- http ಲಿಂಕುಗಳು : ನಾವು ಯಾವುದೇ ಜಾಲತಾಣವನ್ನು ತೆರೆಯೋಕೆ ಮುಂಚೆ, ಅದು ಅಧಿಕೃತ ಅಲ್ಲವೋ ಅನ್ನೋದನ್ನು ಮೊದಲು ದೃಢಪಡಿಸಿಕೊಳ್ಳಬೇಕು. ಈ ನಕಲಿ ತಾಣಗಳಿಗೂ, ಅಸಲೀ ತಾಣಗಳಿಗೂ ಇರುವ ಬಹುಮುಖ್ಯ ವ್ಯತ್ಯಾಸವೆಂದರೆ, ಅವುಗಳ ಜಾಲತಾಣ ಶುರುವಾಗೋದು // ಇಂದನಾ ಅಥವಾ https:// ಇಂದನಾ ಅಂತ ಹುಷಾರಾಗಿ ಚೆಕ್ ಮಾಡಿ. ಈ // ತಾಣಗಳಲ್ಲಿ ನೀವು ಕೊಡೋ ಮಾಹಿತಿಯೇ ನಿಮ್ಮ ಬ್ಯಾಂಕ್ ಅಕೌಂಟಿಗೆ ಕನ್ನ ಹಾಕುವ ಸಾಧ್ಯತೆ ಇರುತ್ತದೆ. ಅವುಗಳನ್ನು ತೆರೆದಾಗ ಮಾಲ್ವೇರುಗಳು, ವೈರಸ್ಸುಗಳು ನಿಮ್ಮ ಕಂಪ್ಯೂಟರಿಗೆ ಡೌನ್‌ಲೋಡ್ ಆಗೋ ಸಾಧ್ಯತೆಯೂ ಇದೆ. ಹಾಗಾಗಿ // ಲಿಂಕುಗಳನ್ನು ತೆರೆಯಲೇ ಬೇಡಿ. ಒಂದುವೇಳೆ ತೆರೆದರೂ, ಅಲ್ಲಿ ಸಿಗೋ ಉಚಿತ ತಂತ್ರಾಂಶಗಳನ್ನು ಡೌನ್‌ಲೋಡ್ ಮಾಡಬೇಡಿ. ಯಾವ ತಂತ್ರಾಂಶದ ಜೊತೆ ಯಾವ ವೈರಸ್ಸು ಫ್ರಿನೋ ಯಾರಿಗೆ ಗೊತ್ತು? https ಜಾಲತಾಣಗಳ ಮತ್ತೂಂದು ವ್ಯತ್ಯಾಸವೆಂದರೆ, ಅದರಲ್ಲಿನ ಸರ್ಟಿಫೀಕೇಟುಗಳು. ಇವುಗಳನ್ನ ಸರ್ಟಿಫಿಕೇಶನ್ ಏಜೆನ್ಸಿಗಳಿಂದ ದೃಢೀಕರಣವನ್ನೂ ಮಾಡಬೇಕಾಗಿರುವುದರಿಂದ, ಈ ತಾಣಗಳು ಅಧಿಕೃತ ಅಂತ ನಂಬಬಹುದಾಗಿದೆ. ಇವುಗಳಲ್ಲಿ ಬಿಟ್ ಸುರಕ್ಷತೆಯೂ ಇರೋದರಿಂದ, ನೀವು ಆ ಜಾಲತಾಣಗಳಲ್ಲಿ ವ್ಯವಹರಿಸೋ ಮಾಹಿತಿಯೂ ಸುರಕ್ಷಿತ ಎಂದು ನಂಬಬಹುದು.
- ಆ್ಯಂಟಿ ವೈರಸ್ ತಂತ್ರಾಂಶಗಳು : ಎಲ್ಲಾ ಕಂಪ್ಯೂಟರುಗಳಲ್ಲೂ ನಾರ್ಟನ್, ಮೆಕ್ಕೆಫೆ, ಎಸ್ಸೆಟ್ ಮುಂತಾದ ಆ್ಯಂಟಿ ವೈರಸ್ ತಂತ್ರಾಂಶಗಳು ಇರುತ್ತವೆ. ಅವುಗಳಲ್ಲಿರೋ ಆಟೋಮೇಟಿಕ್ ಅಪ್‌ಡೇಟ್ ಆಯ್ಕೆಯನ್ನು ಬಳಸೋದರಿಂದ, ಹೊಸ ಹೊಸ ವೈರಸ್ಸುಗಳ ವಿರುದ್ಧ ಹೋರಾಡೋದು ಹೇಗೆಂಬ ಮಾಹಿತಿ ನಿಮ್ಮ ಕಂಪ್ಯೂಟರಿನ ಆಂಟಿ ವೈರಸ್ಸಿಗೆ ಅಪ್ಡೆಟ್ ಆಗುತ್ತಿರುತ್ತೆ. ನೀವೂ ಆಗಾಗ ಅಪ್‌ಡೇಟ್ ಸೆಕ್ಯುರಿಟಿ ಆಯ್ಕೆಯನ್ನು ಬಳಸಬಹುದು.
- ಆಪರೇಟಿಂಗ್ ಸಿಸ್ಟಂ ಅಪ್‌ಡೇಟುಗಳು : ನೀವು ಬಳಸೋ ಆಪರೇಟಿಂಗ್ ಸಿಸ್ಟಂ ಹಳೆಯದಾದಷ್ಟೂ, ವೈರಸ್ಸುಗಳ ಕಾಟವೂ ಜಾಸ್ತಿಯಾಗೋ ಸಾಧ್ಯತೆಯಿರುತ್ತೆ. ಮೆಲ್ಟ್ ಡೌನ್ ಮುಂತಾದ ಆಪರೇಟಿಂಗ್ ಸಿಸ್ಟಂನಲ್ಲಿನ ನ್ಯೂನತೆಗಳನ್ನು ಬಳಸಿಕೊಂಡೇ, ಸುಮಾರಷ್ಟು ವೈರಸ್ಸುಗಳು ದಾಳಿ ಮಾಡುತ್ತಿರುತ್ತವೆ. ಹಾಗಾಗಿ, ಆಗಾಗ ಆಪರೇಟಿಂಗ್ ಸಿಸ್ಟಂ ಅನ್ನು ಅಪ್ ಡೇಟ್ ಮಾಡುತ್ತಿರೋದು ಒಳ್ಳೆಯದು.
- ಬಳಸೋ ವೈ ಫೈ : ಸಿಕ್ಕ ಸಿಕ್ಕ ಫ್ರೀ ವೈ ಫೈಗಳಿಗೆ ಕನೆಕ್ಟ್ ಮಾಡಿದರೂ, ಕಂಪ್ಯೂಟರಿಗೆ ತೊಂದರೆ ತಪ್ಪಿದ್ದಲ್ಲ. ಮನೆಯ ವೈ ಫೈ, ಮೊಬೈಲಿನ ಹಾಟ್‌ಸ್ಪಾಟುಗಳನ್ನೇ ಬಳಸುತ್ತಿದ್ದರೂ, ಅದಕ್ಕೊಂದು ಗಟ್ಟಿಯಾದ ಪಾಸ್‌ವರ್ಡ್ ಇಡೋದನ್ನು ಮರೆಯಬೇಡಿ. ಅದನ್ನು ಆಗಾಗ ಬದಲಾಯಿಸುತ್ತಿರಿ. ಸುತ್ತಮುತ್ತಲಿನ ಮನೆಯವರು ನಿಮ್ಮ ವೈ ಫೈ, ಹಾಟ್‌ಸ್ಪಾಟ್ ಬಳಸಿ ನೀವು ತೊಂದರೆಗೆ ಸಿಕ್ಕಿ ಹಾಕಿಕೊಳ್ಳೋದು ತಪ್ಪುತ್ತೆ.
Advertisement
5. ಲಿನಕ್ಸ್ ಆಪರೇಟಿಂಗ್ ಸಿಸ್ಟಂ : ನಿಮ್ಮ ಕಂಪ್ಯೂಟರಿನಲ್ಲಿ ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಬಳಸೋ ಆಯ್ಕೆಯಿದ್ದರೆ ಅದನ್ನೇ ಬಳಸಿ. ಪ್ರಪಂಚದಾದ್ಯಂತ ಬಹುತೇಕರು ವಿಂಡೋಸ್ ಅನ್ನೇ ಬಳಸೋದರಿಂದ ಹೆಚ್ಚಿನ ವೈರಸ್ಸುಗಳಿರೋದು ಸಹಜ. ಹಾಗಾಗಿ ಕುರಿಮಂದೆಯ ದಾರಿಯಲ್ಲೇ ಸಾಗಿ ಹಳ್ಳಕ್ಕೆ ಬೀಳ್ಳೋ ಬದಲು, ಹೊಸ ಹಾದಿ ಹಿಡಿಯೋದು ಸೂಕ್ತ ಅನಿಸುತ್ತೆ.
Related Articles
Advertisement