Advertisement

ಕೋಟೆ: ಕಾಮಗಾರಿ ನಡೆದು 2 ತಿಂಗಳಲ್ಲಿ ಕುಸಿದ ಚರಂಡಿ ಸ್ಲ್ಯಾಬ್

02:53 AM Mar 13, 2021 | Team Udayavani |

ಕಟಪಾಡಿ: ಕೋಟೆ ಗ್ರಾ.ಪಂ. ವ್ಯಾಪ್ತಿಯ ಕೋಟೆ ಬೀಡುವಿನಿಂದ ಶ್ರೀ ದುರ್ಗಾಪರಮೇಶ್ವರೀ ಗುಡಿ ವರೆಗಿನ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ನಡೆದು 2 ತಿಂಗಳೊಳಗಾಗಿ ಚರಂಡಿ ಸ್ಲ್ಯಾಬ್‌ ಮುರಿದಿದ್ದು, ಕೆಲವು ಸ್ಲಾ Âಬ್‌ಗಳು ಬಿರುಕು ಬಿಟ್ಟಿವೆ. ಇದು ಕಾಮಗಾರಿ ಬಗ್ಗೆ ಸಾರ್ವಜನಿಕರ ಸಂಶಯವನ್ನು ನಿಜವನ್ನಾಗಿಸಿದೆ.

Advertisement

10 ಲಕ್ಷ ರೂ. ಅನುದಾನದ ಕಾಮಗಾರಿ
10 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡ ರಸ್ತೆ ಸಹಿತ ಚರಂಡಿ ನಿರ್ಮಾಣದ ಈ ಕಾಮಗಾರಿಯ ಗುಣಮಟ್ಟದ ಕೊರತೆಯಿಂದ ಸ್ಲ್ಯಾಬ್ ಮುರಿತ ಕ್ಕೊಳಗಾಗಿದ್ದು, ಕಬ್ಬಿಣದ ಸರಳು ಗಳು ಕಾಣುತ್ತಿವೆ. ಕೆಲವು ಸ್ಲ್ಯಾಬ್ ಬಿರುಕು ಬಿಟ್ಟಿವೆ. ಕುಸಿತವಾಗುವ ಭೀತಿ ಇರು ವುದರಿಂದ ನಡೆದಾಡಲೂ ಭಯವಾಗು ತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಲೋಕೋಪಯೋಗಿ ಇಲಾಖೆ ಯಡಿ ಈ ಕಾಮಗಾರಿಯನ್ನು ನಿರ್ವ ಹಿಸಲಾಗಿದ್ದು ಗುತ್ತಿಗೆದಾರರಿಂದ ಕಳಪೆ ಕಾಮಗಾರಿ ನಡೆದಿದೆ ಎನ್ನಲಾಗಿದೆ. ಡಾಮರು ರಸ್ತೆಯಲ್ಲಿನ ಬಿರುಕು, ಗುಣಮಟ್ಟದ ಕೊರತೆಯ ಬಗ್ಗೆ ಉದ¿åವಾಣಿಯು ಜ. 15ರಂದು ವರದಿ ಪ್ರಕಟಿಸಿತ್ತು. ಬಳಿಕ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಕಾಮಗಾರಿ ನಡೆದಿದ್ದರೂ, ಸಾರ್ವಜನಿಕರ ಸಂಶಯ ನಿವಾರಣೆಯಾಗಿಲ್ಲ.

ಕೂಡಲೇ ಪರಿಶೀಲನೆ
ಪರಿಶೀಲನೆ ನಡೆಸಿ ಕಾಮಗಾರಿ ಸುಸ್ಥಿತಿಗೆ ತರಲಾಗುತ್ತದೆ. ಅಗಲ ಕಿರಿದಾದ ರಸ್ತೆ, ನಿರಂತರವಾಗಿ ಅಧಿಕ ಭಾರದ ವಾಹನಗಳ ಸಂಚಾರದಿಂದ ಈ ಸಮಸ್ಯೆ ಸಂಭವಿಸಿರುವ ಸಾಧ್ಯತೆ ಇದ್ದು, ಗುತ್ತಿಗೆದಾರರಿಗೆ ಸರಿಪಡಿಸುವಂತೆ ಸೂಚಿಸಲಾಗಿದೆ
-ಸವಿತಾ, ಸಹಾಯಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next