Advertisement

ಪ್ರತ್ಯೇಕ ನಾಡಧ್ವಜ ಕುರಿತು ಸಂಪುಟದಲ್ಲಿಂದು ತೀರ್ಮಾನ

06:15 AM Feb 27, 2018 | |

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳ 1 ರಿಂದ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಎರಡು ಜತೆ ಸಮವಸ್ತ್ರ ನೀಡುವ ಬಗ್ಗೆ ಹಾಗೂ ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜದ ವಿನ್ಯಾಸ ಸಿದಟಛಿಪಡಿಸಿ ಕಾನೂನಿನ ಸ್ವರೂಪ ನೀಡುವ ಕುರಿತು ಮಂಗಳವಾರ ನಡೆಯುವ ರಾಜ್ಯ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

Advertisement

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ 2009-10 ರಿಂದ 2010-11, 2013-14 ರಿಂದ 2017-18 ರವರೆಗೆ ಅನುಮೋದನೆ ಯಾಗಿರುವ 173 ಕಾಮಗಾರಿಗಳಿಗೆ 433.20 ಕೋಟಿ ರೂ. ಹಣಕಾಸು ಒದಗಿಸುವ ವಿಷಯವೂ ಸಂಪುಟದ ಮುಂದೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಉಳಿದಂತೆ, ಮೈಸೂರಿನ ಪಿಕೆಟಿಬಿ ಆಸ್ಪತ್ರೆಯ ಆವರಣ ಹಾಗೂ ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ಟ್ರಾಮಾಕೇರ್‌ ಕೇಂದ್ರಗಳ ಕಟ್ಟಡ ನಿರ್ಮಾಣ, ಜನನಿ ಶಿಶು ಸುರಕ್ಷಾ ಕಾರ್ಯಕ್ರಮದಡಿ 23.10 ಕೋಟಿ ರೂ. ವೆಚ್ಚದ ಔಷಧ ಖರೀದಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಮುತ್ತಲಿನ ರಸ್ತೆಗಳ ಅಭಿವೃದ್ಧಿಗೆ 105.85  ಕೋಟಿ ರೂ. ಒದಗಿಸುವುದು.

ಅದಿರು ಗಣಿಗಾರಿಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಿಂದ ಸಲ್ಲಿಸಿರುವ ಅರ್ಜಿ ಪರಿಗಣಿಸುವುದು, ಕರಾವಳಿ ಭಾಗದ ಸಿಆರ್‌ಜಡ್‌ ವ್ಯಾಪ್ತಿ ಹೊರತಾದ ಪ್ರದೇಶಗಳಲ್ಲಿ ಮರುಳು ಗಣಿಗಾರಿಕೆಗಾಗಿ ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳಿಗೆ ತಿದ್ದುಪಡಿ ತರುವುದು, ಸಾಗರಮಾಲಾ ಯೋಜನೆಯಡಿ 65 ಕೋಟಿ ರೂ. ವೆಚ್ಚದಲ್ಲಿ ಹಳೇ ಮಂಗಳೂರು ಬಂದರಿನಲ್ಲಿ ಹಾಗೂ 61 ಕೋಟಿ ರೂ. ವೆಚ್ಚದಲ್ಲಿ ಕಾರವಾರ ಬಂದರಿನಲ್ಲಿ ಕೋಸ್ಟಲ್‌ ಬರ್ತ್‌ ನಿರ್ಮಾಣ, 29 ಕೋಟಿ ರೂ. ವೆಚ್ಚದಲ್ಲಿ ಹಳೇ ಮಂಗಳೂರು ಬಂದರು ಬೇಂಗ್ರೆ ಬದಿ ಹೂಳೆತ್ತುವ ಕಾಮಗಾರಿ, 215 ಕೋಟಿ ರೂ. ವೆಚ್ಚದಲ್ಲಿ ಕಾರವಾರ ಬಂದರಿನ ದಕ್ಷಿಣ ಹಾಗೂ ಉತ್ತರ ಭಾಗಕ್ಕೆ ಬ್ರೇಕ್‌ ವಾಟರ್‌ ನಿರ್ಮಿಸುವ ಪ್ರಸ್ತಾವನೆ, ಬೆಂಗಳೂರಿನಲ್ಲಿ ಒಂದು ಲಕ್ಷ ಬಹುಮಡಿ ವಸತಿ ಯೋಜನೆ ಅನುಷ್ಠಾನಗೊಳಿಸಲು 582.39 ಎಕರೆ ಸರ್ಕಾರಿ ಗೋಮಾಳ ಮತ್ತು ಖರಾಬು ಜಮೀನು ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಮಂಜೂರು ಮಾಡುವುದು ಸಂಪುಟದಲ್ಲಿ ಚರ್ಚೆಗೆ ಬರಲಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next