Advertisement

ವಕೀಲರ ಮೇಲೆ ಹಲ್ಲೆಗೆ ಖಂಡನೆ

06:16 PM Nov 05, 2019 | Team Udayavani |

ಮಾಲೂರು: ಪೊಲೀಸರು ಪದೇಪದೆ ವಕೀಲರ ಮೇಲೆ ಹಲ್ಲೆ ನಡೆಸುತ್ತಿರುವ ಜೊತೆಗೆ ನ್ಯಾಯಾಂಗ ಇಲಾಖೆಯ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ ದೂರಿದರು.

Advertisement

ಪಟ್ಟಣದ ಕೋರ್ಟ್‌ ಸಂಕೀರ್ಣದಲ್ಲಿನ ವಕೀಲರ ಸಂಘದ ಕಚೇರಿಯಲ್ಲಿ ಸಭೆ ನಡೆಸಿದ ನಂತರ ನವದೆಹಲಿ ಪೊಲೀಸರು ವಕೀಲರ ಮೇಲೆ ನಡೆಸಿರುವ ಹಲ್ಲೆ ಖಂಡಿಸಿ, ಸೋಮವಾರದ ಕೋರ್ಟ್‌ ಕಲಾಪ ಬಷ್ಕರಿಸಿ, ಆವರಣದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದರು. ಮಹಾನಗರ ಬೆಂಗಳೂರು ಸೇರಿ ದೇಶದ ಹಲವು ಕಡೆಗಳಲ್ಲಿ ಪೊಲೀಸರು ವಕೀಲರ ಮೇಲೆ ವಿನಾಕಾರಣ ಹಲ್ಲೆ ನಡೆಸುತ್ತಿದ್ದು, ಇಂತಹ ಘಟನೆಗಳಿಂದ ಪೊಲೀಸ್‌ ಮತ್ತು ನ್ಯಾಯಾಂಗ ಇಲಾಖೆಗಳ ಮೇಲೆ ವಿಶ್ವಾಸ ಕಡಿಮೆಯಾಗುವಸಾಧ್ಯತೆ ಹೆಚ್ಚಿದೆ.

ಹಲ್ಲೆ ಪ್ರಕರಣಗಳು ಮತ್ತೆ ನಡೆಯದಂತೆ ಎಚ್ಚರವಹಿಸ ಬೇಕಾಗಿದೆ ಎಂದು ಹೇಳಿದರು. ಕಾನೂನು ಪಾಲಿಸುವ ಪೊಲೀಸರು ಮತ್ತು ವಕೀಲರು ಜಗಳ ಮಾಡುವುದರಿಂದ ಸಾರ್ವಜನಿಕರಲ್ಲಿ ಕಾನೂನಿನ ಮೇಲಿರುವ ಗೌರವ ಕಡಿಮೆಯಾಗಲಿದೆ. ಇಂತಹ ಘಟನೆಗಳನ್ನು ಖಂಡಿಸಿ ಮಾಲೂರು ತಾಲೂಕು ವಕೀಲರ ಸಂಘ ಇಂದಿನ ಕೋರ್ಟ್‌ ಕಲಾಪ ಬಹಿಷ್ಕರಿಸುತ್ತಿದೆ ಎಂದರು. ವಕೀಲರ ಸಂಘದ ಉಪಾಧ್ಯಕ್ಷ ಅಮರನಾರಾಯಣ್‌, ಕಾರ್ಯದರ್ಶಿ ಅಶ್ವತ್ಥ್ನಾರಾಯಣ್‌, ಸಾಗರ್‌ಗೌಡ, ಜಗನ್ನಾಥ್‌ ಮತ್ತಿತರರು ಇದೇವೇಳೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next