Advertisement

ಸಮಗ್ರ ಮೀನುಗಾರಿಕೆ ನೀತಿ ಶೀಘ್ರ: ಡಾ|ಪ್ರವೀಣ್‌ ಪುತ್ರನ್‌

12:51 AM Dec 17, 2019 | Sriram |

ಮಂಗಳೂರು: ಮೀನುಗಾರಿಕೆಗಾಗಿ ಸಮಗ್ರ ರಾಷ್ಟ್ರೀಯ ನೀತಿಯೊಂದನ್ನು ಜಾರಿಗೆ ತರುವ ಕೆಲಸ ನಡೆಯುತ್ತಿದೆ ಎಂದು ಭಾರತೀಯ ಕೃಷಿ ಸಂಶೋಧನ ಪರಿಷತ್‌(ಐಸಿಎಆರ್‌)ನ ಸಹಾಯಕ ಮಹಾ ನಿರ್ದೇಶಕ ಡಾ| ಪ್ರವೀಣ್‌ ಪುತ್ರನ್‌ ಹೇಳಿದರು.

Advertisement

ಅವರು ಶುಕ್ರವಾರ ಇಲ್ಲಿನ ಹೊಗೆಬಜಾರ್‌ನಲ್ಲಿರುವ ಮೀನು ಗಾರಿಕೆ ಕಾಲೇಜಿನ ತಾಂತ್ರಿಕ ವಿಭಾಗದ ಸಭಾಂಗಣದಲ್ಲಿ ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನ ಸಂಸ್ಥೆ (ಸಿಎಂಎಫ್‌ಆರ್‌ಐ) ಮತ್ತು ಐಸಿಎಆರ್‌ ವತಿಯಿಂದ ನಡೆದ “ಸಮುದ್ರ ಮೀನುಗಾರಿಕೆಯಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಮತ್ತು ಅನುಷ್ಠಾನದ ಸವಾಲುಗಳು’ ಎಂಬ ವಿಷಯದ ಕುರಿತ ವಿಚಾರ ಸಂಕಿರಣ ಮತ್ತು ಸಮಾಲೋಚನ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ಮೀನುಗಾರಿಕೆಯು ಕೃಷಿ ಮತ್ತು ಪಶು ಸಂಗೋಪನ ಇಲಾಖೆಯ ಅಧೀನದಲ್ಲಿದ್ದು, ಅವುಗಳು ತಮ್ಮ ಇಲಾಖೆಗಳ ಚಟುವಟಿಕೆಗಳ ಬಳಿಕ ಮೀನುಗಾರಿಕೆ ಬಗ್ಗೆ ಗಮನಹರಿಸುತ್ತಿದ್ದವು. ಆದರೆ ವಾರ್ಷಿಕ 47,000 ಕೋಟಿ ರೂ. ವಹಿವಾಟು ನಡೆಸುವ ಮೀನುಗಾರಿಕಾ ಕ್ಷೇತ್ರಕ್ಕೆ ಕೇಂದ್ರ ಸರಕಾರ ಪ್ರತ್ಯೇಕ ಸಚಿವಾಲಯ ರಚಿಸಿದೆ. ಇದರಿಂದ ಮೀನುಗಾರಿಕೆ ಬಗ್ಗೆ ಹೆಚ್ಚು ಗಮನ ಹರಿಸಲು ಸಾಧ್ಯವಾಗಿದೆ ಎಂದರು.

ಸಿಎಂಎಫ್‌ಆರ್‌ಐ ಹೊರತಂದ ಕಿರು ಹೊತ್ತಗೆಯನ್ನು ಬಿಡುಗಡೆ ಮಾಡಲಾಯಿತು.

ಕೊಚ್ಚಿನ್‌ ಸಿಎಂಎಫ್‌ಆರ್‌ಐ ನಿರ್ದೇಶಕ ಡಾ| ಗೋಪಾಲಕೃಷ್ಣನ್‌ ಮಾತನಾಡಿ, ಸಂಸ್ಥೆಯು ತನ್ನ 11 ಪ್ರಾದೇಶಿಕ ಕಚೇರಿ, 15 ಫೀಲ್ಡ್‌ ಸೆಂಟರ್‌, 2 ಕೆವಿಕೆ, 2 ರಿಸರ್ಚ್‌ ಸೆಂಟರ್‌ಗಳ ಮೂಲಕ ಸಂಶೋಧನೆ ನಡೆಸುತ್ತಿದೆ. ಮೀನುಗಾರಿಕೆಯಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡಲು ಪ್ರಯತ್ನಿಸುತ್ತಿದೆ ಎಂದರು.

Advertisement

ಸಿಎಂಎಫ್‌ಆರ್‌ಐ ಮಂಗಳೂರು ನಿರ್ದೇಶಕರಾದ ಡಾ| ಪ್ರತಿಭಾ ರೋಹಿತ್‌ ಸ್ವಾಗತಿಸಿ ಪ್ರಸಾವನೆಗೈದರು. ಕೆಎಫ್‌ಡಿಸಿ ನಿರ್ದೇಶಕ ಎಂ.ಎಲ್‌. ದೊಡ್ಡಮಣಿ, ಉಡುಪಿ ಮೀನುಗಾರಿಕೆ ಉಪನಿರ್ದೇಶಕ ಕೆ. ಗಣೇಶ್‌, ಅಶೋಕ್‌ ಕುಮಾರ್‌ ಸೇರಿದಂತೆ ದ.ಕ. ಮತ್ತು ಕಾರವಾರದ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು, ಮೀನುಗಾರಿಕೆ ವಿಜ್ಞಾನಿಗಳು ಭಾಗ ವಹಿಸಿದ್ದರು.

ಸಚಿವಾಲಯದಿಂದ
ಕೆಲಸಗಳು ತ್ವರಿತ
ಮೀನುಗಾರಿಕೆಗೆ ಸಂಬಂಧಿ ಸಿದ ವಿವಿಧ ಸಮಸ್ಯೆಗಳು, ಸವಾಲುಗಳು, ಮೀನುಗಾರರ ಬೇಡಿಕೆಗಳು ಮತ್ತಿತರ ಸಮಗ್ರ ವಿಷಯಗಳ ಬಗ್ಗೆ ಸಿಎಂಎಫ್‌ಆರ್‌ಐ ವರದಿ ತಯಾರಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಸಿದೆ. ಮುಂದಿನ ಅಧಿವೇಶನದಲ್ಲಿ ಇದು ಮಂಡನೆ ಯಾಗಲಿದ್ದು, ಅನುಮೋದನೆ ಸಿಕ್ಕಿದರೆ ಹೊಸ ನೀತಿ ಜಾರಿಗೆ ಬರಲಿದೆ. ಮೀನುಗಾರಿಕೆ ಸಚಿವಾಲಯ ಸ್ಥಾಪನೆ ಆಗಿರುವುದರಿಂದ ಕೆಲಸಗಳು ತ್ವರಿತವಾಗಿ ನಡೆಯುತ್ತಿವೆ ಎಂದವರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next