Advertisement
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಲಡ್ಕ ಪ್ರಭಾಕರ್‌ಭಟ್, ಜಗದೀಶ್ ಕಾರಂತ್, ಪ್ರಮೋದ್ ಮುತಾಲಿಕ್ ಅವರುಗಳು ಕೋಮುಭಾವನೆ ಪ್ರಚೋಧಿಸುವ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಆದರೆ, ಸಿದ್ದರಾಮಯ್ಯ ಅವರ ಸರ್ಕಾರ ಇವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
Related Articles
Advertisement
ವೈಯಕ್ತಿಕ ಟೀಕೆ ಮಾಡಿಲ್ಲ: ನಾನು ವಿಷಯಾಧಾರಿತ, ಸೈದ್ಧಾಂತಿಕವಾಗಿ ಮಾತನಾಡುತ್ತೇನೆಯೇ ಹೊರತು ವೈಯಕ್ತಿಕವಾಗಿ ಮಾತನಾಡಲ್ಲ. ನೀವು ಧಮಕಿ ಹಾಕಿಸಿ ನನ್ನ ಮಾತನ್ನು ನಿಲ್ಲಿಸುತ್ತೇನೆ ಅನ್ನುವುದೆಲ್ಲ ನಡೆಯಲ್ಲ ಎಂದು ಎಚ್ಚರಿಕೆ ನೀಡಿದರು. ನಾನು ಮತ್ತು ಸಿದ್ದರಾಮಯ್ಯ ಅವರು ಒಂದೇ ಸಮಾಜದವರು.
ಕೆಲವು ನಿವೃತ್ತ ಅಧಿಕಾರಿಗಳು ಸಿದ್ದರಾಮಯ್ಯ ಅವರ ವಿರುದ್ಧ ಏಕೆ ಮಾತಾಡುತ್ತೀರಾ ಎಂದು ಕೇಳುತ್ತಾರೆ, ನಾನು ವಿಷಯಾಧಾರಿತವಾಗಿ ಮಾತನಾಡುತ್ತೇನೆ. ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ನಾನು ಏನು ಹೇಳಬೇಕು ಅಂದು ಕೊಂಡಿದ್ದೇನೋ,ಅದನ್ನು ಹೇಳಿಯೇ ಹೇಳುತ್ತೇನೆ ಎಂದರು.
ಬೆಲೆಯಿಲ್ಲ: ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೇಳುವವರು, ಕೇಳುವವರೇ ಇಲ್ಲದಂತಾಗಿದೆ. ಪೊಲೀಸ್ ಅಧಿಕಾರಿಗಳಿಗೆ ಮೂರು ಕಾಸಿನ ಬೆಲೆ ಇಲ್ಲದಂತೆ ಮಾಡಿದ್ದಾರೆ. ಅವರ ದರ್ಬಾರಿಗೆ ಎಲ್ಲವು ಸತ್ತು ಹೋಗಿದೆ ಎಂದರು.
ಬಿಎಸ್‌ವೈ ಗುಣಗಾನ: ರಾಜಕೀಯದಲ್ಲಿ ಯಾರು ಎಲ್ಲಿ ಬೇಕಾದರೂ ಹೋಗಬಹುದು. ಬಿ.ಎಸ್.ಯಡಿಯೂರಪ್ಪ ಮುಕ್ತ ಮನಸ್ಸಿನವರು, 2008ರ ಚುನಾವಣೆಯಲ್ಲಿ ಸೋತರೂ ಎಂ.ಮಹದೇವ್ ಅವರನ್ನು ಆಹಾರ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿದರು. ವಿ.ಸೋಮಣ್ಣ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿಸಿದರು. ಸಿ.ಎಚ್.ವಿಜಯಶಂಕರ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ, ಅರಣ್ಯ ಸಚಿವರನ್ನಾಗಿ ಮಾಡಿದ್ದರು, ಅದಕ್ಕಿಂತ ಇನ್ನೇನು ಮಾಡಬೇಕಿತ್ತು ಎಂದು ಮಾರ್ಮಿಕವಾಗಿ ನುಡಿದರು.