Advertisement

‘ಚರಂಡಿ ಕಾಮಗಾರಿಯೊಂದಿಗೆ ರಸ್ತೆ ಕಾರ್ಯ ಪೂರ್ಣಗೊಳಿಸಿ’

01:25 AM Jun 19, 2019 | sudhir |

ಪಡುಬಿದ್ರಿ: ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದಿದ್ದರೆ ರಸ್ತೆ ಸುರಕ್ಷತೆ ಬಲು ಕಷ್ಟ. ಹಾಗಾಗಿ ಯಾವುದೇ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಮುನ್ನ ರಸ್ತೆಯ ಇಕ್ಕೆಲಗಳ ಚರಂಡಿಯನ್ನು ಸೂಕ್ತವಾಗಿ ನಿರ್ಮಿಸುವುದು ಅತ್ಯಗತ್ಯ ಎಂದು ರಾಜ್ಯ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಉಡುಪಿ ಜಿಲ್ಲಾ ಪ್ರವಾಸದ ಆರಂಭಿಕ ಹಂತವಾಗಿ ಹೆಜಮಾಡಿಗೆ ಆಗಮಿಸಿದ ಅವರು ಹೆಜಮಾಡಿಯಲ್ಲಿ ಮಳೆ ಹಾನಿಗೊಳಗಾದ ಹಳೆ ಎಂಬಿಸಿ ರಸ್ತೆಯ ದುರಸ್ತಿ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಅಧಿಕಾರಿಗಳೊಂದಿಗೆ ಮಾತನಾಡಿದರು.

ಮುಂದೆಇದನ್ನು ಯಾವುದೇ ರಸ್ತೆಗಳ ಅಭಿವೃದ್ಧಿಗೆ ಮುನ್ನ ಕಟ್ಟುನಿಟ್ಟಾಗಿ ಪಾಲಿಸಬೇಕು. ಚರಂಡಿ ಕಾಮಗಾರಿಗಳನ್ನು ಮೊದಲು ಪೂರ್ಣಗೊಳಿಸಿಯೇ ರಸ್ತೆ ಕಾಮಗಾರಿ ನಡೆಯಬೇಕು. ರಸ್ತೆ ಕಾಮಗಾರಿಗೆ ಕ್ರಿಯಾ ಯೋಜನೆ ರೂಪಿಸುವಾಗ ಚರಂಡಿ ಕಾಮಗಾರಿಗೂ ಅನುದಾನ ಒದಗಿಸುವಂತೆ ಸೂಚಿಸಬೇಕು. ಮುಂದೆ ಇದೇ ರೀತಿಯ ಪ್ರಸ್ತಾವೆಗಳನ್ನು ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಸಚಿವರು ತಿಳಿಸಿದರು.

ಹೆಜಮಾಡಿ ಚೆಕ್‌ಪೋಸ್ಟ್‌ನಲ್ಲಿ ಸ್ವಾಗತ

ಪ್ರಥಮ ಬಾರಿಗೆ ಉಡುಪಿ ಜಿಲ್ಲೆಗಾಗಮಿಸಿದ ಸಚಿವ ಆರ್‌. ವಿ. ದೇಶಪಾಂಡೆ ಅವರನ್ನು ಜಿಲ್ಲಾಧಿಕಾರಿ ಹೆಬ್ಸಿಬಾ ರಾಣಿ ಕೊರ್ಲಪಾಟಿ, ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧು ಬಿ.ರೂಪೇಶ್‌, ಸಹಾಯಕ ಕಮೀಷನರ್‌ ಮಧುಕೇಶ್ವರ್‌ ಜಿಲ್ಲಾಡಳಿತದ ಪರ ಸ್ವಾಗತಿಸಿದರು. ಶಾಸಕ ಲಾಲಾಜಿ ಆರ್‌. ಮೆಂಡನ್‌, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌, ಮುಖ್ಯ ಸಚೇತಕ ಐವನ್‌ ಡಿ’ಸೋಜ ಹೂಹಾರ ಹಾಕುವ ಮೂಲಕ ಸ್ವಾತಿಸಿದರು.

Advertisement

ಕಾಮಗಾರಿ ವೀಕ್ಷಣೆಯ ಸಂದರ್ಭ ಸಚಿವರೊಂದಿಗೆ ಶಾಸಕ ಲಾಲಾಜಿ ಮೆಂಡನ್‌, ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜ, ಹೆಜಮಾಡಿ ಗ್ರಾ. ಪಂ. ಅಧ್ಯಕ್ಷೆ ವಿಶಾಲಾಕ್ಷಿ ಉಮೇಶ್‌ ಪುತ್ರನ್‌, ಉಪಾಧ್ಯಕ್ಷ ಸುಧಾಕರ ಕರ್ಕೇರ, ಕಾಪು ತಹಶಿಲ್ದಾರ್‌ ಸಂತೋಷ್‌ ಕುಮಾರ್‌, ಲೋಕೋಪಯೋಗಿ ಇಲಾಖಾ ಎಕ್ಸಿಕ್ಯುಟಿವ್‌ ಎಂಜಿನಿಯರ್‌ ಗೋಕುಲ್ದಾಸ್‌, ಎಇಇ ಜಗದೀಶ್‌ ಭಟ್, ಕಾಪು ಆರ್‌ಐ ರವಿಶಂಕರ್‌, ವಿಎ ವಿಜಯ್‌, ಕಾಪು ವೃತ್ತ ನಿರೀಕ್ಷಕ ಹಾಲಮೂರ್ತಿ ರಾವ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next