Advertisement
ಅಂಪಾರು – ಶಂಕರನಾರಾಯಣ ರಾಜ್ಯ ಹೆದ್ದಾರಿಯಿಂದ ಒಳಗೆ ಸುಮಾರು 2 ಕಿ.ಮೀ. ದೂರದಲ್ಲಿ ಈ ದೇವಸ್ಥಾನ ವಿದೆ. ಸುಮಾರು 2 ಕಿ.ಮೀ. ದೂರದವರೆಗೆ ಮಣ್ಣಿನ ರಸ್ತೆ ಯಾಗಿಯೇ ಇದ್ದು, ಜನ ಬೇಸಗೆಯಲ್ಲಿ ಧೂಳಿನಿಂದ ಹಾಗೂ ಮಳೆಗಾಲದಲ್ಲಿ ಕೆಸರುಮಯಯಿಂದಾಗಿ ತೊಂದರೆ ಅನುಭವಿಸುತ್ತಿದ್ದರು. ಈಗ ‘ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ಅಭಿವೃದ್ಧಿಯಾಗಿದ್ದು, ದೇಗುಲಕ್ಕೆ ಬರುವ ಭಕ್ತರು, ಸ್ಥಳೀಯ ಜನರಿಗೆ ಅನುಕೂಲವಾಗಲಿದೆ.
Related Articles
Advertisement
ನುಕ್ಯಾಡಿ ಶ್ರೀ ಸಿದ್ಧಿ ವಿನಾಯಕ ದೇಗುಲವನ್ನು ಸಂಪರ್ಕಿಸುವ ರಸ್ತೆ ಕಾಂಕ್ರೀಟ್ ಕಾಮಗಾರಿ ಬೇಡಿಕೆ ಬಗ್ಗೆ ‘ಉದಯವಾಣಿ ಸುದಿನ’ವು ಕಳೆದ ವರ್ಷದ ಜ. 30ರಂದು ‘ನುಕ್ಯಾಡಿ ದೇಗುಲ: ಸಂಪರ್ಕ ರಸ್ತೆ ಅಭಿವೃದ್ಧಿ ಬೇಡಿಕೆ’ ಎನ್ನುವುದಾಗಿ ವಿಶೇಷ ವರದಿ ಪ್ರಕಟಿಸಿತ್ತು.
ಈಶ್ವರಪ್ಪರಿಂದ ಅನುದಾನ
ನುಕ್ಯಾಡಿಯ ಉದ್ಭವ ಶ್ರೀ ಸಿದ್ಧಿ ವಿನಾಯಕ ದೇಗುಲಕ್ಕೆ ಕಳೆದ ವರ್ಷದ ಜನವರಿಯಲ್ಲಿ ಆಗ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿದ್ದರು. ಈ ವೇಳೆ ರಸ್ತೆ ಅಭಿವೃದ್ಧಿ ಬಗ್ಗೆ ದೇವಸ್ಥಾನ ಹಾಗೂ ಊರವರಿಂದ ಮನವಿ ಸಲ್ಲಿಸಲಾಗಿತ್ತು. ಆಗ ಮಾಡಿಕೊಡುವ ಭರವಸೆ ನೀಡಿದ್ದರು. ‘ನಮ್ಮ ಗ್ರಾಮ ನಮ್ಮ ರಸ್ತೆ’ಯಡಿ 2.5 ಕೋ.ರೂ. ಅನುದಾನವನ್ನು ಮಂಜೂರು ಮಾಡಿದ್ದರು. ದೇವಸ್ಥಾನದ ಆಡಳಿತ ಮಂಡಳಿ, ಅರ್ಚಕ ವೃಂದ, ಭಕ್ತರು ಮಾಜಿ ಸಚಿವ ಈಶ್ವರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇದಕ್ಕೂ ಹಿಂದೆ 2012ರಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮುತುವರ್ಜಿಯಲ್ಲಿ ಸುಮಾರು 500 ಮೀ. ದೂರದವರೆಗೆ ಡಾಮರು ಕಾಮಗಾರಿಯಾಗಿತ್ತು.