Advertisement

31ನೇ ಅಖಿಲ ಭಾರತ ಕೊಂಕಣಿ ಪರಿಷದ್‌ನ ಸಮಾರೋಪ

04:40 PM Jan 09, 2018 | Team Udayavani |

ಮುಂಬಯಿ: ಕೊಂಕಣಿ ಭಾಷೆ ಎಲ್ಲರನ್ನೂ  ಸಾಮೀಪ್ಯಕ್ಕೆ ತರುವ ಶಕ್ತಿವುಳ್ಳದ್ದಾಗಿದೆ. ಜನರನ್ನು ಕೂಡಿಸುವ ತಾಕತ್ತು ಇದಕ್ಕಿದೆ. ತನ್ನತನ ಸೂಚಿಸುವ ಭಾಷೆ ಜೊತೆಗೆ ಸರ್ವರರನ್ನು ಒಗ್ಗೂಡಿಸುವ ಶಕ್ತಿ ಈ ಭಾಷೆಗಿದೆ. ಕೊಂಕಣಿ ಭಾಷೆಯಲ್ಲಿ ಬಲಿಷ್ಠತೆ ಇದೆ. ಬಹುಶಃ ವಿಶೇಷವಾಗಿ ದಕ್ಷಿಣ ಭಾರತೀಯರಲ್ಲಿ ಅನೇಕರು ರಾಷ್ಟ್ರೀಯ ಭಾಷೆ ಹಿಂದಿಯನ್ನೇ ಮಾತನಾಡಲು ಬಯಸದಿರುವುದು ಒಳ್ಳೆಯ ಲಕ್ಷಣವಲ್ಲ. ವ್ಯವಹಾರಿಕ ಭಾಷೆ ಇಂಗ್ಲೀಷ್‌ಗಿಂತ ಸ್ವರಾಷ್ಟ್ರೀಯ ಮಾತೃಭಾಷೆ ಹಿಂದಿಯನ್ನು ಮನಪೂರ್ವಕವಾಗಿ ಸ್ವೀಕರಿಸುವ ಅಗತ್ಯ ಸಮಗ್ರ ಭಾರತೀಯರಿಗಿದೆ.  ಏಕಭಾಷೆ ಸರ್ವ ಭಾಷಿಗರಿಗೆ ಆಧಾರವಾಗುತ್ತದೆ. ಇಂತಹ ಅಧೀವೇಶನ ನಿರ್ಮಾಣದಿಂದ ಭಾಷೆ, ಸಂಸ್ಕೃತಿಯ ಉನ್ನತೀಕರಣ ಸಾಧ್ಯ. ಆದ್ದರಿಂದ ಅಧಿವೇಶನಗಳು ಸಂಸ್ಕೃತಿ, ಭಾಷೆಯ ಹೂಡಿಕೆಯಿದ್ದಂತೆ. ರಾಷ್ಟ್ರದ ವಿವಿಧ ಪ್ರದೇಶಗಳಿಂದ ಆಗಮಿಸಿ ಅಧಿವೇಶನಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ನೆಮ್ಮದಿಯ ಜೊತೆಗೆ ಜಾಗತಿಕ ಜ್ಞಾನ  ಸಂಪಾದನೆವಾಗುವುದು. ಆ ಮೂಲಕ ಒಗ್ಗೂಡುವಿಕೆಯಿಂದ ದೊಡ್ಡ ಜಯ ಪಡೆಯುವುದರೊಂದಿಗೆ ನಮ್ಮತನದ ಬಾಂಧ‌ವ್ಯದ ಬೆಸುಗೆ ಸಾಧ್ಯವಾಗುತ್ತದೆ ಎಂದು ಬೊರಿವಲಿ ಸಂಸದ ಗೋಪಾಲ್‌ ಸಿ. ಶೆಟ್ಟಿ ನುಡಿದರು.

Advertisement

ಜ. 8 ರಂದು ದಾದರ್‌ ಪಶ್ಚಿಮದ ಶಿವಾಜಿಪಾರ್ಕ್‌ನ ಮಹಾರಾಷ್ಟ್ರ ರಾಜ್ಯ ಭಾರತ್‌ ಸ್ಕೌಟ್‌ ಮತ್ತು ಗೈಡ್ಸ್‌ ಸಭಾಗೃಹದಲ್ಲಿ ಕೊಂಕಣಿ ಭಾಷಾ ಮಂಡಳ್‌ ಮಹಾರಾಷ್ಟ್ರ ಪ್ರಾಯೋಜಕತ್ವದಲ್ಲಿ ಜರಗಿದ ಎರಡು ದಿನಗಳ ಅಖೀಲ ಭಾರತ ಕೊಂಕಣಿ ಪರಿಷದ್‌ನ 31ನೇ ಅಧಿವೇಶನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಆಧುನಿಕ ಯುಗದಲ್ಲಿನ ಸುಶಿಕ್ಷಿತ ಜನಾಂಗದಲ್ಲಿ ಸ್ವಭಾಷೆಯ ಅನುಕರಣೆ ಅವಶ್ಯಕವಾಗಿದೆ. ಇಲ್ಲವಾದಲ್ಲಿ ಜಾಗತೀಕರಣದಲ್ಲಿ ಮಾತೃಭಾಷೆಯ ಹಿನ್ನಡೆ ಸಾಧ್ಯ. ಮನೆ ಮಾತು ಪ್ರಾಕೃತಿಕವಾಗಿ ಸ್ವೀಕರಿಸಿದಾಗ ಭಾಷೆ ಸ್ವತಂತ್ರÂವಾಗಿ ಬೆಳೆಯುವುದು. ನಾವು ಎಂದೆಂದೂ ಮತ್ತೂಬ್ಬರಿಕ್ಕಿಂತ ಚಿಕ್ಕವರು ಎನ್ನುವ ಮನೋಭಾವದಿಂದ ಮುಕ್ತರಾದಾಗ ಎಲ್ಲವೂ ಸ್ವಾಭಾವಿಕವಾಗಿ ಕೂಡುತ್ತದೆ. ಸಮಾಜ ಭವನಕ್ಕಾಗಿ ಸರಕಾರವನ್ನೇ ನಂಬಿರುವುದು ಸಲ್ಲದು. ಬದಲಾಗಿ ಸ್ವಪ್ರಯತ್ನದ ಅವಶ್ಯಕತೆ ಮುಖ್ಯವಾಗಿರಲಿ. ಭಾಷೆಯ ಸುಧಾರಣೆ ಸರಕಾರದಿಂದ ಎಂದೂ ಸಾಧ್ಯವಾಗದು. ಭಾಷಾಪ್ರೇಮದಿಂದಲೇ ಮಾತೃಭಾಷೆಯ ಬೆಳವಣಿಗೆ ಸಾಧ್ಯ. ಮುಂಬಯಿಯಲ್ಲಿ ಕೊಂಕಣಿ ಭವನದ ಕೊರತೆಯಿದ್ದು ಅದಕ್ಕಾಗಿ ಕನಿಷ್ಠ ಕೊಂಕಣಿ ಸಮಾಜ ಮಂದಿರಕ್ಕೆ ಜಾಗ ಅಥವಾ ಕಟ್ಟಡ ನೀಡುವ ವ್ಯವಸ್ಥೆಗೆ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಕೊಂಕಣಿ ಹಿರಿಯ ಸಾಹಿತಿ ಪಯ್ಯಣ್ಣೂರು ರಮೇಶ್‌ ಪೈ ಅವರು ಅಧಿವೇಶನದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಂಟು ದಶಕಗಳ ಹಿಂದೆ ಮಾಧವ ಮಂಜುನಾಥ್‌ ಶ್ಯಾನುಬಾಗ್‌ ಅವರ ದೂರದೃಷ್ಟಿತ್ವದಿಂದ ಸ್ಥಾಪಿತಗೊಂಡ  ಅಖೀಲ ಭಾರತ ಕೊಂಕಣಿ ಪರಿಷದ್‌ ಭಾಷಾ ಬೆಳವಣಿಗೆಗಾಗಿ ಸಾಕಷ್ಟು ಸೇವೆಗೈದಿದೆ. ಅವರು ಜನರಲ್ಲಿ ಕೊಂಕಣಿ ಪ್ರೇಮ ಮತ್ತು ಅಭಿಮಾನ ತುಂಬಿಸಿದ್ದರು. ಬಳಿಕ ವಿವಿಧ ರಾಜ್ಯಗಳಿಗೆ ಪಸರಿಸುವಲ್ಲಿ ಸಫಲರಾದರು. ಭಾಷೆ ವಿಸ್ತಾರತೆ ಕಾಣುತ್ತಿದ್ದತೆಯೇ  ತಮ್ಮ ರಾಜ್ಯ ಭಾಷೆ, ಪ್ರತ್ಯೇಕ ಲಿಪಿ ಉಪಯೋಗ ಮಾಡಿ ಬರೆದು ಓದಲು ಸುಲಭವಾಗಿಸಿ ಭಾಷಾಪ್ರೇಮ ಮೆರೆಯಿತು. ಕೊಂಕಣಿ ಪರಿಷದ್‌ ಒಂದು ನಿರ್ಣಾಯವೆಂದರೆ ನನ್ನ ಭಾಷೆ, ನನ್ನ ಲಿಪಿ. ಸದ್ಯ ಕೊಂಕಣಿ ಗೋವಾ ರಾಜ್ಯದ ಪ್ರದೇಶ ಭಾಷೆಯಾದರೂ ವಿವಿಧ ರಾಜ್ಯಗಳಲ್ಲಿ ವಾಸ್ತವ್ಯ ಹೂಡಿದ ಜನತೆ ಅಲ್ಲೂ ಕೊಂಕಣಿ ಭಾಷಾ ಬೇರುಗಳನ್ನು ಭದ್ರಪಡಿಸಿ ಭಾಷಾ ಬೆಳವಣಿಗೆಗೆ ಪಾತ್ರರಾಗಿದ್ದರೆ. ಅನೇಕ ವರ್ಷಗಳ ನಂತರ ಮುಂಬಯಿ ಭೇಟಿಯಲ್ಲೂ ಅದೇ ಭಾಷಾಪ್ರೇಮದ ಸಂತೋಷ ಹೇಳಲಾಸಾಧ್ಯ. ಕಾರಣ ಕೊಂಕಣಿಗರ ಜೀವನರಗಳಲ್ಲಿ ಒಂದೇ ರಕ್ತ. ಅದೇ ಕೊಂಕಣಿ ರಕ್ತ. ಕೊಂಕಣಿ ಪ್ರೇಮ ಹೃದಯದಲ್ಲಿ ತುಂಬಿಸಿಕೊಂಡಿದ್ದಾರೆ. ಅದಕ್ಕಾಗಿ ನಾವೂ ಬೇರೆ ಬೇರೆ ಸ್ಥಳಗಳಿಂದ ಕೊಂಕಣಿ ಪರಷತ್ತುಗೆ ಹಾಜರಾಗಿದ್ದೇವೆ. ಇದರಿಂದ ನಮ್ಮ ಏಕತೆ ಸಾಧ್ಯವಾಗಿದೆ. ಮುಂದಕ್ಕೂ ಕೊಂಕಣಿಯೆ ನಮ್ಮ ಆಸ್ತಿಯಾಗಿದೆ ಎಂದರು.

ಗೌರವ ಅತಿಥಿಗಳಾಗಿ ರೋಮನ್‌ ಕಾಥೋಲಿಕ್‌ ಮಂಗಳೂರು ಧರ್ಮಪ್ರಾಂತ್ಯದ ಕುಲಗುರು ರೆ| ಫಾ ವಾಲ್ಟರ್‌ ಡಿಮೆಲ್ಲೋ, ಎನ್‌ಕೆಜಿಎಸ್‌ಬಿ ಬ್ಯಾಂಕ್‌ನ ಉಪ ಕಾರ್ಯಾಧ್ಯಕ್ಷ ಸುನೀಲ್‌ ಗಾಯೊ¤ಂಡೆ, ಕೊಂಕಣಿ ಭಾಷಾ ಮಂಡಳ್‌ ಮಹಾರಾಷ್ಟ್ರದ ಉಪಾಧ್ಯಕ್ಷ ಆಲ್ಬರ್ಟ್‌ ಡಬ್ಲೂ$Â. ಡಿಸೋಜಾ ಅವರು  ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅತಿಥಿಯಾಗಿ ಪಾಲ್ಗೊಂಡ ಅಖೀಲ ಭಾರತ ಕೊಂಕಣಿ  ಪರಿಷದ್‌ನ ಅಧ್ಯಕ್ಷ ಗೋಕುಲ್‌ದಾಸ್‌ ಪ್ರಭು ಅವರು ಮಾತನಾಡಿ, ಮೊದಲಾಗಿ ಅಗಲಿದ ಎಲ್ಲಾ ಕೊಂಕಣಿ ಮಹಾನೀಯರನ್ನು ಸ್ಮರಿಸುತ್ತಿದ್ದೇನೆ. ಕೊಂಕಣಿ ಜನರದ್ದು ಬಹು ಬಾಂಧವ್ಯತೆಯ ಕೂಡು ಕುಟುಂಬಯಿದ್ದಂತೆ ಎಂದರು. ಪರಿಷದ್‌ನಲ್ಲಿ ತಾನಾಜಿ ಹಲರ್‌ಕರ್‌ ಅಧ್ಯಕ್ಷತೆಯಲ್ಲಿ  “ರಾóàಯ ಕೊಂಕಣಿ ಚಾನೆಲ್‌ಗ‌ಳು, ಅವಶ್ಯಕತೆ ಮತ್ತು ಆಹ್ವಾನ’ ಮತ್ತು ಎನ್‌. ಶಿವದಾಸ್‌ ಅಧ್ಯಕ್ಷತೆಯಲ್ಲಿ “50 ವರ್ಷಗಳ ಎಣಿಕಾ ಅಭಿಮತ ಮತ್ತು ಕೊಂಕಣಿ ರಾಜ್ಯದ ಅಭಿವೃದ್ಧಿ’ ಹಾಗೂ ದೀಪಕ್‌ ಗಡ್‌ ಅಧ್ಯಕ್ಷತೆಯಲ್ಲಿ “ಕೊಂಕಣಿ ಸಾಹಿತ್ಯಕ್ಕೆ ದೃಷ್ಟಿಕಲಾ ಕೊಡುಗೆ’ ವಿಚಾರಿತ  ವಿಚಾರಗೋಷ್ಠಿಗಳು, ಪ್ರಕಾಶ್‌ ಪಡ್ಗಾಂವ್ಕರ್‌ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು.

Advertisement

ದಿನಪೂರ್ತಿ ನಡೆಸಲ್ಪಟ್ಟ ಪರಿಷದ್‌ನಲ್ಲಿ ಭಾಷಾ ಮಂಡಳ್‌ನ ಕಾರ್ಯಾಧ್ಯಕ್ಷ ಹೆನ್ರಿ ಲೊಬೋ, ಕೋಶಾಧಿಕಾರಿ ವಾಲ್ಟರ್‌ ಡಿ’ಸೋಜಾ ಜೆರಿಮೆರಿ, ಸಹ ಕಾರ್ಯಾದರ್ಶಿ ಪಾಸ್ಕಲ್‌ ಲೋಬೊ, ಜೊತೆ  ಕೋಶಾಧಿಕಾರಿ ವಾಲೆ°àಸ್‌ ರೇಗೊ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಪಿ. ಎನ್‌. ಶ್ಯಾನ್‌ಭಾಗ್‌, ಸ್ಟೇನ್ಲಿ ಡಾಯಸ್‌, ರುಜಾರಿಯೋ ಕೆ. ಫೆರ್ನಾಂಡಿಸ್‌, ಬೆನೆಡಿಕ್ಟಾ ರೆಬೆಲ್ಲೊ, ಸಿಪ್ರೀಯನ್‌ ಅಲುºರRರ್ಕ್‌, ಜೋನ್‌ ಜಿ. ಮೆಂಡೋನ್ಸಾ ಮತ್ತಿತರ ಕೊಂಕಣಿ ಗಣ್ಯರು ಉಪಸ್ಥಿತರಿದ್ದರು.ಭಾಷಾ ಮಂಡಳ್‌ನ ಅಧ್ಯಕ್ಷ ಜೋನ್‌ ಡಿಸಿಲ್ವಾ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಜೋನ್‌ ಆರ್‌. ಪಿರೇರಾ, ಕಾರ್ಯಾಕಾರಿ ಸಮಿತಿಯ ಸದಸ್ಯರುಗಳಾದ ಬೆಟ್ಟಿ ನಾಜ್‌ ಫೆರ್ನಾಂಡಿಸ್‌, ಲಿಯೋ ಫೆರ್ನಾಂಡಿಸ್‌ ಜೆರಿಮೆರಿ, ಜೋನ್‌ ರೋಡ್ರಿಗಸ್‌, ಎಲಿಯಾಸ್‌ ಪಿಂಟೋ, ವಿಕ್ಟರ್‌ ಪಿರೇರಾ ಹಾಗೂ ಜೋರ್ಜ್‌ ಡಿ’ಸೋಜಾ ಬೊರಿವಲಿ ಅತಿಥಿಗಳನ್ನು ಗೌರವಿಸಿದರು. ಸಿರಿಲ್‌ ಕ್ಯಾಸ್ತೇಲಿನೋ  ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಪ್ರಧಾನ  ಕಾರ್ಯದರ್ಶಿ ಲೋರೆನ್ಸ್‌ ಡಿ’ಸೋಜಾ ಕಮಾನಿ ವಂದಿಸಿದರು. 

ಡಿಜಿಟಲ್‌ ಯುಗದಲ್ಲೂ ಕೊಂಕಣಿ ಸ್ವಂತಿಕೆಯ ಮಾನ್ಯತೆ ಹೊಂದಿದೆ. ರಾಷ್ಟ್ರದಾದ್ಯಂತ ಸುಮಾರು ಕೋಟಿಗೂ ಮಿಕ್ಕಿದ ಕೊಂಕಣಿಗರಿದ್ದಾರೆ. ಅದರಲ್ಲೂ 25 ಲಕ್ಷಕ್ಕಿಂತ ಅಧಿಕ ಕೊಂಕಣಿ ಜನತೆ ಮಹಾರಾಷ್ಟ್ರದಲ್ಲಿ ನೆಲೆಯಾಗಿದ್ದಾರೆ. ಆದ್ದರಿಂದ  ಇಲ್ಲಿನ ಕೊಂಕಣಿಗರಿಗಾಗಿ ಕೊಂಕಣಿ ಅಕಾಡೆಮಿ ಮಹಾರಾಷ್ಟ್ರದ  ಜೊತೆಗೆ ಸ್ವಂತ ಕಛೇರಿ, ಭವನದ ಅಗತ್ಯವಿದೆ. ಕೊಂಕಣಿ ಜನತೆ ಅಪಾರ ಪರಿಶ್ರಮ, ನಿಷ್ಠಾವಂತರಾಗಿದ್ದು ಮಹಾರಾಷ್ಟ್ರ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ. ಆದರೂ ಸರಕಾರದ ಸಹಾಯಹಸ್ತ ಲಭಿಸ‌ದಿರುವುದು ಬೇಸರ ತಂದಿದೆ. 
-ಜೋನ್‌ ಡಿ’ಸಿಲ್ವಾ  , (ಅಧ್ಯಕ್ಷರು, ಕೊಂಕಣಿ ಭಾಷಾ ಮಂಡಳ್‌ ಮಹಾರಾಷ್ಟ್ರ)

ಏಕತೆಯಿಂದ ವಿವಿಧತೆ ಕಂಡ ಕೊಂಕಣಿಗರು  ವಿವಿಧತೆಯಿಂದ ಏಕತೆಯನ್ನೂ ಮೈಗೂಡಿಸಿ ತಮ್ಮ ಅಸ್ತಿತ್ವವನ್ನು ತಾವೇ ರಚಿಸಿ ಕೊಂಡಿದ್ದಾರೆ. ಜಾತಿ, ಮತ, ಧರ್ಮ, ಭೇದ ಭಾವವಿಲ್ಲದೆ ಬರೇ ಕೊಂಕಣಿ ಭಾಷೆಯಿಂದ ಬಾಳಬಹುದು ಎನ್ನುವುದನ್ನು ಸಹೋದರತ್ವದ ಮೂಲಕ ಜಗತ್ತಿಗೆ ತೋರ್ಪಡಿಸಿದ್ದಾರೆ. ಭಾಷೆಯಿಂದ ಬದುಕು ಕಟ್ಟಲು ಕೊಂಕಣಿ ಭಾಷಿಗರು ಮಾದರಿಯಾಗಿದ್ದಾರೆ . 
ಆಲ್ಬರ್ಟ್‌  ಡಬ್ಲೂ$Â. ಡಿಸೋಜಾ, (ಉಪಾಧ್ಯಕ್ಷರು , ಕೊಂಕಣಿ ಭಾಷಾ ಮಂಡಳ್‌ ಮಹಾರಾಷ್ಟ್ರ)

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next