Advertisement
ದೇಶದ ಪ್ರಮುಖ ನಗರಗಳಲ್ಲಿ ಹೆಚ್ಚಿನ ಜನಸಂಖ್ಯೆ ಇರುವುದರಿಂದಾಗಿ ರಸ್ತೆಗಳಲ್ಲಿ ದಿನಂಪ್ರತಿ ಅಧಿಕ ವಾಹನಗಳು ಓಡಾಡುತ್ತವೆ. ಇನ್ನು ಟ್ರಾಫಿಕ್ ಜಾಮ್ ಉಂಟಾಗಲು ಕಾರಣಗಳನ್ನು ಹುಡುಕುತ್ತ ಹೋದರೆ ಹಲವು ಕಾರಣಗಳು ಮೇಲ್ನೋಟಕ್ಕೆ ಕಾಣಬಹುದು. ದುರಸ್ತಿಗೊಂಡ ರಸ್ತೆಗಳು, ಸರಿಯಾದ ಮಾರ್ಗಸೂಚಿಗಳು ಇಲ್ಲದಿರುವುದು ಮುಖ್ಯವಾಗಿ ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದು. ನಗರಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಲು ಪ್ರಮುಖ ಕಾರಣವೆಂದರೆ ನಗರದ ವಿವಿಧೆಡೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದು. ಇದರಿಂದ ಸಾರ್ವಜನಿಕರು ಎಲ್ಲೆಂದರಲ್ಲಿ ಮತ್ತು ರಸ್ತೆಗಳ ಬದಿಯಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುವುದರಿಂದಾಗಿ ಸಂಚಾರದಲ್ಲಿ ವ್ಯತ್ಯಯಗೊಂಡು ಟ್ರಾಫಿಕ್ ಸಮಸ್ಯೆ ಉದ್ಭವಿಸುತ್ತದೆ. ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವವರ ವಿರುದ್ಧ ಕಠಿನ ಕಾನೂನು ಆದೇಶವನ್ನು ರವಾನಿಸಿದರು ಕೂಡ ಸಾರ್ವಜನಿಕರು ಇದಕ್ಕೆ ಯಾವುದೇ ರೀತಿಯಾಗಿ ಸ್ಪಂದಿಸದಿರುವುದು ಕೂಡ ಪ್ರಮುಖ ಕಾರಣವಾಗಿದೆ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಹೊಸ ಮಾದರಿಯ ಪ್ರಯೋಗ ಇಂದು ಮಾಡಬೇಕಿದೆ. ಈ ನಿಟ್ಟಿನಲ್ಲಿ ಲಿಫ್ಟ್ ಪಾರ್ಕಿಂಗ್ ನಗರದ ಸಂಚಾರ ವ್ಯವಸ್ಥೆಗೆ ಪೂರಕವಾಗಬಲ್ಲದು.
ಲಿಫ್ಟ್ ಪಾರ್ಕಿಂಗ್ ಮಾದರಿಯನ್ನು ನಮ್ಮ ನಗರ ಸಂಚಾರದಲ್ಲಿ ರೂಢಿಸಿಕೊಂಡಾಗ ಹಲವು ಉಪಯೋಗಗಳನ್ನು ಪಡೆಯಬಹುದಾಗಿದೆ. ಮೊದಲು ಟ್ರಾಫಿಕ್ ಸಮಸ್ಯೆಗೆ ಉತ್ತರ ಕಂಡುಕೊಳ್ಳಬಹುದಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಮ್ಮ ವಾಹನಗಳಿಗೆ ಭದ್ರತೆ ಸಿಕ್ಕಂತಾಗುತ್ತದೆ. ಈ ಮಾದರಿಯನ್ನು ಅಳವಡಿಸಿಕೊಳ್ಳುವುದರಿಂದ ನಗರದ ಸಂಚಾರ ವ್ಯವಸ್ಥೆಗೆ ಪೂರಕವಾಗಲಿದೆ. ಲಿಫ್ಟ್ ಪಾರ್ಕಿಂಗ್ ಮಾದರಿಯಾದ ಯೋಜನೆಯಾಗಿದ್ದು ಇದನ್ನು ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿರುವ ಮಂಗಳೂರಿಗೂ ಸಾರ್ವಜನಿಕರ ಸಂಚಾರ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಾಗ ಇದು ನಗರದ ಸುಗಮ ಸಂಚಾರ ವ್ಯವಸ್ಥೆಗೆ ಪೂರಕವಾಗಬಲ್ಲದು. ಏನಿದು ಲಿಫ್ಟ್ ಪಾರ್ಕಿಂಗ್
ಲಿಫ್ಟ್ ಪಾರ್ಕಿಂಗ್ ಇದೊಂದು ಅತ್ಯಾಧುನಿಕವಾದ ಪಾರ್ಕಿಂಗ್ ಮಾರ್ಗ ಎಂದು ತಿಳಿಯಬಹುದು. ಕಾರುಗಳು, ಬೈಕ್‌ಗಳನ್ನು ಪಾರ್ಕಿಂಗ್ ಮಾಡುವಾಗ ಒಂದರ ಮೇಲೆ ಒಂದರಂತೆ ಪಾರ್ಕಿಂಗ್ ಮಾಡುವ ಪ್ರಕ್ರಿಯೆಯಾಗಿದೆ. ಈ ಲಿಫ್ಟ್ ಪಾರ್ಕಿಂಗ್ ಈಗಾಗಲೇ ಹಲವು ಗ್ಯಾರೇಜ್‌ಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಆದರೆ ಈ ಮಾರ್ಗವನ್ನು ಸಂಚಾರ ವ್ಯವಸ್ಥೆಯಲ್ಲಿ ಅತ್ಯಾಧುನಿಕವಾಗಿ ಬಳಸಿಕೊಂಡಾಗ ಇದರಿಂದ ಪಾರ್ಕಿಂಗ್ ಸಮಸ್ಯೆಗಳಿಗೆ ಮಾರ್ಗವನ್ನು ಕಂಡುಕೊಳ್ಳಬಹುದಾಗಿದೆ.
Related Articles
ಕಾರು ಅಥವಾ ವಾಹನಗಳನ್ನು ಪಾರ್ಕಿಂಗ್ ಮಾಡಬೇಕಾದರೆ ನೇರವಾಗಿ ಪಾರ್ಕಿಂಗ್ ಸ್ಲಾಟ್‌ಗೆ ತೆರಳಿ ನಮ್ಮ ಕಾರನ್ನು ಅಲ್ಲಿ ಬಿಟ್ಟು, ನಾವು ಹೊರಗೆ ಬರಬೇಕು. ಅಲ್ಲಿ ಲಿಫ್ಟ್ ನಮ್ಮ ವಾಹನವನ್ನು ನೋಂದಾಯಿಸಿದ ಪಾರ್ಕಿಂಗ್ ಸ್ಲಾಟ್‌ಗೆ ಎವಿಲೇಟರ್‌ನ ಮೂಲಕ ಹೋಗಿ ಬಿಡುತ್ತದೆ. ಈ ಲಿಫ್ಟ್ ಪಾರ್ಕಿಂಗ್‌ನ್ನು ಈಗಾಗಲೇ ಚೀನ, ಅಮೆರಿಕ ದೇಶಗಳು ತಮ್ಮ ದೇಶಗಳಲ್ಲಿ ರೂಢಿಸಿಕೊಂಡು ದೇಶದ ಟ್ರಾಫಿಕ್ ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡಿವೆ.
Advertisement
– ಅಭಿನವ