Advertisement

ಉನ್ನತ ಗುರಿಯಿದ್ದಾಗ ಏಕಾಗ್ರತೆಯಿರಲಿ: ನಿಖಿಲ್‌

05:20 PM Jun 22, 2018 | Team Udayavani |

ಬೆಳಗಾವಿ: ಜೀವನದಲ್ಲಿ ಒಳ್ಳೆಯ ಗುರಿಯೊಂದಿಗೆ ಸಾಧನೆ ಮಾಡುವಾಗ ಮೊಬೈಲ್‌, ಇಂಟರ್‌ನೆಟ್‌, ವಾಟ್ಸಪ್‌ ಮೊದಲಾದವುಗಳಿಂದ ಸಾಧ್ಯವಾದಷ್ಟು ದೂರ ಇರಬೇಕು ಎಂದು ಕೇಂದ್ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ರಾಜ್ಯದಿಂದ ಆಯ್ಕೆಯಾಗಿರುವ ನಿಖಿಲ್‌ ನಿಪ್ಪಾಣಿಕರ ಹೇಳಿದರು. 

Advertisement

ಸುವರ್ಣ ವಿಧಾನಸೌಧದಲ್ಲಿ ಗುರುವಾರ ಜಿಲ್ಲಾಡಳಿತದ ವತಿಯಿಂದ ನಡೆದ ಜಾಣ ಜಾಣೆಯರ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜೀವನದಲ್ಲಿ ನಿಶ್ಚಿತ ಗುರಿ ಇರಬೇಕು. ಅದಕ್ಕೆ ಅಡೆತಡೆಗಳು ಹೆಚ್ಚಿದ್ದರೂ ಅದರಿಂದ ಹಿಂದೆ ಸರಿಯಬಾರದು. ನಾನೂ ಸಹ 10 ವರ್ಷದವನಿದ್ದಾಗ ತಂದೆಯನ್ನು ಕಳೆದುಕೊಂಡೆ. ರ‍್ಯಾಂಕ್   ವಿದ್ಯಾರ್ಥಿಯೇನೂ ಆಗಿರಲಿಲ್ಲ. ಗಣಿತ ಹಾಗೂ ವಿಜ್ಞಾನ ಬಹಳ ಕಷ್ಟದ ವಿಷಯಗಳಾಗಿದ್ದವು. ಡಿಪ್ಲೊಮಾ ಸೇರಿಕೊಂಡಾಗ ಉಪನ್ಯಾಸಕರೊಬ್ಬರು ಇದು ನಿನಗೆ ಆಗುವದಿಲ್ಲ ಬಿಟ್ಟುಹೋಗುಎಂದಿದ್ದರು,. ಮುಂದೆ ಅದೇ ಉಪನ್ಯಾಸಕರು ನನಗೆ ಕಾಲೇಜಿನ ಉತ್ತಮ ವಿದ್ಯಾರ್ಥಿ ಪ್ರಶಸ್ತಿ ಕೊಟ್ಟರು. ಇದು ನನ್ನ ಪರಿಶ್ರಮದ ಫಲ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next