Advertisement

ಅಕ್ರಮ ನಿಯಂತ್ರಣಕ್ಕೆ ಗಣಕೀಕೃತ ವ್ಯವಸ್ಥೆ

11:58 AM Dec 08, 2018 | Team Udayavani |

ಹುಮನಾಬಾದ: ಸರ್ಕಾರ ರೈತರಿಗೆ ನೀಡುವ ವಿವಿಧ ಸೌಲಭ್ಯಗಳು ನೇರವಾಗಿ ರೈತರಿಗೆ ತಲುಪಬೇಕು. ಈ ವರೆಗೆ ಪಿಕೆಪಿಎಸ್‌ ಕಾರ್ಯದರ್ಶಿಗಳು ನಕಲಿ ಬ್ಯಾಂಕ್‌ ಖಾತೆ ಸೃಷ್ಟಿಸಿ ಸರ್ಕಾರದ ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದು. ಪಾರದರ್ಶಕತೆ ಕೈಗೊಳ್ಳುವ ಉದ್ದೇಶದಿಂದ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೂಂಡಿದೆ ಎಂದು ಸಚಿವ ಬಂಡೆಪ್ಪ ಖಾಶೆಂಪೂರ ಹೇಳಿದರು.

Advertisement

ಚಿಟಗುಪ್ಪ ತಾಲೂಕಿನ ಚಾಂಗಲೇರಾ ಗ್ರಾಮದಲ್ಲಿ ಶುಕ್ರವಾರ ನಡೆದ ನೂತನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ 5,400 ಪಿಕೆಪಿಎಸ್‌ ಬ್ಯಾಂಕ್‌ ಗಳಲ್ಲಿ ಗಣಕೀಕೃತ ವ್ಯವಸ್ಥೆ ಮಾಡುವ ಕಾರ್ಯ ಈಗಾಗಲೆ ಆರಂಭಗೂಂಡಿದ್ದು 700ಕ್ಕೂ ಅಧಿಕ ಪಿಕೆಪಿಎಸ್‌ ವ್ಯವಹಾರಗಳು ಸಂಪೂರ್ಣವಾಗಿ ಗಣಕೀಕೃತಗೂಂಡ ನಂತರ ಕೆಲಸಗಳು ಸುಗಮವಾಗಿ ಸಾಗಿವೆ. ಕಾರಣ ಜಿಲ್ಲೆಯ ರೈತರು ಸ್ವಲ್ಪ ವಿಳಂಬವಾದರೂ ತಾಳ್ಮೆ ಕಳೆದುಕೂಳ್ಳದೆ ಸರ್ಕಾರದ ಯೋಜನೆಗಳ ಯಶಸ್ಸಿಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು. 

ರಾಜ್ಯದಲ್ಲಿ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 8,165 ಕೋಟಿ ರೂ. ರಾಜ್ಯದಲ್ಲಿ ಮತ್ತು ಬೀದರ ಜಿಲ್ಲೆಯ ರೈತರ 528 ಕೋಟಿ ರೂ. ಸಾಲಮನ್ನಾ ಮಾಡಿತ್ತು. ಈ ಬಾರಿ ರಾಜ್ಯದ ಸಮ್ಮಿಶ್ರ ಸರ್ಕಾರ ಬೀದರ ಜಿಲ್ಲೆಯಲ್ಲಿ 548 ಕೋಟಿ ರೂ. ಸಾಲ ಮನ್ನಾ ಮಾಡುವ ಮೂಲಕ ಹೂಸ ಇತಿಹಾಸ ಸೃಷ್ಟಿಸಿದೆ ಎಂದರು.

ಗೂಂದಲ ಬೇಡ: ಸಾಲ ಮನ್ನಾ ವಿಷಯದ ಬಗ್ಗೆ ಜಿಲ್ಲೆಯ ರೈತರು ಅನಗತ್ಯ ತಲೆಕೆಡಿಸಿಕೊಳ್ಳದೆ ನೆಮ್ಮದಿಯಿಂದ ಇರಬೇಕು. ಅರ್ಜಿಗಳ ಅಪ್‌ ಲೋಡ್‌ ಕಾರ್ಯ ಪ್ರಗತಿಯಲ್ಲಿದ್ದು, ಹಂತ ಹಂತವಾಗಿ ರೈತರ ಸಾಲ ಮನ್ನಾ ಆಗುತ್ತದೆ. ನನ್ನ ಅವಧಿಯಲ್ಲಿ ಬೀದರ ದಕ್ಷಿಣ ಕ್ಷೇತ್ರದ ಚಾಂಗಲೇರಾ ಹಾಗೂ ಉಡಮನಳ್ಳಿ ಗ್ರಾಮಗಳಲ್ಲಿ ಹೂಸ ಪಿಕೆಪಿಎಸ್‌ ಉದ್ಘಾಟಿನೆಗೂಂಡಿದ್ದು ಸಂತಸ ತಂದಿದೆ ಎಂದರು. ಜಿಲ್ಲೆಯ ರೈತರ ಜೀವನಾಡಿ ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆಯ ಆರಂಭದ ಬಗ್ಗೆ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ರೈತರಲ್ಲಿ ಆತ್ಮ ವಿಶ್ವಾ ತುಂಬಿದರು.

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಕಾಂತ ನಾಗಮಾರಪಳ್ಳಿ ಮಾತನಾಡಿ, ಜಿಲ್ಲೆಯೆ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗಿದೆ. ಅದರ ಕೀರ್ತಿ ಸಹಕಾರ ಸಚಿವರಿಗೆ ಸಲ್ಲುತ್ತದೆ ಎಂದರು. ಸಂಸದ ಭಗವಂತ ಖೂಬಾ ಮಾತನಾಡಿ, ಕೇಂದ್ರದ ನೆರವನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ರೈತರ ಮನೆಬಾಗಿಲಿಗೆ ತಲುಪಿಸಬೇಕು. ರಾಷ್ಟ್ರೀಕೃತ ಮತ್ತು ಸಹಕಾರ ಬ್ಯಾಂಕ್‌ಗಳ ಸಾಲ ಮನ್ನಾ ನೀತಿ, ಉದ್ಭವಗೂಂಡ ಸಮಸ್ಯೆಗಳನ್ನು ರೈತರಿಗೆ ಸ್ಪಷ್ಟೀಕರಿಸಬೇಕು ಎಂದರು. 

Advertisement

2022 ವರೆಗೆ ರೈತರ ಉತ್ಪನ್ನ ದ್ವಿಗುಣಗೂಳ್ಳಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾಗುವುದರಲ್ಲಿ ಸಂಶಯವಿಲ್ಲ ಎಂದರು. ಜೆಡಿಎಸ್‌ ಮುಖಂಡ ಸಂತೋಷ ರಾಸೂರ್‌, ಗ್ರಾ,ಪಂ ಅಧ್ಯಕ್ಷ ಪಾರ್ವತಿಬಾಯಿ ಕಾಶೀನಾಥ, ಪಿಕೆಪಿಎಸ್‌ ಅಧ್ಯಕ್ಷ ಚಂದ್ರಶೇಖರ್‌ ಪಾಟೀಲ, ಮನ್ನು ಪವಾರ್‌, ಜಗನ್ನಾಥ ರಡ್ಡಿ ನಿರ್ಣಾ, ಶಿವರಾಜ ನೀಲಾ, ರಾಜಕುಮಾರ ಕೋಟಗೆ, ವಿಜಯಕುಮಾರ ವಾಲಿ, ಕಾಶೀನಾಥ ಪಾಟೀಲ, ಅಶೋಕ ರಡ್ಡಿ ಮತ್ತಿತರರು ಇದ್ದರು.

ಸಾಲ ಮನ್ನಾ ವಿಷಯದಲ್ಲಿ ರೈತರು ಅನಗತ್ಯ ಗೂಂದಲದಲ್ಲಿ ಸಿಲುಕದೇ ಬ್ಯಾಂಕ್‌ ಸಿಬ್ಬಂದಿಗೆ ಸಹಕರಿಸಬೇಕು. ತಿಂಗಳ ವಿಳಂಬವಾದರೂ ಚಿಂತೆಯಿಲ್ಲ ಸಾಲ ಮನ್ನಾ ಆಗುವುದು ಖಚಿತ.
 ಉಮಕಾಂತ ನಾಗಮಾರಪಳ್ಳಿ, ಅಧ್ಯಕ್ಷರು ಡಿಸಿಸಿ ಬ್ಯಾಂಕ್‌

ಬೀದರ ಸಹಕಾರ ಸಕ್ಕರೆ ಕಾರ್ಖಾನೆ ದುರುಸ್ತಿ ಕಾರ್ಯಾ ಪ್ರಗತಿಯಲ್ಲಿದ್ದು, ತಿಂಗಳ ಅಂತ್ಯದಲ್ಲಿ ಆರಂಭಗೊಳ್ಳುತ್ತದೆ. ಕಾರ್ಖಾನೆ ಆರಂಭದ ಬಗ್ಗೆ ರೈತರು ಆತಂಕ ಪಡುವ ಅಗತ್ಯವಿಲ್ಲ .
 ಬಂಡೆಪ್ಪ ಖಾಶೆಂಪುರ, ಸಚಿವರು

ಚಾಂಗಲೇರಾದಲ್ಲಿ ಮೊರಾರ್ಜಿ ದೇಸಾಯಿ ಶಾಲೆ ಆರಂಭಿಸಬೇಕು. ವೀರಭದ್ರೇಶ್ವರ ದೇವಸ್ಥಾನದಿಂದ ಭವಾನಿ ದೇವಾಲಯದ ವರೆಗೆ ಸಿಸಿ ರಸ್ತೆ ಹಾಗೂ ಬೀದಿ ದೀಪ ಅಳವಡಿಸಿ ವಿವಿಧ ಮೂಲ ಸೌಲಭ್ಯ ಕಲ್ಪಿಸಬೇಕು.
 ರೇವಣಸಿದ್ದಯ್ನಾ ಸ್ವಾಮಿ, ಗ್ರಾಮದ ಹಿರಿಯ ಜೀವಿ

Advertisement

Udayavani is now on Telegram. Click here to join our channel and stay updated with the latest news.

Next