ಮಂಗಳೂರು: ನಗರದ ಕುಂಟಿಕಾನದ ವಸತಿ ಸಮುಚ್ಛಯವೊಂದರ ತಡೆಗೋಡೆ ಕುಸಿದು ಬಿದ್ದ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ. ಕುಸಿದು ಬಿದ್ದಿರುವ ಮಣ್ಣಿನಡಿ ಸುಮಾರು 10ಕ್ಕೂ ಮಿಕ್ಕಿ ಕಾರುಗಳು ಹೂತಿರುವ ಶಂಕೆ ವ್ಯಕ್ತವಾಗಿದೆ.
ತಡೆಗೋಡೆಯ ಒಂದು ಭಾಗದ ಗೋಡೆ ಕುಸಿದು ಬಿದ್ದು ಅದರ ಹಿಂದುಗಡೆಯ ಹಾಸ್ಟೆಲ್ ಆವರಣದೊಳಗೆ ಮಣ್ಣು ರಾಶಿಯಾಗಿ ಬಿದ್ದಿದೆ.
ಇದರ ಮತ್ತೊಂದು ಭಾಗದ ಗೋಡೆಯು ಕುಸಿಯುವ ಭೀತಿಯಿದ್ದು, ಕಾರ್ಯಾಚರಣೆಗೆ ತೊಡಕಾಗಿದೆ. ಮಳೆಯೂ ಸುರಿಯುತ್ತಿದ್ದು, ಮತ್ತಷ್ಟು ಮಣ್ಣು ಜರಿದು ಬೀಳುವ ಭೀತಿ ಇರುವ ಕಾರಣ ಕಾರ್ಯಾಚರಣೆಯನ್ನು ಇನ್ನೂ ಆರಂಭವಾಗಿಲ್ಲ.
ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳ, ಸ್ಥಳೀಯ ಪೊಲೀಸರು ಆಗಮಿಸಿದ್ದಾರೆ. ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ ಸ್ಥಳಕ್ಕಾಗಮಿಸಿ ಪರೀಲನೆ ನಡೆಸಿದರು.
ಇದನ್ನೂ ಓದಿ: ಬಿರುಕು ಬಿಟ್ಟ ರಸ್ತೆ: ಹಿರೇಮಗಳೂರು ದೊಡ್ಡ ಕೆರೆಯ ಏರಿ ಒಡೆಯುವ ಭೀತಿ, ಆತಂಕದಲ್ಲಿ ರೈತರು