Advertisement
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರವಾಹ ಪ್ರದೇಶಗಳ ಅಧ್ಯಯನಕ್ಕಾಗಿ ಬೆಳ್ತಂಗಡಿ ತಾಲೂಕಿಗೆ ಆಗಮಿಸಿದ ಸಂದರ್ಭ, ಪ್ರವಾಹದ ನೀರು ಮನೆಗೆ ನುಗ್ಗಿ ತೊಂದರೆಯಾದವರಿಗೆ ತತ್‌ಕ್ಷಣ 10 ಸಾವಿರ ರೂ.ಗಳ ಪರಿಹಾರ ವಿತರಿಸುವಂತೆ ಆದೇಶಿಸಿದ್ದರು. ಅದರಂತೆ ಬಂಟ್ವಾಳದ 14 ಗ್ರಾಮಗಳ ಒಟ್ಟು 507 ಮನೆಗಳ 2,339 ಮಂದಿ ತೊಂದರೆ ಅನುಭವಿಸಿದ್ದು, ಅಂತಹ ಕುಟುಂಬಗಳಿಗೆ ತತ್‌ಕ್ಷಣ ಪರಿಹಾರ ತಲುಪಿದೆ.
ಬಂಟ್ವಾಳ ತಾಲೂಕು ಆಡಳಿತ ಹೇಳುವ ಪ್ರಕಾರ, ತತ್‌ಕ್ಷಣದ ಪರಿಹಾರ ಪಡೆ ದಿರುವ ಬಹುತೇಕ ಮನೆ ಗಳಿಗೆ ನೀರು ಬಂದು ತೊಂದರೆಯಾಗಿರುವುದು ಬಿಟ್ಟರೆ ಯಾವುದೇ ರೀತಿಯ ಹಾನಿಯಾಗಿಲ್ಲ. ಹೀಗಾಗಿ ಪ್ರಾಕೃತಿಕ ವಿಕೋಪದಿಂದ ಹಾನಿಯಾಗಿರುವ ಮನೆ ಗಳಿಗೆ ಪರಿಹಾರ ಬಾಕಿ ಇದೆ. ತಾಲೂಕಿನಲ್ಲಿ ಜೂನ್ ಅಂತ್ಯ ದವರೆಗೆ ಒಟ್ಟು 91 ಸಣ್ಣಪುಟ್ಟ ಪ್ರಕರಣ ಗಳಿಗೆ 5.06 ಲ.ರೂ. ಪರಿಹಾರ ವಿತರಿಸಲಾಗಿದೆ. ಆದರೆ ಜುಲೈ ತಿಂಗಳ ಕೊನೆಯ ವಾರ ಹಾಗೂ ಆಗಸ್ಟ್ ತಿಂಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಹಾನಿಯಾದ ಮನೆಗಳ ವಿವರ
ಸರಕಾರವು ಪ್ರವಾಹ ಹಾಗೂ ಪ್ರಾಕೃತಿಕ ವಿಕೋಪದಿಂದ ಹಾನಿಯಾದ ಮನೆಗಳಿಗೆ ಅದರ ಹಾನಿಯ ಪ್ರಮಾಣದ ಶೇಕಡಾವಾರು ಲೆಕ್ಕಾಚಾರದಲ್ಲಿ ಪರಿಹಾರ ಮೊತ್ತವನ್ನು ನಿಗದಿಪಡಿಸಿದ್ದು, ಶೇ. 15ರಿಂದ ಶೇ. 25 ಮನೆ ಹಾನಿಯಾದವರಿಗೆ 25 ಸಾವಿರ ರೂ., ಶೇ. 75 ವರೆಗೆ ಹಾನಿಯಾದವರಿಗೆ 1 ಲಕ್ಷ ರೂ. ಹಾಗೂ ಅದಕ್ಕಿಂತ ಹೆಚ್ಚಿನ ಹಾನಿಯಾದವರಿಗೆ 5 ಲಕ್ಷ ರೂ. ಪರಿಹಾರ ಸಿಗಲಿದೆ. ತಾಲೂಕಿನಲ್ಲಿ ಪ್ರಸ್ತುತ ಶೇ. 15 ರಿಂದ ಶೇ. 25 ಹಾನಿಯಾದ 66 ಮನೆಗಳು, ಶೇ. 26ರಿಂದ ಶೇ. 75ರ ವರೆಗೆ ಹಾನಿಯಾದ 46 ಮನೆಗಳು ಹಾಗೂ ಶೇ. 75ರಿಂದ ಶೇ. 100 ಹಾನಿಯಾದ ಒಟ್ಟು 21 ಮನೆಗಳನ್ನು ಗುರುತಿಸಿದ್ದು, ಒಟ್ಟು 133 ಮನೆಗಳಿಗೆ ಹಾನಿಯಾಗಿದೆ ಎಂದು ತಾಲೂಕು ಆಡಳಿತ ವಿವರ ನೀಡುತ್ತದೆ.
Related Articles
ಪ್ರವಾಹದಿಂದ ನೀರು ನುಗ್ಗಿ ತೊಂದರೆಗೊಳಗಾದ ಕುಟುಂಬಗಳಿಗೆ ತತ್‌ಕ್ಷಣದ ಪರಿಹಾರ ವಿತರಿಸಲಾಗಿದ್ದು, ಪಾಣೆಮಂಗಳೂರು ಗ್ರಾಮದಲ್ಲಿ 138 ಮನೆಗಳು, ಬಂಟ್ವಾಳ ಕಸ್ಬಾದಲ್ಲಿ 105, ಕಡೇಶ್ವಾಲ್ಯದಲ್ಲಿ 9, ಬರಿಮಾರಿನಲ್ಲಿ 3, ಅಮಾಡಿಯಲ್ಲಿ 17, ಬಂಟ್ವಾಳ ಮೂಡದಲ್ಲಿ 101, ಪುದುವಿನಲ್ಲಿ 15, ಸಜಿಪನಡುವಿನಲ್ಲಿ 27, ಸಜಿಪಮುನ್ನೂರಿನಲ್ಲಿ 8, ಪೆರ್ನೆ/ಬಿಳಿಯೂರಿನಲ್ಲಿ 10, ಮಣಿನಾಲ್ಕೂರಿನಲ್ಲಿ 3, ನಾವೂರಿನಲ್ಲಿ 56, ತುಂಬೆಯಲ್ಲಿ 13 ಹಾಗೂ ಸಜಿಪಮೂಡದಲ್ಲಿ 2 ಮನೆಗಳು ಸಹಿತ ಒಟ್ಟು 507 ಮನೆಗಳಿಗೆ ತಲಾ 10 ಸಾವಿರ ರೂ.ಗಳ ಪರಿಹಾರ ಮೊತ್ತವನ್ನು ನೀಡಲಾಗಿದೆ.
Advertisement
ಹಾನಿ ವಿವರ ದಾಖಲೀಕರಣತಾಲೂಕಿನಲ್ಲಿ ಪ್ರವಾಹ ಬಂದು ತೊಂದರೆಯಾದ 507 ಕುಟುಂಬಗಳಿಗೆ ಪರಿಹಾರ ಮೊತ್ತ ಹಾಗೂ ಕಿಟ್ ವಿತರಣೆ ನಡೆದಿದೆ. ಉಳಿದಂತೆ ತಾಲೂಕಿನಲ್ಲಿ ಹಾನಿಯಾದ ಮನೆಗಳ ವಿವರವನ್ನು
ಪೋರ್ಟಲ್‌ಗೆ ದಾಖಲೀಕರಣ ಮಾಡಲಾಗಿದ್ದು, ರಾಜೀವ್ ಗಾಂಧಿ ವಸತಿ ನಿಗಮದಿಂದ ಅನುದಾನ ಹಂತ ಹಂತವಾಗಿ ಬಿಡುಗಡೆಯಾಗುತ್ತದೆ.
-ರಶ್ಮಿ ಎಸ್.ಆರ್., ತಹಶೀಲ್ದಾರ್, ಬಂಟ್ವಾಳ ಕಿರಣ್ ಸರಪಾಡಿ