Advertisement

ವೀಕೆಂಡ್ ಕರ್ಫ್ಯೂ ವೇಳೆ ಮದ್ಯ ಮಾರಾಟ ಸಂಪೂರ್ಣ ನಿಷೇಧ

08:08 PM Jan 06, 2022 | Team Udayavani |

ಬೆಂಗಳೂರು: ವೀಕೆಂಡ್ ಕರ್ಫ್ಯೂ ವೇಳೆ ಬಾರ್ , ಪಬ್ ಗಳನ್ನು ತೆರೆಯುವ ಹಾಗಿಲ್ಲ ಎಂದು ಸರಕಾರ ಕಟ್ಟು ನಿಟ್ಟಿನ ಹೊಸ ಮಾರ್ಗಸೂಚಿಯನ್ನು ಗುರುವಾರ ಪ್ರಕಟಿಸಿದೆ.

Advertisement

ವಾರಾಂತ್ಯದ ಕರ್ಫ್ಯೂ ವೇಳೆ ಬಾರ್, ಪಬ್  ಮತ್ತು ರೆಸಾರ್ಟ್ ಗಳನ್ನು ತೆರೆಯದಂತೆ ಆಯಾ ವೃತ್ತದ ಪಿಎಸ್ ಐ ಗಳು ಜವಾಬ್ದಾರಿ ವಹಿಸಬೇಕು. ಆದೇಶ ಉಲ್ಲಂಘನೆಯಾಗಲು ಅವಕಾಶ ನೀಡಬಾರದು ಎಂದು ಸರಕಾರ ಪೊಲೀಸರಿಗೆ ಸೂಚಿಸಿದೆ.

ಶುಕ್ರವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 05  ಗಂಟೆಯ ವರೆಗೆ ಬಾರ್ , ಪಬ್ ಗಳನ್ನು ಮುಚ್ಚಿಸಲು ಆದೇಶ ನೀಡಲಾಗಿದ್ದು, ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಉಳಿದ ದಿನಗಳಲ್ಲಿ ಬಾರ್ ಗಳಲ್ಲಿ ಕುಳಿತುಕೊಳ್ಳುವ ಸ್ಥಳಗಳಲ್ಲಿ ಶೇ 50 ಮಾತ್ರ ಅವಕಾಶವಿದೆ. 6 ಅಡಿ ಅಂತರ ಕಾಪಾಡಿಕೊಳ್ಳಬೇಕು.ನೌಕರರು ಕಡ್ಡಾಯವಾಗಿ ಮಾಸ್ಕ್ ಹಾಗು ಗ್ಲೌಸ್ ಹಾಕಿಕೊಳ್ಳಬೇಕು.

ಹೋಟೆಲ್ ಗಳಲ್ಲಿ ಪಾರ್ಸೆಲ್ ಮತ್ತು ಹೋಮ್ ಡೆಲಿವರಿಗೆ ಅವಕಾಶ ನೀಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next