Advertisement

ಪೊಲೀಸ್‌ ಇಲಾಖೆ ಸಮಗ್ರ ಅಭಿವೃದ್ಧಿ; ಡಿಜಿಪಿ ನೇತೃತ್ವದಲ್ಲಿ ಸಮಿತಿ ರಚನೆ: ಬೊಮ್ಮಾಯಿ

12:07 PM Nov 03, 2015 | mahesh |

ಬೆಂಗಳೂರು: ಪೊಲೀಸ್‌ ಇಲಾಖೆಯ ಸಮಗ್ರ ಸುಧಾರಣೆ ತರುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ನೇತೃತ್ವದಲ್ಲಿ “ಪೊಲೀಸ್‌ ಸಂರಕ್ಷಣೆ ಮತ್ತು ಸಾಮಾಜಿಕ ಭದ್ರತೆ’ ಕುರಿತ ಹೊಸ ಸಮಿತಿ ರಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ರಾಜ್ಯ ಪೊಲೀಸ್‌ ಇಲಾಖೆಯಿಂದ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಗುರುವಾರ ಆಯೋಜಿಸಿದ್ದ ಕೊರೊನಾಗೆ ತುತ್ತಾದ ಪೊಲೀಸ್‌ ಅಮರವೀರರ ಭಾವಚಿತ್ರ ಪ್ರದರ್ಶನ ಮತ್ತು ಸ್ಮರಣಾಂಜಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕರ್ತವ್ಯ ನಿರತ ಪೊಲೀಸ್‌ ಮಾತ್ರವಲ್ಲದೆ, ಅವರ ಕುಟುಂಬದವರನ್ನು ಕೇಂದ್ರವಾಗಿಟ್ಟುಕೊಂಡು ಹೊಸ ನೀತಿ ರಚಿಸಲಾಗುವುದು. ಪೊಲೀಸ್‌ ಸಿಬಂದಿ ಮತ್ತು ಅವರ ಕುಟುಂಬ ಸದಸ್ಯರ ಸಂರಕ್ಷಣೆ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆ ಹಾಗೂ ಇಲಾಖೆಯ ಇತರ ಸುಧಾರಣ ಕಾರ್ಯಕ್ರಮಗಳ ಬಗ್ಗೆ ನೀತಿಯಲ್ಲಿ ಉಲ್ಲೇಖೀಸಲಾಗುವುದು ಎಂದು ತಿಳಿಸಿದರು.

ಇಲಾಖೆಯ ಆಡಳಿತ ವ್ಯವಸ್ಥೆ, ಕಾನೂನು ಸುವ್ಯವಸ್ಥೆ, ಸೈಬರ್‌ ಕ್ರೈಂ, ಸೈಬರ್‌ ಕಾನೂನು, ನೇಮಕಾತಿ, ಪೊಲೀಸರ ಆರೋಗ್ಯ ಭಾಗ್ಯ, ವಿಮೆ ಇತರ ಎಲ್ಲ ಯೋಜನೆಗಳ ಬಗ್ಗೆಯೂ ನೀತಿಯಲ್ಲಿ ತಿಳಿಸಲಾಗುವುದು. ಕೆಲವೇ ತಿಂಗಳಲ್ಲಿ ಸಮಿತಿ ವರದಿ ನೀಡಲಿದ್ದು, ಅನಂತರ ಪೊಲೀಸ್‌ ಇಲಾಖೆಯ ಸುಧಾರಣೆಗೆ ಇನ್ನಷ್ಟು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

30 ಲಕ್ಷ ರೂ. ಪರಿಹಾರಕ್ಕೆ ಒಪ್ಪಿಗೆ
ಕೊರೊನಾದಿಂದ ಮೃತಪಟ್ಟ ಪೊಲೀಸರಿಗೆ ಪರಿಹಾರದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದರು. ಆದರೆ, ಚರ್ಚೆ ನಡೆಸುವುದಾದರೆ ಪರಿಹಾರ ಕೊಡಲೇ ಬೇಡಿ. ಪೊಲೀಸರು ನಿಜವಾದ ಕೊರೊನಾ ವಾರಿಯರ್ಸ್‌. ಯಾವ ಕಾರಣಕ್ಕೂ ಪ್ರಶ್ನಿಸದೆ ಪರಿಹಾರ ಕೊಡಿ ಎಂದಿದ್ದೆ. ಹೀಗಾಗಿ ಕೊರೊನಾದಿಂದ ಮೃತಪಟ್ಟವರಿಗೆ 30 ಲಕ್ಷ ರೂ. ಪರಿಹಾರ ಕೊಡುವುದಾಗಿ ಸಿಎಂ ಒಪ್ಪಿದರು. ಅದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಸಿಸಿಬಿಗೆ ಹೆಚ್ಚುವರಿ ಅಧಿಕಾರಿ ನಿಯೋಜನೆ
ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಅಧಿಕಾರಿ-ಸಿಬಂದಿ ಹೆಚ್ಚಿಸುವ ಕುರಿತು ಕ್ರಮಕೈಗೊಂಡಿದ್ದು, ಒಬ್ಬರು ಡಿವೈಎಸ್ಪಿ, ಮೂವರು ಇನ್‌ಸ್ಪೆಕ್ಟರ್‌, ಆರು ಮಂದಿ ಪಿಎಸ್‌ಐ, ಅಗತ್ಯ ಹೆಡ್‌ಕಾನ್‌ಸ್ಟೆಬಲ್‌, ಕಾನ್‌ಸ್ಟೆàಬಲ್‌ಗ‌ಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next