ಬಾಗಲಕೋಟೆ: ಜಿಲ್ಲೆಯ ಜಮಖಂಡಿ ಕಂದಾಯಉಪ ವಿಭಾಗದ ಸಮಗ್ರ ಅಭಿವೃದ್ಧಿಗೆ ಚಿಂತಕರು,ಹಿರಿಯರು, ನಿವೃತ್ತ ಅಧಿಕಾರಿಗಳು ಸೇರಿದಂತೆಪಕ್ಷಾತೀತವಾಗಿ ಸಮಗ್ರ ಅಭಿವೃದ್ಧಿ ಚಿಂತನೆ ವೇದಿಕೆಸಿದ್ಧಪಡಿಸಲಾಗುತ್ತಿದ್ದು, ಇದಕ್ಕಾಗಿ ಶೀಘ್ರವೇನಿರ್ದಿಷ್ಟವಾದ ನೀಲನಕ್ಷೆ ರಚಿಸಲಾಗುವುದು ಎಂದು ಎಂಆರ್‌ಎನ್ ಸಮೂಹ ಸಂಸ್ಥೆಯ ಸಿಎಂಡಿಸಂಗಮೇಶ ನಿರಾಣಿ ಹೇಳಿದರು.
ಮುಧೋಳದ ಎಂಆರ್‌ಎನ್ ಸಮೂಹಸಂಸ್ಥೆಯ ಆಡಳಿತ ಮಂಡಳಿ ಕಚೇರಿಯಲ್ಲಿ ಜಮಖಂಡಿ ಉಪ ವಿಭಾಗ ವ್ಯಾಪ್ತಿಯ ಹಿರಿಯರು,ಚಿಂತಕರು, ಸಾಹಿತಿಗಳು, ಅಧಿಕಾರಿಗಳು ಒಳಗೊಂಡಚರ್ಚೆ-ಸಂವಾದ ಕಾರ್ಯಕ್ರಮದಲ್ಲಿ ಅವರುಮಾತನಾಡಿದರು.
ಜಮಖಂಡಿ ಜಿಲ್ಲಾ ಕೇಂದ್ರವಾಗಬೇಕು.ಸರ್ಕಾರಕ್ಕೆ ಅತಿಹೆಚ್ಚು ತೆರಿಗೆ ಪಾವತಿಸುವುದು ಜಮಖಂಡಿ ಉಪ ವಿಭಾಗ. ಹೀಗಾಗಿ ಈ ಭಾಗದಲ್ಲಿಅತಿಹೆಚ್ಚು ಅಭಿವೃದ್ಧಿ ಕಾರ್ಯಗಳಾಗಬೇಕು.ಮಹಾರಾಷ್ಟ್ರದ ಇಚಲಕರಂಜಿ ಮಾದರಿಯಲ್ಲಿರಬಕವಿ-ಬನಹಟ್ಟಿಯಲ್ಲಿ ಜವಳಿ ಪಾರ್ಕ್‌ನಿರ್ಮಾಣವಾಗಬೇಕು. 1500 ಹಾಸಿಗೆ ಸರ್ಕಾರಿವೈದ್ಯಕೀಯ ಕಾಲೇಜು, ಸರ್ಕಾರಿ ಎಂಜಿನಿಯರಿಂಗ್‌ಕಾಲೇಜ್ ಸ್ಥಾಪಿಸಬೇಕಿದೆ ಎಂದು ತಿಳಿಸಿದರು.
200 ವರ್ಷಗಳ ಹಿಂದೆ ಜಮಖಂಡಿಯಲ್ಲಿ ಕಲೆಕ್ಟರ್ ಕಚೇರಿ ಇತ್ತು. ಹೈಕೋರ್ಟ್ ಕೂಡಇತ್ತು. ಮೊದಲ ಸಿಎಂ ನೀಡಿದ ಕಂದಾಯವಿಭಾಗ ಕೂಡ. ಬೀಳಗಿ ಕ್ಷೇತ್ರದ 27 ಕೆರೆಗಳಿಗೆನೀತು ತುಂಬಿಸುವ ಕೆಲಸವಾಗಿದೆ. ಅದೇ ಮಾದರಿಮುಧೋಳ ತಾಲೂಕಿನ ಕೆರೆಗಳಿಗೂ ನೀರುತುಂಬಿಸಬೇಕು.
ಅತಿಹೆಚ್ಚು ಏತ ನೀರಾವರಿಯೋಜನೆಗಳಿರುವುದು ಬೀಳಗಿ ಕ್ಷೇತ್ರದಲ್ಲಿ. ನದಿಜೋಡಣೆ ಯೋಜನೆ ಜಾರಿಗೊಳ್ಳಬೇಕು. ಇದರಿಂದಬೇಸಿಗೆಯ ಏಪ್ರಿಲ್-ಮೇ ತಿಂಗಳಲ್ಲೂ ಈಭಾಗಕ್ಕೆ ನೀರಾವರಿ ಒದಗಿಸಲು ಸಾಧ್ಯವಿದೆ ಎಂದುಹೇಳಿದರು.ಜಮಖಂಡಿ ಉಪ ವಿಭಾಗದ ಸಮಗ್ರ ಅಭಿವೃದ್ಧಿಕುರಿತು ಡಾ|ಶಿವಾನಂದ ಕುಬಸದ, ಎಂ.ಸಿ.ಗೊಂದಿ, ಮಲ್ಲಿಕಾರ್ಜುನ ಹುಲಗಬಾಳಿ, ನೀಲಕಂಠದಾತಾರ, ಸಿದ್ಧರಾಜು ಪೂಜಾರಿ, ಟಿ.ಪಿ.ಗಿರಡ್ಡಿ,ಬಸವರಾಜ ಬೈರಶೆಟ್ಟಿ, ಜಯರಾಮ ಶೆಟ್ಟಿ, ಭೀಮಶಿಮಗದುಮ್, ರವೀಂದ್ರ ಹಳಿಂಗಳಿ ಮುಂತಾದವರುಉಪಸ್ಥಿತರಿದ್ದರು