Advertisement
ಅ. 29ರಂದು ಅಪರಾಹ್ನ ಬೊರಿವಲಿ ಐಸಿ ಕಾಲನಿಯಲ್ಲಿರುವ ಸಂಘದ ನೂತನ ಶಿಕ್ಷಣ ಸಂಕೀರ್ಣ ಸ್ಥಾಪನೆಗೊಳ್ಳಲಿರುವ ಸ್ಥಳದಲ್ಲಿ ಜರಗಿದ ಕಾಮಗಾರಿ ಚಾಲನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೂತನ ವಿದ್ಯಾ ಸಂಸ್ಥೆಗಾಗಿ 2020ರಲ್ಲಿ ಸಂಘದ ಅಧ್ಯಕ್ಷರಾಗಿದ್ದ ಪದ್ಮನಾಭ ಎಸ್. ಪಯ್ಯಡೆ ಮತ್ತು ಬೊರಿವಲಿ ಶಿಕ್ಷಣ ಸಮಿತಿಯ ಕಾರ್ಯಾ ಧ್ಯಕ್ಷ ಮುಂಡಪ್ಪ ಎಸ್. ಪಯ್ಯಡೆ ಅವರ ಕಾರ್ಯಾವಧಿಯಲ್ಲಿ ಜಮೀನನ್ನು ಖರೀದಿ ಸಲಾಗಿದ್ದು, ಈಗ ವಿದ್ಯಾ ಸಂಸ್ಥೆಯ ಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ನನ್ನ ಮೇಲೆ ಬಿದ್ದಿ ರುವುದು ಯೋಗಾನುಯೋಗ ಎಂದು ಭಾವಿ ಸುತ್ತೇನೆ. ಸಂಸದರಾದ ಗೋಪಾಲ್ ಶೆಟ್ಟಿ ಅವರ ಮಾರ್ಗ ದರ್ಶನ, ಸಹಕಾರ ಪ್ರೋತ್ಸಾಹ ವನ್ನು ಮರೆಯು ವಂತಿಲ್ಲ. ಬೊರಿವಲಿ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಡಾ| ಪಿ. ವಿ. ಶೆಟ್ಟಿ ಅವರ ದಕ್ಷ ನೇತೃತ್ವದಲ್ಲಿ ಸಮಿತಿಯ ಪದಾಧಿಕಾರಿಗಳು, ಯೋಜನಾಭಿವೃದ್ಧಿ ಸಮಿತಿಯ ಸಂಚಾಲಕ ರವಿ ಎಸ್. ಶೆಟ್ಟಿ ಸಾಯಿಪ್ಯಾಲೇಸ್, ಸಹ ಸಂಚಾಲಕ ಕಿರಣ್ ಶೆಟ್ಟಿ ಆಲ್‌ಕಾರ್ಗೋ ಸಹಿತ ಎಲ್ಲ ಸದಸ್ಯರು ಅತ್ಯು ತ್ತಮ ರೀತಿಯಿಂದ ಸೇವಾ ನಿರತರಾಗಿ ನನಗೆ ಸಂಪೂರ್ಣ ಸಹಕಾರ, ಪ್ರೋತ್ಸಾಹ ನೀಡುತ್ತಿ ದ್ದಾರೆ. ದಾನಿಗಳೂ ಈ ಯೋಜನೆಗೆ ದೇಣಿಗೆ ನೀಡಲು ಸ್ವಯಂ ಮುಂದೆ ಬರುತ್ತಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ನೂತನ ಶಿಕ್ಷಣ ಸಂಸ್ಥೆಯು ಎರಡು ನೆಲ ಮಹಡಿ ಸಹಿತ ಏಳು ಮಹಡಿಗಳನ್ನು ಹೊಂದಲಿದ್ದು, ಈಜು ಕೊಳದ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸುಮಾರು 3,000 ವಿದ್ಯಾರ್ಥಿಗಳ ಇದರ ಪ್ರಯೋ ಜನ ಪಡೆಯ ಲಿದ್ದಾರೆ. ವಿದ್ಯಾರ್ಥಿಗಳು ಮತ್ತು ಪಾಲಕರ ಆವಶ್ಯಕತೆಗಳಿಗೆ ಅನುಸಾರ ವಿವಿಧ ಸೌಲಭ್ಯಗಳೊಂದಿಗೆ ಉತ್ತಮ ಗುಣ ಮಟ್ಟದ ಶಿಕ್ಷಣ ಬೋಧನೆಗೆ ಪ್ರಾಧಾನ್ಯತೆ ನೀಡಲಾಗುವುದು. ಈ ಶಿಕ್ಷಣ ಸಂಕುಲದಲ್ಲಿ ಐಜಿಸಿ ಎಚ್‌ಇ ಕ್ಯಾಂಬ್ರಿಜ್ ಯೂನಿವರ್ಸಿಟಿ ಕೋರ್ಸ್, ಐಬಿ ಹಾಗೂ ಸಿಬಿಎಸ್‌ಇ ಕೋರ್ಸ್‌ಗಳನ್ನು ತೆರೆಯಲಾಗುವುದು. ಸುಮಾರು 110 ಕೋ. ರೂ. ಗಳಿಗೂ ಅಧಿಕ ವೆಚ್ಚದಿಂದ ನಿರ್ಮಾಣಗೊಳ್ಳಲಿರುವ ಈ ಯೋಜನೆಯನ್ನು ಯಶಸ್ವಿಗೊಳಿಸಲು ಬಂಟ ಬಾಂಧವರು, ದಾನಿಗಳ, ಮುಂದೆ ಬರಬೇಕು ಎಂದು ವಿನಂತಿಸಿದರು.
Related Articles
Advertisement
ನೂತನ ಶಿಕ್ಷಣ ಕಾಮಗಾರಿಯನ್ನು ಸಂಸದ ಗೋಪಾಲ್ ಶೆಟ್ಟಿ ಅವರು ದೀಪಪ್ರಜ್ವಲಿಸಿ, ತೆಂಗಿನ ಕಾಯಿ ಒಡೆದು ಉದ್ಘಾಟಿಸಿದರು. ಆರಂಭದಲ್ಲಿ ಶೈಲಜಾ ಶೆಟ್ಟಿ ಪ್ರಾರ್ಥನೆಗೈದರು. ಸಂಘದ ಉಪಾಧ್ಯಕ್ಷ ಉಳೂ¤ರು ಮೋಹನ್‌ದಾಸ್ ಶೆಟ್ಟಿ ಸ್ವಾಗತಿಸಿದರು. ವೇದಿಕೆಯಲ್ಲಿ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್. ಕೆ. ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಹರೀಶ್ ಡಿ. ಶೆಟ್ಟಿ, ಜತೆ ಕಾರ್ಯದರ್ಶಿ ದಿವಾಕರ ಶೆಟ್ಟಿ ಇಂದ್ರಾಳಿ, ಜತೆ ಕೋಶಾಧಿಕಾರಿ ಮುಂಡಪ್ಪ ಎಸ್. ಪಯ್ಯಡೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾಕೃಷ್ಣ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸಾಗರ್ ಡಿ. ಶೆಟ್ಟಿ, ಬೊರಿವಲಿ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಡಾ| ಪಿ. ವಿ. ಶೆಟ್ಟಿ, ಉಪ ಕಾರ್ಯಾಧ್ಯಕ್ಷರಾದ ಎರ್ಮಾಳ್ ಹರೀಶ್ ಶೆಟ್ಟಿ, ಮಹೇಶ್ ಎಸ್. ಶೆಟ್ಟಿ, ಕಾರ್ಯದರ್ಶಿ ಡಾ| ಪ್ರಭಾಕರ ಶೆಟ್ಟಿ ಬೋಳ, ಕೋಶಾಧಿಕಾರಿ ಸಿಎ ಅಶೋಕ್ ಶೆಟ್ಟಿ, ಯೋಜನಾಭಿವೃದ್ಧಿಯ ಸಂಚಾಲಕ ರವಿ ಎಸ್. ಶೆಟ್ಟಿ ಸಾಯಿಪ್ಯಾಲೇಸ್, ಸಹ ಸಂಚಾಲಕ ಕಿರಣ್ ಶೆಟ್ಟಿ ಆಲ್‌ಕಾರ್ಗೋ, ಶಾಲಾಭಿವೃದ್ಧಿ ಮತ್ತು ಶೈಕ್ಷಣಿಕ ಉಪಸಮಿತಿಯ ಸಂಚಾಲಕ ನಿತ್ಯಾನಂದ ಹೆಗ್ಡೆ ಮತ್ತಿತರು ಉಪಸ್ಥಿತರಿದ್ದರು.
ಸಂಘದ ಉಪಸಮಿತಿ, ಪ್ರಾದೇಶಿಕ ಸಮಿ ತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಂಟರ ವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು.
ಬಂಟರ ಸಂಘದ ಮೂರನೇ ಶಿಕ್ಷಣ ಸಂಸ್ಥೆಯಾಗಿ ರೂಪುಗೊಳ್ಳುತ್ತಿರುವ ಬೊರಿವಲಿ ಶಿಕ್ಷಣ ಯೋಜನೆಗೆ ತನ್ನಿಂದಾದ ಸಹಕಾರ ನೀಡುತ್ತೇನೆ. ಯೋಜನೆಯು ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರಲು ಬೊರಿವಲಿ ಶಿಕ್ಷಣ ಸಮಿ ತಿಯು ಸಂಘದ ಅಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ ಮತ್ತು ಪದಾಧಿಕಾರಿ ಗಳೊಂದಿಗೆ ಶ್ರಮಿಸುತ್ತಿದೆ. ಅವರೆಲ್ಲರ ಸಾಧನೆ ಅಭಿನಂದನೀಯ. ಯಾವುದೇ ಕಾರ್ಯಯೋಜನೆಗಳು ಆರಂಭಗೊಳ್ಳುವಾಗ ಕೆಲವೊಂದು ಅಡೆ ತಡೆ ಗಳು ಸಹಜ. ಅದನ್ನು ಎದುರಿಸಿ ಆತ್ಮ ಸಮರ್ಪಣೆಯೊಂದಿಗೆ ಕಾರ್ಯ ನಿರ್ವಹಿಸಿದಾಗ ಯಶಸ್ಸು ನಮ್ಮದಾಗುತ್ತದೆ. ಪರಿಸರದ ಬಂಟ ಬಾಂಧ ವರಿಗೆ ಹಾಗೂ ಇತರರಿಗೆ ಈ ವಿದ್ಯಾಲಯದಿಂದ ಹೆಚ್ಚಿನ ಪ್ರಯೋಜನ ಸಿಗುವಂತಾಗಲಿ.-ಗೋಪಾಲ್ ಶೆಟ್ಟಿ, ಸಂಸದ
ಬೊರಿವಲಿ ಶಿಕ್ಷಣ ಸಂಸ್ಥೆಗೆ ಈ ಹಿಂದೆಯೇ ಅದ್ದೂರಿಯಿಂದ ಅಡಿಗಲ್ಲು ಹಾಕಿರುವುದು ನೆನಪಿಗೆ ಬರುತ್ತಿದೆ. ನಿಕಟಪೂರ್ವ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರ ಅವಧಿಯಲ್ಲಿ ಸಂಕಲ್ಪಗೊಂಡ ಈ ಯೋಜನೆಯು ಇದೀಗ ಅಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ ಅವರ ನೇತೃತ್ವದಲ್ಲಿ ಮುಂದುವರಿದು ಯಶಸ್ವಿ ಯೋಜನೆಗಾಗಿ ಹೆಸರು ಪಡೆಯಲಿ. ಬೊರಿವಲಿ ಶಿಕ್ಷಣ ಸಮಿತಿಯು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿದ್ದು, ಅದಕ್ಕಾಗಿ ಸಮಿತಿಯನ್ನು ಅಭಿನಂದಿಸುತ್ತಿದ್ದೇನೆ.-ಐಕಳ ಹರೀಶ್ ಶೆಟ್ಟಿ, ಅಧ್ಯಕ್ಷ, ಜಾಗತಿಕ ಬಂಟರ ಸಂಘ ಮುಂಬಯಿ
ಚಿತ್ರ-ವರದಿ: ಪ್ರೇಮನಾಥ್ ಶೆಟ್ಟಿ ಮುಂಡ್ಕೂರು