Advertisement

Menstrual Leave; ಕಡ್ಡಾಯ ಮುಟ್ಟಿನ ರಜೆ ವಿಚಾರ; ಸುಪ್ರೀಂ ಕೋರ್ಟ್ ಹೇಳಿದ್ದೇನು?

03:49 PM Jul 08, 2024 | Team Udayavani |

ಹೊಸದಿಲ್ಲಿ: ಮಹಿಳೆಯರಿಗೆ ಮುಟ್ಟಿನ ರಜೆಯನ್ನು (Menstrual Leave) ಕಡ್ಡಾಯಗೊಳಿಸುವುದರಿಂದ ಅವರನ್ನು ಉದ್ಯೋಗದಿಂದ ದೂರವಿಡಬಹುದು, ಈ ನಿರ್ಧಾರವು ಅವರಿಗೆ ಸಮಸ್ಯೆ ತರಬಹುದು ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿದೆ. ಅಲ್ಲದೆ ಇದು ನ್ಯಾಯಾಲಯಗಳು ನೋಡಬೇಕಾದ ವಿಷಯವಲ್ಲ ಎಂದು ಒತ್ತಿಹೇಳಿದೆ.

Advertisement

ಮುಟ್ಟಿನ ರಜೆಗಾಗಿ ನೀತಿಗಳನ್ನು ರೂಪಿಸಲು ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನಗಳನ್ನು ನೀಡಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಆಲಿಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, “ಅಂತಹ ರಜೆಗಳನ್ನು ಕಡ್ಡಾಯಗೊಳಿಸುವುದರಿಂದ ಮಹಿಳೆಯರು ಉದ್ಯೋಗಿಗಳಿಂದ ದೂರವಿರುತ್ತಾರೆ. ನಾವು ಅದನ್ನು ಬಯಸುವುದಿಲ್ಲ. ಮಹಿಳೆಯರನ್ನು ರಕ್ಷಿಸಲು ನಾವು ಪ್ರಯತ್ನಿಸುತ್ತೇವೆ, ಆದರೆ ಇದು ಅವರ ಅನನುಕೂಲತೆಗೆ ಕಾರಣವಾಗಬಹುದು” ಎಂಧರು.

“ಇದು ವಾಸ್ತವವಾಗಿ ಸರ್ಕಾರದ ನೀತಿ ಅಂಶವಾಗಿದೆ. ನ್ಯಾಯಾಲಯಗಳು ಪರಿಶೀಲಿಸಲು ಆಹದು” ಎಂದು ನ್ಯಾಯಾಲಯ ಹೇಳಿದೆ.

ಸಮಸ್ಯೆಯು ಬಹು ನೀತಿ ಅಂಶಗಳಿಗೆ ಸಂಬಂಧಿಸಿದೆ. ನ್ಯಾಯಾಲಯವು ಮಧ್ಯಪ್ರವೇಶಿಸಲು ಯಾವುದೇ ಕಾರಣವಿಲ್ಲ ಎಂದು ಚಂದ್ರಚೂಡ್ ಅವರಿದ್ದ ಪೀಠ ಹೇಳಿದೆ.

Advertisement

“ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಲ್ಲಿನ ಕಾರ್ಯದರ್ಶಿಯನ್ನು ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರ ಬಳಿಗೆ ಹೋಗಲು ನಾವು ಅರ್ಜಿದಾರರಿಗೆ ಅನುಮತಿ ನೀಡುತ್ತೇವೆ. ಈ ವಿಷಯವನ್ನು ನೀತಿ ಮಟ್ಟದಲ್ಲಿ ಪರಿಶೀಲಿಸಲು ಮತ್ತು ಎಲ್ಲಾ ಸ್ಟೇಕ್ ಹೋಲ್ಡರ್ ಗಳನ್ನು ಸಂಪರ್ಕಿಸಿದ ನಂತರ ನಿರ್ಧಾರ ತೆಗೆದುಕೊಳ್ಳುವಂತೆ ನಾವು ಕಾರ್ಯದರ್ಶಿಯನ್ನು ವಿನಂತಿಸುತ್ತೇವೆ. ಮಾದರಿ ನೀತಿಯನ್ನು ರೂಪಿಸಬಹುದೇ ಎಂದು ನೋಡುತ್ತೇ” ಎಂದು ಪೀಠ ಹೇಳಿದೆ.

ಮಹಿಳಾ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಋತುಚಕ್ರದ ನೋವಿನ ರಜೆಗೆ ನಿಯಮಗಳನ್ನು ರೂಪಿಸಲು ಎಲ್ಲಾ ರಾಜ್ಯಗಳಿಗೆ ನಿರ್ದೇಶನವನ್ನು ಕೋರಿ ಅರ್ಜಿ ಸಲ್ಲಿಸಿದಾಗ ಈ ವರ್ಷದ ಫೆಬ್ರವರಿಯಲ್ಲಿ ಸುಪ್ರೀಂ ಕೋರ್ಟ್ ಇದೇ ರೀತಿಯ ನಿಲುವನ್ನು ತೆಗೆದುಕೊಂಡಿತ್ತು. ಆಗ ಕೂಡ, ಈ ವಿಷಯವು ನೀತಿ ರೂಪಿಸುವವರಿಗೆ ಬರುತ್ತದೆ ಎಂದು ನ್ಯಾಯಾಲಯ ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next