Advertisement

ಕುಷ್ಟಗಿ ಫ್ಲೈಓವರ್‌ ಕಾಮಗಾರಿ ಪೂರ್ಣಗೊಳಿಸಿ

11:54 AM Sep 01, 2019 | Team Udayavani |

ಕೊಪ್ಪಳ: ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-50 ರಲ್ಲಿ ನಿರ್ಮಾಣವಾಗುತ್ತಿರುವ ಕುಷ್ಟಗಿ ಫ್ಲೈ ಓವರ್‌ ಕಾಮಗಾರಿಯನ್ನು ನ.1ರೊಳಗಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಸಂಗಣ್ಣ ಕರಡಿ ಅವರು ಸಂಬಂಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ, ಮೇಲ್ಸೆತುವ ಕಾಮಗಾರಿಗಳ ಹಾಗೂ ರೈಲ್ವೆ ಎ.ಆರ್‌.ಡಿ.ಬಿ ಪ್ರಗತಿ ಕುರಿತು ಸಭೆ ಅವರು ಮಾತನಾಡಿದರು.

ಹುನಗುಂದ-ಹೊಸಪೇಟೆ ರಸ್ತೆಯ ಎನ್‌ಎಚ್-50 (ಹಳೆ ಎನ್‌ಎಚ್-13) ರಲ್ಲಿ ಡಿಬಿಎಫ್‌ಒಟಿ ಟೋಲ್ ಆಧಾರದ ಮೇಲೆ ಎಂ.ಎಸ್‌ ಜಿ.ಎಂ.ಆರ್‌, ಒ.ಎಸ್‌.ಇ, ಎಚ್.ಎಚ್.ಎಚ್ ಪ್ರೖ.ಲಿಗೆ ಕುಷ್ಟಗಿ ಪಟ್ಟಣದಲ್ಲಿ ಫ್ಲೈ ಓವರ್‌ ನಿರ್ಮಾಣ ಕಾಮಗಾರಿ ನೀಡಿದೆ. ಈ ಕಾಮಗಾರಿ ಪೂರ್ಣಗೊಂಡಲ್ಲಿ ಹುನಗುಂದ, ಇಳಕಲ್, ಕುಷ್ಟಗಿ, ಹೊಸಪೇಟೆ, ಸೇರಿದಂತೆ ಪ್ರಮುಖ ಪಟ್ಟಣಗಳ ಸಂಚಾರಕ್ಕೆ ಅನುಕೂಲವಾಗಲಿದೆ. ಸಿಒಎಸ್‌ ಅಡಿಯಲ್ಲಿ 66.58 ಕೋಟಿ ರೂ.ವೆಚ್ಚದಲ್ಲಿ ಫ್ಲೆ ೖ ಓವರ್‌ ಮತ್ತು ವಿಯುಪಿ ನಿರ್ಮಾಣ ಹಂತದಲ್ಲಿರುವ ಈ ಪ್ರಗತಿಯುವ ತ್ವರಿತಗೊಂಡು ನ. 1 ರಂದು ಲೋಕಾರ್ಪರ್ಣೆಗೊಳ್ಳಬೇಕು. ಸಂಬಂಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ರಸ್ತೆಯಲ್ಲಿರುವ ಪ್ಯಾಚ್ ವರ್ಕ್‌ ಸರಿಪಡಿಸಬೇಕು. ಯಾವುದೇ ಅಡೆತಡೆಯಿಲ್ಲದೆ ಸಂಚಾರ ಸುಗಮವಾಗಿ ಸಾಗಲು ಅನುವು ಮಾಡಿಕೊಡಬೇಕು. ಅಪಘಾತ ಸ್ಥಳಗಳಲ್ಲಿ ಅಥವಾ ಸಾರ್ವಜನಿಕರ ಓಡಾಟದ ಸ್ಥಳಗಳಲ್ಲಿ ಸೂಚನಾ ಫಲಕ ಅಳವಡಿಸಿ. ಕೊಪ್ಪಳದ ಹೊರ ವಲಯದ ಹೊಸಪೇಟೆ-ಹುಬ್ಬಳ್ಳಿ ಬೈಪಾಸ್‌ ಕಾಮಗಾರಿಯನ್ನು ತ್ವರಿತಾವಾಗಿ ಪೂರ್ಣಗೊಳಿಸಬೇಕು. ಬೈಪಾಸ್‌ ನಡುವೆ ಬರುವ ಮೇಲ್ಸೆತುವೆ ಕಾಮಗಾರಿಗಳನ್ನು ಸಹ ವೇಗವಾಗಿ ಪೂರ್ಣಗೊಳಿಸಬೇಕು. ಕೊಪ್ಪಳ ನಗರದಲ್ಲಿ ಹಾದು ಹೋಗಿರುವ ಎನ್‌.ಎಚ್-63 ರಲ್ಲಿ ಹಾಗೂ ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ಬ್ಲಾಕ್‌ ಸ್ಪಾಟ್ ಗುರುತಿಸಿ ಗುತ್ತಿಗೆದಾರರಿಗೆ ಸಲ್ಲಿಸುವಂತೆ ಜಿಲ್ಲಾ ಪೊಲೀಸ್‌ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.

ಮುನಿರಾಬಾದ್‌-ಹೊಸಪೇಟೆ ಎಲ್.ಸಿ. ಸಂಖ್ಯೆ 79ರಲ್ಲಿ ರಸ್ತೆ ಮೇಲ್ಸೆತುವೆ ನಿರ್ಮಾಣ ಮಾಡುವ ಕುರಿತಂತೆ ಅಗತ್ಯವಿರುವ 3000 ಚ.ಮೀ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲು ಉಪ ಮುಖ್ಯ ಇಂಜಿನಿಯರ್‌, ಕನ್ಸ್‌ಟ್ರಕ್ಷನ್‌ ಕೋರಿದ್ದು, ಜಂಟಿ ಸ್ಥಳ ತನಿಖೆ ನಡೆಸಿ ಅಳತೆ ಕಾರ್ಯ ನಿರ್ವಹಿಸಿ ನಿಖರ ವಿವರಗಳನ್ನು ಸಲ್ಲಿಸುವಂತೆ ತಹಶೀಲ್ದಾರ್‌, ರೈಲ್ವೆ ಇಲಾಖೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಗಿಣಗೇರಾ ಗ್ರಾಮ-ಕೊಪ್ಪಳ ತಾಲೂಕು ರಸ್ತೆ ಮೇಲ್ಸೆತುವೆ ಎಲ್.ಸಿ ಸಂಖ್ಯೆ 72ರಲ್ಲಿ ರಸ್ತೆ ಮೇಲಸೇತುವೆ ನಿರ್ಮಾಣ ಯೋಜನೆಗೆ ಹಾಗೂ ಕೊಪ್ಪಳ ನಗರ-ಕುಷ್ಟಗಿ ರಸ್ತೆಯ ಎಲ್.ಸಿ. ಸಂಖ್ಯೆ 66ರಲ್ಲಿ ರಸ್ತೆ ಮೇಲ್ಸೆತುವೆ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಪ್ರಾಥಮಿಕವಾಗಿ ಅನುಮೋದನೆಯಾಗಿದೆ ಎಂದರು.

Advertisement

ಈ ಹಿಂದೆ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿದಾಗ ರೈಲ್ವೆ ಹಾಗೂ ಪಿಡಬ್ಲೂ ್ಯಡಿ ಅಧಿಕಾರಿ ವರ್ಗ ಯೋಜನೆಗಾಗಿ ಜಮೀನುಗಳ ಅವಶ್ಯಕತೆಯಿಲ್ಲ ಎಂದು ತಿಳಿಸಿದ್ದಾರೆ. ರಸ್ತೆ ಕೆಳ ಸೇತುವೆ ನಿರ್ಮಾಣ ಯೋಜನೆಗೆ ರೈಲ್ವೆ ಇಲಾಖೆಯಿಂದ ನಕ್ಷೆಯೊಂದಿಗೆ ವರದಿ ಸಲ್ಲಿಸಬೇಕು. ಈ ಕುರಿತು ಸ್ವಾಧೀನಕ್ಕೆ ಒಳಪಡುವ ಖಾಸಗಿ ಜಮೀನಿನ ಸ್ಥಳ ತನಿಖೆ ಮಾಡಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಡಿಸಿ ಪಿ.ಸುನೀಲ್ ಕುಮಾರ್‌, ಎಸ್ಪಿ ರೇಣುಕಾ ಸುಕುಮಾರ್‌, ಎಸಿ ಸಿ.ಡಿ. ಗೀತಾ ಸೇರಿದಂತೆ ರೈಲ್ವೆ ಇಲಾಖೆಯ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ತಹಶೀಲ್ದಾರರು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next