Advertisement

ತಹಶೀಲ್ದಾರ್‌ ಮೇಲಿನ ಹಲ್ಲೆಗೆ ಖಂಡನೆ

12:32 PM Feb 06, 2022 | Shwetha M |

ವಿಜಯಪುರ: ಹುಮನಾಬಾದ ತಹಶೀಲ್ದಾರ್‌ ಡಾ| ಪ್ರದೀಪ ಹಿರೇಮಠ ಅವರ ಮೇಲೆ ನಡೆದ ಹಲ್ಲೆ ಘಟನೆ ಖಂಡಿಸಿ ಬಬಲೇಶ್ವರ ತಾಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಶನಿವಾರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

Advertisement

ಈ ವೇಳೆ ಬಬಲೇಶ್ವರ ತಾಲೂಕಿನ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎ.ಎಂ.ಬೂದಿಹಾಳ ಮಾತನಾಡಿ, ರಾಜ್ಯದಲ್ಲಿ ಇತ್ತೀಚೆಗೆ ಸರ್ಕಾರಿ ಅಧಿಕಾರಿ ಹಾಗೂ ನೌಕರರ ಮೇಲೆ ಹಲ್ಲೆ, ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದು, ಸೂಕ್ತ ರಕ್ಷಣೆ ಇಲ್ಲದೆ ಆತಂಕದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸುತ್ತಿರುವ ಪರಿಸ್ಥಿತಿ ಉದ್ಭವಿಸಿದೆ ಎಂದರು.

ತಹಶೀಲ್ದಾರ್‌ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಕರ್ತವ್ಯನಿರತ ಅಧಿಕಾರಿಗಳು ಹಾಗೂ ನೌಕರರಿಗೆ ರಕ್ಷಣೆ ನೀಡಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕೆಂದು ನೌಕರರ ಸಂಘ ಮನವಿ ಮಾಡಿದೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ವಿ.ಜಿ.ದೇಸಾಯಿ, ಎಚ್‌.ಎ.ಮುಲ್ಲಾ, ಎಲ್‌ .ಜಿ.ಕೊರಬು, ಎಲ್‌.ಆರ್‌.ಮನಗೂಳಿ, ಹರೀಶ ಬಬಲೇಶ್ವರ, ರವಿ ಬಡಿಗೇರ, ಎಸ್‌.ಜಿ.ಗಂಗನಗೌಡರ, ಬಿ.ಎಸ್‌.ಕೋಟ್ಯಾಳ, ಎ.ಎ.ಗುಂದಗಿ, ಎನ್‌.ಪಿ.ನಾಗಠಾಣ, ಬಸವರಾಜ ಕಬಾಡೆ, ಜಿ.ಎಸ್‌. ಕುಲಕರ್ಣಿ, ಜಿ.ಎಸ್‌.ನಿಂಬಾಳಕರ, ಶಂಕರ ತಳವಾರ, ಡಾ| ಅಶೋಕ ಜಂಗಮಶೆಟ್ಟಿ, ಎಸ್‌.ಬಿ.ಹಲಸಗಿ, ಸಿದರಾಯ ಅಥಣಿ, ಅಶೋಕ ಕಾಗವಾಡ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next