ್ಚು ನೆರೆ ಸಂತ್ರಸ್ತ ಕುಟುಂಬದವರು ಐಹೊಳೆ ಗ್ರಾಪಂ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ಮಲಪ್ರಭಾ ನದಿಯ ಭೀಕರ ಪ್ರವಾಹದಿಂದ ಐತಿಹಾಸಿಕ ಪ್ರವಾಸಿ ಕೇಂದ್ರ ಐಹೊಳೆ ಗ್ರಾಮದಲ್ಲಿ 200ಕ್ಕೂ ಹೆಚ್ಚು ಮನೆಗಳು ನೀರಿನಿಂದ ಜಲಾವೃತಗೊಂಡ ಹಿನ್ನೆಯಲ್ಲಿ 200ಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟದಲ್ಲಿದ್ದಾರೆ. ಆದರೆ ಸರ್ಕಾರದಿಂದ 160 ಕುಟುಂಬಗಳಿಗೆ ಮಾತ್ರ 10ಸಾವಿರ ರೂ. ಪರಿಹಾರ ಹಣ ಮತ್ತು ಪರಿಹಾರ ಕಿಟ್ ಮಾತ್ರ ಬಂದಿದೆ. 30ಕ್ಕೂ ಹೆಚ್ಚು ಸಂತ್ರಸ್ತರ ಕುಟುಂಬಗಳಿಗೆ ಪರಿಹಾರ ಬಂದಿಲ್ಲ ಇದರಿಂದ ಆಕ್ರೋಶಗೊಂಡ ಸಂತ್ರಸ್ತರು ಅಧಿಕಾರಿಗಳು ಸರ್ವೆ ಕಾರ್ಯ ಮಾಡಿಲ್ಲ ಮತ್ತು ಕಿಟ್ ವಿತರಣೆಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯತನದಿಂದ 30 ಕ್ಕೂ ಹೆಚ್ಚು ಮನೆಗಳಿಗೆ ಪರಿಹಾರ ಧನ ಜಮೆ ಆಗಿಲ್ಲ. ಪರಿಹಾರದ ಕಿಟ್ ಕೂಡಾ ಬಂದಿಲ್ಲ. ಆದ್ದರಿಂದ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡದೆ ಎಲ್ಲ ಸಂತ್ರಸ್ತರಿಗೆ ಪರಿಹಾರ ಕಿಟ್ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ನಿರತ ಸಣ್ಣಹನಮಂತ ಮಡಿಕಾರ ಮಾತನಾಡಿ, ಪರಿಹಾರ ಕೇಂದ್ರದಲ್ಲಿದ್ದ ಕುಟುಂಬಗಳಿಗೆ ಮಾತ್ರ ಪರಿಹಾರ ಹಣ ಮತ್ತು ಕಿಟ್ ಬಂದಿದೆ. ಅಧಿಕಾರಿಗಳು ಗ್ರಾಮದಲ್ಲಿ ಸರಿಯಾಗಿ ಸರ್ವೇ ಮಾಡದೆ ನಿರ್ಲಕ್ಯ ಮಾಡಿದ್ದಾರೆ. ಗ್ರಾಮದಲ್ಲಿ ಪ್ರವಾಹದಿಂದ ಸಂಕಷ್ಟದಲ್ಲಿರುವ ಕುಟುಂಬಗಳ ಸರ್ವೇ ಮಾಡಿ ಎಂದು ಹೇಳಿದರು ಕೂಡಾ ಪರಿಹಾರ ಕೇಂದ್ರದಲ್ಲಿದ್ದವರಿಗೆ ಮಾತ್ರ ಕಿಟ್ ನೀಡುತ್ತೇವೆ ಎಂದು ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಇದರಿಂದ 30ಕ್ಕೂ ಹೆಚ್ಚು ಕುಟುಂಬಗಳಿಗೆ 10 ಸಾವಿರ ರೂ. ಪರಿಹಾರ ಹಣ ಮತ್ತು ಕಿಟ್ ಬಂದಿಲ್ಲ. ಅಧಿಕಾರಿಗಳು ಕೂಡಲೇ ಸರ್ವೇ ಕಾರ್ಯ ಮಾಡಿ ಅರ್ಹ ಸಂತ್ರಸ್ತರಿಗೆ ಕಿಟ್ ವಿತರಣೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಎಸ್‌.ಎಸ್‌. ಮಡಿಕಾರ, ಶ್ಯಾಮಪ್ಪ ಕೊಂತ, ನಾಗಪ್ಪ ಕುಂಬಾರ, ಬಸವರಾಜ ಮ್ಯಾಗೋಟಿ, ಕಾಳಪ್ಪ ಪತ್ತಾರ, ನರಸಪ್ಪ ಪತ್ತಾರ, ಬಸವರಾಜ ಸಾಲಿಮಠ, ಯಮನಪ್ಪ ಮಡಿಕಾರ, ಸೋಮಯ್ಯ ಶಿವಮೂರ್ತಿ ಮಠ, ನೀಲಪ್ಪ ಹನಮಪ್ಪ ಚಿಮ್ಮಲಗಿ, ಪ್ರಭು ಮಡಿವಾಳರ, ಚೆನ್ನಬಸಪ್ಪ ಹಂಡಿ, ವಿಠuಲ ಕೊಂತ, ಮೌನೇಶ ಬಡಿಗೇರ, ನಿಂಗಪ್ಪ ಜಡಿ, ಗ್ಯಾನಪ್ಪ ಮಡಿಕಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next