Advertisement
ನಗರದಲ್ಲಿನ ಈ ಇಕ್ಕಟ್ಟಿನ ಬದುಕು ಮುಂದೆ ಅನೇಕ ಸಮಸ್ಯೆಗಳನ್ನು ತಂದೊಡ್ಡಲಿದೆ ಎನ್ನುವುದು ದೇಶದ ಪ್ರಮುಖ ನಗರವಾದ ಹೊಸದಿಲ್ಲಿಯನ್ನು ನೋಡಿದಾಗ ತಿಳಿದು ಬರುತ್ತದೆ. ಟ್ರಾಫಿಕ್ ಸಮಸ್ಯೆಯನ್ನು ನಿಭಾಯಿಸಲು ಸಾಧ್ಯವಾಗದೇ ಸಮ, ಬೆಸ ಸಂಖ್ಯೆಯಲ್ಲಿ ಗಾಡಿಗಳು ರಸ್ತೆಗಿಳಿಸುವಂತಹ ವ್ಯವಸ್ಥೆ ಅಲ್ಲಿ ಜಾರಿಯಾಗಿದೆ ಅಂದರೆ ಗಂಭೀರತೆಯ ಅರಿವು ನಿಮಗೆ ಬಾರದೆ ಇರಲಾರದು. ಮುಂದುವರಿದಿರುವ ಅನೇಕ ವಿದೇಶಗಳ ನಗರಗಳಲ್ಲಿ ಮೇಲಿನ ಸಮಸ್ಯೆಗಳಿಗೆ ಒಂದೊಂದಾಗಿ ಉತ್ತರ ಕಂಡುಕೊಳ್ಳಲಾಗಿದೆ. ಅದರಲ್ಲಿ ಮೋನೋ ಹ್ಯಾಂಗಿಂಗ್ ರೈಲು ಕೂಡ ಒಂದು.
ನಗರದಲ್ಲಿನ ಜನಸಂಚಾರದ ಒತ್ತಡವನ್ನು ಕಡಿಮೆ ಮಾಡಲು ರೈಲು ಮಾರ್ಗದ ನಿರ್ಮಾಣಕ್ಕೆ ಸರಿಯಾದ ಸ್ಥಳಾವಕಾಶ ನಗರಗಳಲ್ಲಿ ಇಲ್ಲದೇ ಇರುವುದರಿಂದ ರೈಲಿನಂತೆಯೇ ಕಾರ್ಯನಿರ್ವಹಿಸುವ ಮೋನೋ ಹ್ಯಾಂಗಿಂಗ್ ರೈಲುಗಳು ಕಾರ್ಯರೂಪಕ್ಕೆ ಬಂದವು. ಈ ಮೋನೋ ಹ್ಯಾಂಗಿಂಗ್ ರೈಲು ಹೆಸರು ಮತ್ತು ಚಿತ್ರವೇ ಹೇಳುವಂತೆ ಇದು ನಾವು ಕಂಡ ರೈಲಿನಂತೆ ಕಾರ್ಯನಿರ್ವಹಿಸುವುದಿಲ್ಲ. ಇವು ಪಿಲ್ಲರ್‌ಗಳ ಮೂಲಕ ಹ್ಯಾಂಗಿಂಗ್ ರೈಲಿಗೆ ಆಧಾರವಾಗಿ ಸುಧಾರಿತ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿದೆ. ಸಾಂಪ್ರದಾಯಿಕ ರೈಲು ವ್ಯವಸ್ಥೆಗಳ ಮೇಲೆ ಮೋನೋ ರೈಲುಗಳ ಪ್ರಾಥಮಿಕ ಪ್ರಯೋಜನವೆಂದರೆ ಅವುಗಳಿಗೆ ಅಡ್ಡಲಾಗಿ ಮತ್ತು ಲಂಬವಾಗಿ ಕನಿಷ್ಠ ಸ್ಥಳಾವಕಾಶ ಬೇಕಾಗುತ್ತದೆ. ಆಧುನಿಕ ಮೋನೋ ರೈಲ್‌ಗಳು ಕಾಂಕ್ರೀಟ್ ಟ್ರ್ಯಾಕ್‌ನಲ್ಲಿ ರಬ್ಬರ್ ಚಕ್ರಗಳನ್ನು ಬಳಸುವುದರಿಂದ ಶಬ್ದ ರಹಿತವಾಗಿವೆ. ಮೋನೋ ರೈಲ್‌ಗಳು ಭಾರೀ ಅಥವಾ ಲಘು ರೈಲು ವ್ಯವಸ್ಥೆಗಳಿಗಿಂತ ಕಡಿದಾದ ಶ್ರೇಣಿಗಳನ್ನು ಏರಲು ಮತ್ತು ಇಳಿಯಲು ಸಮರ್ಥವಾಗಿವೆ. ಇಂತಹ ಈ ಮೋನೋ ಹ್ಯಾಂಗಿಂಗ್ ರೈಲುಗಳು ಜಪಾನ್‌ನ ಪ್ರಮುಖ ನಗರಗಳಲ್ಲಿ ಕಂಡು ಬರುತ್ತವೆ. ಈಗಾಗಲೇ ಬೆಂಗಳೂರಿನಲ್ಲಿ ಮೆಟ್ರೋ ರೈಲುಗಳು ಚಾಲ್ತಿಯಲ್ಲಿದೆ. ಇವು ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಿ ಸುಗುಮ ಸಂಚಾರಕ್ಕೆ ಸಹಕರಿಸಿದೆ. ಮೆಟ್ರೋ ಬಂದ ಬಳಿಕ ಬೆಂಗಳೂರಿನ ಅದೆಷ್ಟೋ ಜನರು ತಮ್ಮ ವಾಹನಗಳನ್ನು ಬಳಸುವುದನ್ನು ಬಿಟ್ಟು ದಿನನಿತ್ಯದ ಓಡಾಟಕ್ಕೆ ಮೆಟ್ರೋವನ್ನೇ ಅವಲಂಬಿಸಿದ್ದಾರೆ. ಮೆಟ್ರೋ ರೈಲುಗಳ ಆಗಮನ ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಒಂದು ರೀತಿ ಅಲ್ಫಾವಧಿಯ ಪರಿಹಾರವಾಗಿ ಬದಲಾಗಿದೆ.
Related Articles
ವಾಹನಗಳು ಹೆಚ್ಚಾದಂತೆ ವಾಯುಮಾಲಿನ್ಯ, ಪರಿಸರ ಮಾಲಿನ್ಯಗಳು ಅಧಿಕವಾಗುತ್ತಿದೆ. ವಾಹನಗಳಿಂದ ಬಿಡುಗಡೆಯಾಗುವ ಕಾಬೋìನ್ ಡೈ ಆಕ್ಸಿಡ್‌ಗಳು ಮಾನವನ ಆರೋಗ್ಯದ ಮೇಲೂ ಪರಿಣಾಮ ಬೀರಿದೆ. ಮೇನೋ ರೈಲುಗಳಿಂದ ವಾಹನಗಳಿಂದ ಉಂಟಾಗುವ ಮಾಲಿನ್ಯ ಸಮಸ್ಯೆಗಳಿಲ್ಲ. ಇದರಿಂದಾಗಿ ಆರೋಗ್ಯಕ್ಕೆ ಮತ್ತು ಪರಿಸರಕ್ಕೆ ಯಾವುದೇ ಸಮಸ್ಯೆಯಿಲ್ಲ ಮಂಗಳೂರಿನಲ್ಲೂ ಮೇನೋ ರೈಲುಗಳು ಕಾಣುವಂತಾಗಲಿ ಸ್ಮಾರ್ಟ್ ನಗರಿಯಾಗಿ ಬೆಳೆಯುತ್ತಿರುವ ನಮ್ಮ ಮಂಗಳೂರು ನಗರ ಯೋಜಿಸಿಕೊಂಡ ಬೃಹತ್ ಕಾಮಗಾರಿಗಳನ್ನು ಪಾರದರ್ಶಕವಾಗಿ ನಿರ್ಮಿಸುವಲ್ಲಿ ವೆೇಗವನ್ನು ಕಂಡುಕೊಂಡರೆ, ನಗರಕ್ಕೆ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳಿಗೆ ಕತ್ತರಿ ಬೀಳಬಹುದು. ನಗರದಲ್ಲಿ ವಾಹನ ದಟ್ಟಣೆ ದಿನೇ ದಿನೇ ಹೆಚ್ಚುತ್ತಿದ್ದು, ಪರ್ಯಾಯ ದಾರಿಗಳನ್ನು ಕಂಡುಕೊಳ್ಳುವ ಅಗತ್ಯವಿದೆ. ವಿದೇಶಗಳಲ್ಲಿ ಸೃಷ್ಟಿಯಾಗಿರುವ ಹ್ಯಾಂಗಿಂಗ್ ಮೊನೋ ರೈಲಿನಂತಹ ಯೋಜನೆಗಳು ನಮ್ಮ ನಗರದಲ್ಲೂ ಜಾರಿಯಾದರೆ ರಸ್ತೆಗಳಲ್ಲಿ ವಾಹನ ದಟ್ಟಣೆಗೆ ಸ್ವಲ್ಪ ಮಟ್ಟಿಗೆ ಬ್ರೇಕ್ ದೊರಕಲು ಸಾಧ್ಯ ಜತೆಗೆ ಪಾದಚಾರಿಗಳಿಗೆ ಯಾವುದೇ ಸಮಸ್ಯೆಗಳಿಲ್ಲದೆ ರಸ್ತೆಯಲ್ಲಿ ಓಡಾಡಲು ಅನುಕೂಲಕರ ವಾತಾವರಣ ನಿರ್ಮಾಣವಾಗಬಹುದು. ಇದರೊಂದಿಗೆ ಸ್ಮಾರ್ಟ್ ನಗರದ ಕಲ್ಪನೆಗೆ ಈ ಯೋಜನೆಯೂ ಹೇಳಿ ಮಾಡಿಸಿದಂತಿದೆ.
Advertisement
ಎಲ್ಲಿ,ಹೇಗೆ ಉಪಯೋಗ?· ಈ ಮೋನೋ ರೈಲು ವಾಹನದ ಒತ್ತಡವನ್ನು ಎದುರಿಸುವ ನಗರಗಳಲ್ಲಿ ಬಳಸಬಹುದು.
· ಪ್ರಮುಖವಾಗಿ ಸ್ಥಳಾವಕಾಶದ ಕೊರತೆ ಎದುರಿಸುವ ನಗರಗಳಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಬಹುದು.
· ಜನರು ಹೆಚ್ಚು ಹೊತ್ತು ಟ್ರಾಫಿಕ್‌ನಲ್ಲಿ ಕಳೆಯುವುದನ್ನು ತಪ್ಪಿಸುತ್ತದೆ.
· ಪರಿಸರ ಮತ್ತು ಆರೋಗ್ಯ ದೃಷ್ಟಿಯಿಂದ ಉತ್ತಮ. - ವಿಶ್ವಾಸ್ ಅಡ್ಯಾರ್