Advertisement

ಕೈಲಾದಷ್ಟು ತಾಯ್ನಾಡಿನ ಋಣವನ್ನು ತೀರಿಸಿ

11:58 AM Nov 24, 2018 | Team Udayavani |

ಮೈಸೂರು: ನಮ್ಮ ತಾಯ್ನಾಡಿಗೆ ಕೈಲಾದಷ್ಟು ಋಣ ತೀರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಬಿ. ಮಂಜುನಾಥ್‌ ತಿಳಿಸಿದರು. ನಗರದ ಸರಸ್ವತಿಪುರಂನಲ್ಲಿರುವ ಮಹಾಬೋಧಿ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ವಸ್ತುಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ರಾಜ್ಯದೆಲ್ಲೆಡೆ ನವೆಂಬರ್‌ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಿದ್ದು, ಕನ್ನಡ ಶಾಲೆ, ಕನ್ನಡಪರ ಸಂಘ-ಸಂಸ್ಥೆಗಳಲ್ಲಿ ಸಹ ರಾಜ್ಯೋತ್ಸವ ಆಚರಿಸಲಾಗುತ್ತದೆ. ಇದು ನಮ್ಮೆಲ್ಲರ ಕರ್ತವ್ಯವೂ ಆಗಿದೆ ಎಂದು ತಿಳಿಸಿದರು.

ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳಿರುವ ಮಹಾಬೋಧಿ ಶಾಲೆಯ ಬಹಳಷ್ಟು ಮಕ್ಕಳಿಗೆ ಕನ್ನಡವೇ ತಿಳಿಯದಿದ್ದರೂ, ಈ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿಯಾಗಿದ್ದು, ಇದಕ್ಕಾಗಿ ಶಾಲಾ ಆಡಳಿತಾಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದರು. 

ಕಾರ್ಯಕ್ರಮದಲ್ಲಿ ಭಂತೇಜಿ ಸ್ವಾಮೀಜಿ, ಶಾಲೆಯ ಪ್ರಾಂಶುಪಾಲ ಆರ್‌.ಪಿ. ಭೂತೇಶ್‌, ಮುಖ್ಯ ಆಡಳಿತಾಧಿಕಾರಿ ಜ್ಯೋತಿ, ಉಪ ಪ್ರಾಂಶುಪಾಲ ಪಿ.ಆರ್‌. ದ್ವಾರಕೀಶ್‌ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next