Advertisement

ಪೊಲೀಸ್‌ ಹೇಳಿಕೆಗೆ ಖಂಡನೆ

11:26 PM Dec 20, 2019 | Lakshmi GovindaRaj |

ಬೆಂಗಳೂರು: ಮಂಗಳೂರಿನಲ್ಲಿ ಪ್ರತಿಭಟನೆ ವೇಳೆ “ಫೈರ್‌ ಮಾಡಿದೆವು, ಒಂದು ಗುಂಡೂ ಬೀಳ್ಳಿಲ್ವಲ್ಲ, ಒಬ್ಬರೂ ಸಾಯಲಿಲ್ವಲ್ಲ.. ‘ ಎಂದು ಹೋರಾಟಗಾರರನ್ನು ಕೊಂದ ಪೊಲೀಸ್‌ ಅಧಿಕಾರಿಯೊಬ್ಬರ ಮಾತು ಸರ್ಕಾರವೇ ಮುಂದೆ ನಿಂತು ಪ್ರತಿಭಟನಾಕಾರರನ್ನು ಕೊಂದಿದೆ ಎಂಬುದಕ್ಕೆ ಸಾಕ್ಷಿ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರ ಸ್ವಾಮಿ ಆರೋಪಿಸಿದ್ದಾರೆ.

Advertisement

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಪೊಲೀಸ್‌ ಅಧಿಕಾರಿ ಆಡಿರುವ ಮಾತುಗಳ ವಿಡಿಯೋ ಎಲ್ಲೆಡೆ ವೈರಲ್‌ ಆಗಿದ್ದು, ಇದರ ಹೊಣೆ ಮುಖ್ಯಮಂತ್ರಿ ಹೊರಬೇಕೆಂದು ಆಗ್ರಹಿಸಿದ್ದಾರೆ. ಹಿಂದಿನ ಸರ್ಕಾರದಲ್ಲಿ ರೈತರನ್ನು ಕೊಂದ, ಈ ಬಾರಿ ಅಮಾಯಕ ಹೋರಾಟಗಾರ ರನ್ನು ಕೊಂದ ಯಡಿಯೂರಪ್ಪ ನೈತಿಕ ಹೊಣೆಗಾರಿಕೆ ಆರಿತು ಈ ಕೂಡಲೇ ಮೃತ ಹೋರಾಟಗಾರರ ಕುಟುಂಬಗಳ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next