Advertisement

ನನೆಗುದಿಗೆ ಬಿದ್ದ ಕಾಮಗಾರಿ ಆರಂಭಿಸಲು ಒತ್ತಾಯ

02:44 PM Jul 26, 2022 | Team Udayavani |

ಚಿಂಚೋಳಿ: ತಾಲೂಕಿನ ಪೋಲಕಪಳ್ಳಿ ಗ್ರಾಮಕ್ಕೆ ಕೂಡು ರಸ್ತೆ ಸಂಪರ್ಕ ಡಾಂಬರೀಕರಣ ಕಾಮಗಾರಿಗೆ ಶಾಸಕ ಡಾ| ಅವಿನಾಶ ಜಾಧವ ಚಾಲನೆ ನೀಡಿ ತಿಂಗಳುಗಳೇ ಉರುಳಿದರೂ ಪ್ರಗತಿ ಕಾಣುತ್ತಿಲ್ಲ ಎಂದು ಪೋಲಕಪಳ್ಳಿ ಗ್ರಾಪಂ ಅಧ್ಯಕ್ಷ ಸೈಯದ್‌ ಜಾಕೀರ ಪಟೇಲ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಪೋಲಕಪಳ್ಳಿ ಗ್ರಾಮಕ್ಕೆ ಉತ್ತಮ ರಸ್ತೆ ಸಂಪರ್ಕ ಕಲ್ಪಿಸುವಂತೆ ಮತ್ತು ಮೂಲ ಸೌಕರ್ಯ ಮಂಜೂರಿ ಮಾಡುವಂತೆ ಗ್ರಾಮದ ಪರವಾಗಿ ವಕೀಲರೊಬ್ಬರು ಶಾಸಕರ ಹಾಗೂ ತಹಶೀಲ್ದಾರ್‌ ಕಚೇರಿ ಎದುರು ಸತ್ಯಾಗ್ರಹ ನಡೆಸಿದ್ದರು. ಆ ನಂತರ ಗ್ರಾಮಸ್ಥರ ಬೇಡಿಕೆಯಂತೆ ತಾಂಡೂರ-ಚಿಂಚೋಳಿ ರಾಜ್ಯಹೆದ್ದಾರಿಯಿಂದ ಪೋಲಕಪಳ್ಳಿ ಅಣವಾರ ಗ್ರಾಮಕ್ಕೆ 2 ಕಿ.ಮಿ ರಸ್ತೆ ಸಂಪರ್ಕ ಕಲ್ಪಿಸುವುದಕ್ಕಾಗಿ ಜಿಪಂ(ಪಿಆರ್‌ಇ) 2021-22ನೇ ಸಾಲಿನ ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ 94ಲಕ್ಷ ರೂ. ಮಂಜೂರಿಗೊಳಿಸಿ ಕಳೆದ ಮೇ 14ರಂದು ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ರಸ್ತೆ ಕಾಮಗಾರಿಯನ್ನು ಮಿರಿಯಾಣ ಗ್ರಾಮದ ಗುತ್ತಿಗೆದಾರರೊಬ್ಬರು ಕೆಲಸ ಆರಂಭಿಸಿ, ಆನಂತರ ಕೆಲವೆಡೆ ತೆಗ್ಗುತೆಗೆದು ನಿಲ್ಲಿಸಿದ್ದಾರೆ. ಇದರಿಂದ ಗ್ರಾಮದೊಳಗೆ ದ್ವಿಚಕ್ರ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.

ರಸ್ತೆಯಲ್ಲಿ ಕಂಕರ ಮೇಲೆದ್ದಿದ್ದರಿಂದ ಜನರಿಗೆ ಓಡಾಡಲು ಬರುತ್ತಿಲ್ಲ. ಇದೇ ರಸ್ತೆ ಮೂಲಕ ಅಣವಾರ, ಪರದಾರ ಮೋತಕಪಳ್ಳಿ ಗ್ರಾಮಕ್ಕೆ ವಾಹನಗಳು ಸಂಚರಿಸುತ್ತಿರುವುದರಿಂದ ದ್ವಿಚಕ್ರ ವಾಹನಗಳ ಸವಾರರು ಬಿದ್ದು ಗಾಯಮಾಡಿಕೊಳ್ಳುತ್ತಿದ್ದಾರೆ. ರಸ್ತೆ ಕೆಸರುಮಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೋಲಕಪಳ್ಳಿ ಗ್ರಾಮಕ್ಕೆ ಕೂಡು ಸಂಪರ್ಕ ರಸ್ತೆ ಕಾಮಗಾರಿಯನ್ನು ತರಾತುರಿಯಲ್ಲಿ ಉದ್ಘಾಟಿಸಿ, ನಂತರ ಕೆಲಸ ಪ್ರಾರಂಭಿಸದೇ ಇರುವುದರಿಂದ ಜನರಿಗೆ ತೀವ್ರ ತೊಂದರೆ ಆಗುತ್ತಿದೆ. ಜಿಪಂ ಎಇಇ ಮತ್ತು ಜೆಇ ಈ ಕುರಿತು ಗಮನಹರಿಸುತ್ತಿಲ್ಲ. ಕೆಸರಿನಲ್ಲಿ ತಿರುಗಾಡುವ ಪರಿಸ್ಥಿತಿ ಉಂಟಾಗಿದೆ ಎಂದು ಗ್ರಾಮದ ಮುಖಂಡ ಶಂಕರರಾವ್‌ ಹಣಮಂತರಾವ ಕೊಡದೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next