Advertisement
ಬಿಜೆಪಿಯ ಜನಾರ್ದನ್ ಸಿಂಗ್ ಸಿಗ್ರಿವಾಲ್ ಅವರು ಜುಲೈನಲ್ಲಿ ಮಂಡಿಸಿದ್ದ “ಕಡ್ಡಾಯ ಮತದಾನ ವಿಧೇಯಕ 2019’ರ ಕುರಿತು ಶುಕ್ರವಾರ ಚರ್ಚೆ ನಡೆಸಲಾಯಿತು. ಸ್ವತಃ ಬಿಜೆಪಿಯ ಸತ್ಯಪಾಲ್ ಸಿಂಗ್ ಅವರೇ ಇದನ್ನು ವಿರೋಧಿಸಿದ್ದು, ನಾನು ಈ ವಿಧೇಯಕದ ಪರವಾಗಿಲ್ಲ ಎಂದು ಘೋಷಿಸಿದರು.
Related Articles
Advertisement
ಖಾಸಗೀಕರಣ ಅಲ್ಲ: ಸರ್ಕಾರ ರೈಲ್ವೆಯನ್ನು ಖಾಸಗೀಕರಣಗೊಳಿಸುತ್ತಿಲ್ಲ. ಬದಲಾಗಿದೆ ವಾಣಿಜ್ಯ ಹಾಗೂ ಆನ್-ಬೋರ್ಡ್ ಸೇವೆಗಳನ್ನು ಹೊರಗುತ್ತಿಗೆ ನೀಡಿದೆಯಷ್ಟೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ಇನ್ನೊಂದೆಡೆ, ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿನ ಹೂಡಿಕೆ ಹಿಂಪಡೆತ ಕುರಿತು ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, “ಕೆಲವು ಖಾಸಗಿ ಕಂಪನಿಗಳವರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುತ್ತಿದೆ’ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪ್ರತಿಭಟನೆಚುನಾವಣಾ ಬಾಂಡ್ ಕುರಿತು ಪ್ರಧಾನಿ ಮೋದಿ ಮೌನ ಮುರಿಯಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಸಂಸದರು ಶುಕ್ರವಾರ ಸಂಸತ್ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರವು ಸುಳ್ಳುಗಳ ಫ್ಯಾಕ್ಟರಿಯಾಗಿದೆ ಎಂದೂ ಅವರು ಆರೋಪಿಸಿದರು. ಗದ್ದಲವಾದೆ‹ ನೋಟಿಸ್ ರದ್ದು
ಸಂಸದರ ಗದ್ದಲದಿಂದಾಗಿ ಕಲಾಪವೇನಾದರೂ ಮುಂದೂ ಡಲ್ಪಟ್ಟರೆ, ಸಂಸದರು ಮೊದಲೇ ಸಲ್ಲಿಸಿರುವಂಥ ನೋಟಿಸ್‌ಗಳು ರದ್ದಾಗುತ್ತವೆ ಎಂದು ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಶೂನ್ಯ ಅವಧಿಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳ ಕುರಿತು ಚರ್ಚಿಸಲು ಸಂಸದರು ಮೊದಲೇ ನೋಟಿಸ್ ನೀಡಿರುತ್ತಾರೆ. ಸಾಮಾನ್ಯ ವಾಗಿ ಕಲಾಪ ಮುಂದೂಡಲ್ಪಟ್ಟರೆ ಆ ನೋಟಿಸ್‌ಗೆ ಸಂಬಂಧಿ ಸಿದ ಚರ್ಚೆ ಮಾರನೇ ದಿನಕ್ಕೆ ಮುಂದೂಡಲ್ಪಡುತ್ತದೆ. ಆದರೆ ಇನ್ನು ಮುಂದೆ, ಸದಸ್ಯರ ಗದ್ದಲದಿಂದಾಗಿ ಬೆಳಗ್ಗಿನ ಕಲಾಪ ವ್ಯರ್ಥವಾದರೆ, ಸಂಸದರು ಚರ್ಚೆಗಾಗಿ ಸಲ್ಲಿಸಿದ ಎಲ್ಲ ನೋಟಿಸ್‌ಗಳೂ ರದ್ದಾಗುತ್ತವೆ ಎಂದಿದ್ದಾರೆ ನಾಯ್ಡು. ಮಾಜಿ ಪ್ರಧಾನಿಗಳ ಕುಟುಂಬಕ್ಕಿಲ್ಲ ಎಸ್‌ಪಿಜಿ
ಮಾಜಿ ಪ್ರಧಾನಿಗಳ ಕುಟುಂಬ ಸದಸ್ಯರಿಗೆ ಎಸ್‌ಪಿಜಿ(ವಿಶೇಷ ರಕ್ಷಣಾ ಪಡೆ) ಭದ್ರತೆಯನ್ನು ರದ್ದು ಮಾಡುವ ಕುರಿತ ಪ್ರಸ್ತಾಪಕ್ಕೆ ಕೇಂದ್ರ ಸಂಪುಟ ಈಗಾಗಲೇ ಒಪ್ಪಿಗೆ ನೀಡಿದ್ದು, ಮುಂದಿನ ವಾರ ಈ ವಿಧೇಯಕ ಲೋಕಸಭೆಯಲ್ಲಿ ಮಂಡನೆಯಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಎಸ್‌ಪಿಜಿ ಕಾಯ್ದೆಗೆ ತಿದ್ದುಪಡಿ ತಂದು, ಈ ಅಂಶವನ್ನು ಸೇರಿಸಲಾಗಿದೆ. ಪ್ರಸ್ತುತ ಎಸ್‌ಪಿಜಿ ಕಾಯ್ದೆಯ ಪ್ರಕಾರ, ಪ್ರಧಾನಮಂತ್ರಿ, ಅವರ ಕುಟುಂಬ ಸದಸ್ಯರು, ಮಾಜಿ ಪ್ರಧಾನಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಅವರು ಹುದ್ದೆ ತ್ಯಜಿಸಿದ ಒಂದು ವರ್ಷ ಕಾಲ ಎಸ್‌ಪಿಜಿ ಭದ್ರತೆಯನ್ನು ನೀಡಲಾಗುತ್ತಿತ್ತು. ತದನಂತರ, ಅವರ ಜೀವಕ್ಕಿರುವ ಬೆದರಿಕೆಯ ಆಧಾರದಲ್ಲಿ ಎಸ್‌ಪಿಜಿ ಭದ್ರತೆಯನ್ನು ಮುಂದುವರಿಸಲಾಗುತ್ತಿತ್ತು. ಆದರೆ, ಈ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಅದರಂತೆ, ಇನ್ನು ಮುಂದೆ ಹುದ್ದೆ ತ್ಯಜಿಸಿದ ಮರುಕ್ಷಣವೇ ಎಸ್‌ಪಿಜಿ ಭದ್ರತೆ ರದ್ದಾಗುತ್ತದೆ.