Advertisement
ಹೌದು, ರಾಜ್ಯ ಸರ್ಕಾರ, ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 (296-ಎ) ಅಡಿಯಲ್ಲಿ ಪ್ರತಿಯೊಬ್ಬರಿಗೂ ಮಾನವ ಹಕ್ಕುಗಳು ದೊರೆಯಬೇಕು ಎಂಬುದು ಸರ್ಕಾರದ ಗುರಿ. ಹೀಗಾಗಿ ಬಾಗಲಕೋಟೆಯಲ್ಲೂ ಈ ಹೊಸ ಪ್ರಾಧಿಕಾರದ ಕಚೇರಿ ಆರಂಭಗೊಂಡಿದ್ದು, ಬೆಳಗಾವಿ ವಿಭಾಗಕ್ಕೆ ಓರ್ವ ನಿವೃತ್ತ ಹಿರಿಯ ಅಧಿಕಾರಿಯನ್ನು ಸಾರ್ವಜನಿಕ ಕುಂದು ಕೊರತೆ ನಿವಾರಣೆ ಪ್ರಾಧಿಕಾರಕ್ಕೆ ನೇಮಕ ಮಾಡಲಾಗಿದೆ. ಇದಕ್ಕಾಗಿ ಜಿಪಂ ಕಚೇರಿ ಆವರಣದಲ್ಲಿ ಹೊಸ (ಉಪಾಧ್ಯಕ್ಷರ ಕೊಠಡಿ) ಕಚೇರಿಯನ್ನೂ ಆರಂಭಿಸಲಾಗಿದೆ.
Related Articles
Advertisement
ದೂರು ಪ್ರಾಧಿಕಾರದ್ದೇ ದೊಡ್ಡ ದೂರು: ಹೊಸದಾಗಿ ಆರಂಭಗೊಂಡ ಈ ದೂರು ಪ್ರಾಧಿಕಾರದ್ದೇ ದೊಡ್ಡ ದೂರು ಜಿಲ್ಲೆಯ ಜನರಲ್ಲಿದೆ. ಸಾರ್ವಜನಿಕರಿಗೆ ಉಪಯುಕ್ತವಾಗುವ ಇಂತಹ ಒಂದು ಪ್ರಾಧಿಕಾರ ಆರಂಭಗೊಂಡಿರುವುದು ಜನರಿಗೆ ಗೊತ್ತಿಲ್ಲ. ಅಲ್ಲದೇ ಗ್ರಾಮೀಣ ಭಾಗದಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳ ಪರಿಹಾರಕ್ಕಾಗಿ ಇರುವ ಪ್ರಾಧಿಕಾರದ ಕುರಿತು ಎಲ್ಲೆಡೆ ಪ್ರಚಾರಪಡಿಸಬೇಕಿತ್ತು. ಒಂದು ತಿಂಗಳಾದರೂ ಒಂದೂ ಅರ್ಜಿ ಬಂದಿಲ್ಲವೆಂದರೆ ಜಿಲ್ಲೆಯಲ್ಲಿ ಸಮಸ್ಯೆಗಳೇ ಇಲ್ಲವೇ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.
ಇಂದೇ ದೂರು ಕೊಡಿ: ಜಿ.ಪಂ. ಕಚೇರಿ ಆವರಣದ ಉಪಾಧ್ಯಕ್ಷರ ಕೊಠಡಿಯನ್ನೇ ಈ ನೂತನ ಪ್ರಾಧಿಕಾರದ ಕಚೇರಿಯನ್ನಾಗಿ ಮಾಡಲಾಗಿದ್ದು, ಜಿ.ಪಂ. ಸಿಬ್ಬಂದಿಯೊಬ್ಬರನ್ನು ನೇಮಕ ಮಾಡಲಾಗಿದೆ. ಜಿಲ್ಲೆಯ ಯಾವುದೇ ಗ್ರಾ.ಪಂ ವ್ಯಾಪ್ತಿಯ ಜನರು, ಅರ್ಹ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ಪ್ರಾಧಿಕಾರಕ್ಕೆ ನಿಯೋಜನೆಗೊಂಡ ಜಿಪಂ ಸಿಬ್ಬಂದಿ ತಿಳಿಸಿದರು.
ಸರ್ಕಾರದ ಯೋಜನೆಗಳ ಹಂಚಿಕೆ ಹಾಗೂ ಸೌಲಭ್ಯ ಕಲ್ಪಿಸುವಲ್ಲಿ ವಿಳಂಬ ಅಥವಾ ಅರ್ಹರನ್ನು ಕೈಬಿಟ್ಟಿದ್ದರೆ, ಹಳ್ಳಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲೂ ತೊಂದರೆಯಾಗಿದ್ದರೆ ದೂರು ಸಲ್ಲಿಸಲು ಅವಕಾಶವಿದೆ. ಆದರೆ, ಇಂತಹವೊಂದು ಜನೋಪಯೋಗಿ ಪ್ರಾಧಿಕಾರ, ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಇದಕ್ಕೆ ನೇಮಕಗೊಂಡ ಅಧಿಕಾರಿ, ಪ್ರತಿ ವಾರಕ್ಕೊಮ್ಮೆ ಜಿಲ್ಲೆಗೆ ಭೇಟಿ ನೀಡಿ ಪರಿಶೀಲಿಸಬೇಕು. -ಬಸವರಾಜ ಧರ್ಮಂತಿ, ಕರವೇ ಜಿಲ್ಲಾ ಅಧ್ಯಕ್ಷ
ವಿಶೇಷ ವರದಿ