Advertisement

ಕೋಟ : ಸಾಹೇಬ್ರಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಂಪ್ಯೂಟರ್ ಕೊಡುಗೆ

07:42 PM Jun 30, 2021 | Team Udayavani |

ಕೋಟ: ಸಾಹೇಬ್ರಕಟ್ಟೆ ಸ.ಹಿ.ಪ್ರಾಥಮಿಕ ಶಾಲೆಗೆ ದಾನಿಗಳಾದ ಮಾನ್ಯ ಅಶೋಕ ಕುಮಾರ್ ಕಿಣಿ ಬೆಂಗಳೂರು ಇವರು ಕೊಡಮಾಡಿದ ಲ್ಯಾಪ್‌ಟಾಪ್, ಕಂಪ್ಯೂಟರ್ ಹಾಗೂ ಕಂಪ್ಯೂಟರ್ ಶಿಕ್ಷಣದ ಪೂರಕ ಪರಿಪರಕರಗಳ ಹಸ್ತಾಂತರ ಇಂದು ಜರಗಿತು.

Advertisement

ಈ ಸಂದರ್ಭ ಸುಮಾರು 3.5ಲಕ್ಷಕ್ಕೂ ಹೆಚ್ಚು ಮೌಲ್ಯದ 6ಲ್ಯಾಪ್ಟಾಪ್, 6 ಕಂಪ್ಯೂಟರ್ ಹಾಗೂ ಪೂರಕ ಪರಿಕರಗಳನ್ನು ಹಸ್ತಾಂತರಿಸಿ ಮಾತನಾಡಿದ ದಾನಿಗಳಾದ ಅಶೋಕ ಕಿಣಿಯವರು, ನಾನು ಕಲಿತ ಶಾಲೆಯ ಹಳ್ಳಿಗಾಡಿನ ಈ ಶಾಲೆಯ ಮಕ್ಕಳು ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ಈ ಸೌಲಭ್ಯವನ್ನು ನೀಡಿದ್ದೇನೆ. ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿರುವುದು ತುಂಬಾ ಸಂತೋಷ ನೀಡಿದೆ ಎಂದರು.

ಗರಿಕೆಮಠ ಅರ್ಕಗಣಪತಿ ದೇಗುಲದ ಮುಖ್ಯಸ್ಥ ವೇ|ಮೂ| ರಾಮಪ್ರಸಾದ್ ಅಡಿಗರು ದಾನಿಗಳಾದ ಅಶೋಕ್ ಕಿಣಿಯವರನ್ನು ಸಮ್ಮಾನಿಸಿ ಗೌರವಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರ ಅನುದಾನದಲ್ಲಿ ಅಭಿವೃದ್ಧಿಪಡಿಸಲಾದ ಕಂಪ್ಯೂಟರ್ ಕೊಠಡಿಯನ್ನು ಕೂಡ ಈ ಸಂದರ್ಭ ಉದ್ಘಾಟಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕ ಸತೀಶ್ಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶಿರಿಯಾರ ವ್ಯಾವಸಾಯಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರದೀಪ್ ಬಲ್ಲಾಳ್ , ಉಪಾಧ್ಯಕ್ಷ ಅಲ್ತಾರು ನಿರಂಜನ ಹೆಗ್ಡೆ , ಗ್ರಾ.ಪಂ. ಸದಸ್ಯ ಅಮೃತ್ ಪೂಜಾರಿ, ಶಿಕ್ಷಣ ಸಂಯೋಜಕ ರಾಘವ ಶೆಟ್ಟಿ, ಸಿ.ಆರ್.ಪಿ. ಚಂದ್ರ ಶೇಖರ ಮೊಗೇರ, ಹಿರಿಯರಾದ ಉಪೇಂದ್ರ ಕಿಣಿ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಶೋಕ ಪ್ರಭು, ಸ್ಥಳೀಯರಾದ ನಾರಾಯಣ ಶೆಟ್ಟಿ ಶರತ್ ಶೆಟ್ಟಿ, ರವೀಂದ್ರನಾಥ ಕಿಣಿ , ಯು.ಪ್ರಸಾದ್ ಭಟ್, ಕಿಶೋರ್ ಶೆಟ್ಟಿ, ಪುರುಷೋತ್ತಮ ದೇವಾಡಿಗ, ಜಯಕರ ಶೆಟ್ಟಿ ಉಪಸ್ಥಿತರಿದ್ದರು.
ಶಿಕ್ಷಕ ಸುರೇಂದ್ರ ಕಾರ್ಯಕ್ರಮ ನಿರೂಪಿಸಿ , ಗಜೇಂದ್ರ ಶೆಟ್ಟಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next