ಕಾರ್ಕಳ: ನಿರ್ದಿಷ್ಟ ಒಂದು ವಿಚಾರದಲ್ಲಿ ಅಭಿವೃದ್ಧಿಯನ್ನು ಬಯಸದೆ ಎಲ್ಲ ರಂಗಗಳ ಅಭಿವೃದ್ಧಿಯಾಗಬೇಕು. ಆ ಬಗ್ಗೆ ಚಿಂತನೆಗಳನ್ನು ನಡೆಸಿ ಸರ್ವ ಕ್ಷೇತ್ರದಲ್ಲಿ ಕೂಡ ಕ್ಷೇತ್ರವನ್ನು ಅಭಿವೃದ್ಧಿಯ ಪಥದೆಡೆಗೆ ಕೊಂಡೊಯ್ಯುವ ಸಂಕಲ್ಪ ತೊಡಲಾಗಿದೆ ಎಂದು ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಯರ್ಲಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ 2.25 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ, ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿ ಜಾರ್ಕಳ ಪೇಟೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ಯರ್ಲಪಾಡಿ ಗ್ರಾ.ಪಂ. ಅಧ್ಯಕ್ಷೆ ಪ್ರಮೀಳಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.
ತಾ.ಪಂ. ಮಾಜಿ ಅಧ್ಯಕ್ಷ, ಭೂನ್ಯಾಯ ಮಂಡಳಿ ಸದಸ್ಯ ವಿಕ್ರಮ್ ಹೆಗ್ಡೆ, ಜಾರ್ಕಳ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ್ ದಾಸ್ ಹೆಗ್ಡೆ, ಕರ್ವಾಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಅನಂತಪಟ್ಟಾಭಿ ರಾವ್, ನ್ಯಾಯವಾದಿ, ಸದಾನಂದ ಸಾಲಿಯಾನ್, ನಿಕಟಪೂರ್ವ ಜಿ.ಪಂ. ಸದಸ್ಯ ಸುಮಿತ್ ಶೆಟ್ಟಿ ಕೌಡೂರು, ನಿಕಟಪೂರ್ವ ತಾಲೂಕು ಪಂಚಾಯತ್ ಸದಸ್ಯೆ ನಿರ್ಮಲಾ ರಾಣೆ, ಗ್ರಾ.ಪಂ. ಉಪಾಧ್ಯಕ್ಷ ಸುನಿಲ್ ಹೆಗ್ಡೆ, ಬಿಜೆಪಿ ಗ್ರಾಮಸಮಿತಿ ಅಧ್ಯಕ್ಷ ಸಂತೋಷ್ ಅಮೀನ್, ಹಿರಿಯರಾದ ಕಮಲಾಕ್ಷ ನಾಯಕ್, ಉದ್ಯಮಿ ರಮೇಶ್ ಶೆಟ್ಟಿ ಜಾರ್ಕಳ, ನೀರೆ ಗ್ರಾ.ಪಂ. ಅಧ್ಯಕ್ಷೆ ಶಾಲಿನಿ ಉಪಸ್ಥಿತರಿದ್ದರು.
ಪಕ್ಷಕ್ಕೆ ಸೇರ್ಪಡೆ, ಬೀಳ್ಕೊಡುಗೆ
ಯರ್ಲಪಾಡಿ ಗ್ರಾಮದ ಅನ್ಯ ಪಕ್ಷದ ಮಹಿಳಾ ಕಾರ್ಯಕರ್ತೆಯರು ಬಿಜೆಪಿಗೆ ಸೇರ್ಪಡೆಯಾದರು. ಸಭೆಯ ವೇದಿಕೆಯಲ್ಲಿ ಕಳೆದ 8 ವರ್ಷಗಳಲ್ಲಿ ಯರ್ಲಪಾಡಿ ಗ್ರಾಮ ಪಂಚಾಯತ್‌ನಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿದ ಕ್ರಿಯಾಶೀಲ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಮೀಳಾ ನಾಯಕ್ ಅವರನ್ನು ಗ್ರಾಮಸ್ಥರ ಹಾಗೂ ವಿಕಾಸ ಸಂಜೀವಿನಿ ಒಕ್ಕೂಟದ ವತಿಯಿಂದ ಸಮ್ಮಾನಿಸಿ, ಬೀಳ್ಕೊಡಲಾಯಿತು.