Advertisement

ಮೀಸಲಾತಿಗಾಗಿ ತಲೆ ಬೋಳಿಸಿಕೊಂಡು ಆಕ್ರೋಶ

12:45 PM Jul 16, 2022 | Team Udayavani |

ಹುಮನಾಬಾದ: ಬೇಡ ಜಂಗಮ ಜಾತಿ ಪ್ರಮಾಣಪತ್ರ ನೀಡುವಂತೆ ಹಾಗೂ ವಿವಿಧ ಬೇಡಿಕೆ ರಾಜ್ಯ ಸರ್ಕಾರ ಕೂಡಲೇ ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ತಹಶೀಲ್ದಾರ್‌ ಕಚೇರಿ ಎದುರಿಗೆ ನಡೆಯುತ್ತಿರುವ 10ನೇ ದಿನದ ಸತ್ಯಾಗ್ರಹದಲ್ಲಿ ಶುಕ್ರವಾರ ಜಂಗಮರು ತಲೆ ಬೋಳಿಸಿಕೊಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಜಂಗಮ ಸಮಾಜದ ಮುಖಂಡರಾದ ರವಿ ಸ್ವಾಮಿ, ಸಿದ್ದು ಚಕ್ಕಪಳ್ಳಿ ಮಾತನಾಡಿ, ಬೇಡ ಜಂಗಮ ಜಾತಿ ಪ್ರಮಾಣಪತ್ರ ನೀಡುವಂತೆ ಒತ್ತಾಯಿಸಿ ಜಂಗಮ ಸಮಾಜದಿಂದ ಕಳೆದ 10 ದಿನಗಳಿಂದ ಹಗಲು-ರಾತ್ರಿ ಸತ್ಯಾಗ್ರಹ ನಡೆಸಿದ್ದು, ಸರ್ಕಾರ ಮಾತ್ರ ಜಂಗಮರ ಬೇಡಿಕೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಿರಂತರ ಮಳೆ ಸುರಿಯುತ್ತಿದ್ದರೂ ಪ್ರತಿಭಟನಾ ಸ್ಥಳದಿಂದ ಯಾರೊಬ್ಬರೂ ಕದಲಿಲ್ಲ. ನಮ್ಮ ಹಕ್ಕಿಗಾಗಿ ನಾವುಗಳು ಹೋರಾಟ ನಡೆಸುತ್ತಿದ್ದು, ಬರುವ ದಿನಗಳಲ್ಲಿ ಸರ್ಕಾರ ಸೂಕ್ತವಾಗಿ ಸ್ಪಂದಿಸದಿದ್ದರೆ ಉಗ್ರ ಹೋರಾಟ ನಡೆಸಲು ಇಂತನೆ ಮಾಡಬೇಕಾಗುತ್ತದೆ. ಈ ಹಿಂದೆ ರಕ್ತದಲ್ಲಿ ಮುಖ್ಯಮಂತ್ರಿಗೆ ಪತ್ರ ಬರೆದು ಮೀಸಲಾತಿ ಘೋಷಣೆ ಮಾಡುವಂತೆ ಒತ್ತಾಯಿಸಲಾಗಿತ್ತು. ಇದೀಗ ಜಂಗಮರು ತಲೆ ಬೋಳಿಸಿಕೊಂಡು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ. ನಮ್ಮ ಪ್ರತಿಭಟನೆಗೆ ಹಡಪದ ಸಮಾಜದವರು ಕೂಡ ಬೆಂಬಲ ನೀಡಿ ಕೇಶ ಮುಂಡನೆಗೆ ಸಹಕಾರ ನೀಡಿದ್ದಾರೆ. ಕೂಡಲೇ ಸರ್ಕಾರ ಮೀಸಲಾತಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next