Advertisement
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ತಮ್ಮ ವಿರುದ್ಧ ಇಂತಹ ಆರೋಪ ಬಂದಾಗ ಶಾಸಕ ಹಾಲಪ್ಪ ಅವರು ವೆಂಕಟೇಶ್‌ಮೂರ್ತಿ ಎಂಬುವವರ ವಿರುದ್ಧ ಇಂತಹುದೇ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸಲು ಪ್ರಚೋದಿಸಿದಂತಹ ಪ್ರಕರಣ ನಡೆದಿತ್ತು. ನಾನು ಈವರೆಗೂ ಬೇರೆಯವರ ವಿರುದ್ಧ ಎಫ್‌ಐಆರ್ ಮಾಡಲು ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿಲ್ಲ. ಶಾಸಕರು ಹೇಳೀಕೊಳ್ಳುವಂತೆ ಮೊನ್ನೆ ಕೂಡ ನಾನು ಹೋಗಿಲ್ಲ ಎಂದರು.
Related Articles
Advertisement
ಸಾಗರ, ಹೊಸನಗರದಲ್ಲಿ ವಿಪರೀತ ಮಳೆಯಿಂದ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. ಬ್ಯಾಕೋಡಿನಲ್ಲಿ ತೋಟದ ಮೇಲೆ ಧರೆ ಕುಸಿದು ಹದಿನೈದು ದಿನ ಆಗಿದೆ. ಈತನಕ ಶಾಸಕರಾಗಲಿ, ಅಧಿಕಾರಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ತಾಲೂಕಿನಲ್ಲಿ ಶೇ. ೪೦ಕ್ಕೂ ಹೆಚ್ಚು ಶಾಲೆಗಳು ತೀರ ದುಸ್ಥಿತಿಯಲ್ಲಿದ್ದು, ವಿದ್ಯಾರ್ಥಿಗಳು ಆತಂಕದಿಂದಲೇ ಕುಳಿತು ಪಾಠ ಕೇಳುವಂತಾಗಿದೆ. ಲ್ಯಾವಿಗೆರೆ ಶಾಲೆಯೊಳಗೆ ನೀರು ನುಗ್ಗಿದೆ. . ಕಳೆದ ವರ್ಷ ಮಳೆಯಿಂದ ಬಿದ್ದು ಹೋದ ಮನೆಗಳಿಗೆ ಈತನಕ ಪರಿಹಾರ ಕೊಟ್ಟಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜನರಿಗೆ ಕಷ್ಟ ಬಿಟ್ಟರೆ ಇನ್ನೇನು ಸಿಕ್ಕಿಲ್ಲ ಎಂದು ದೂರಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಐ.ಎನ್.ಸುರೇಶಬಾಬು ಮಾತನಾಡಿ, ಸರ್ಕಾರಿ ಆಸ್ಪತ್ರೆ, ತಾಯಿಮಗು ಆಸ್ಪತ್ರೆಯಲ್ಲಿ ಪಥ್ಯಾಹಾರದ ಗುತ್ತಿಗೆ ಪಡೆದವರ ಕುರಿತು ನಾವು ಮಾತನಾಡುತ್ತಿಲ್ಲ. ಕಾನೂನಿನ ಪ್ರಕಾರ ಆಸ್ಪತ್ರೆಯಲ್ಲಿ ಅಡುಗೆ ಮನೆ ಸುಸ್ಥಿತಿಯಲ್ಲಿರುವಾಗ, ಅಡುಗೆಯವರಿರುವಾಗ, ಡಿ ದರ್ಜೆ ನೌಕರರನ್ನು ಕೊಟ್ಟಿರುವಾಗ, ನೀರು ಸರಬರಾಜು ಸರಿಯಿರುವಾಗ ಆಹಾರವನ್ನು ಇಲ್ಲಿಯೇ ತಯಾರಿಸುವುದರ ಬದಲು ಗುತ್ತಿಗೆ ಕೊಡುವಂತೆ ಯಾವ ಕಾರಣಕ್ಕಾಗಿ ಮಾಡಲಾಗಿದೆ ಎಂಬ ಪ್ರಶ್ನೆ ವೈದ್ಯಾಧಿಕಾರಿಗಳ ಕುರಿತು ಮೂಡುತ್ತದೆ. ಈ ವಿಷಯದಲ್ಲಿ ತಾರ್ಕಿಕ ಅಂತ್ಯ ಕಂಡುಕೊಳ್ಳುವವರೆಗೆ ಹೋರಾಟ ನಡೆಸಲಿದ್ದೇವೆ ಎಂದರು.
ಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ ಬೇಳೂರು, ಪ್ರಮುಖರಾದ ಮಹಾಬಲ ಕೌತಿ, ತಾರಾಮೂರ್ತಿ, ಸೋಮಶೇಖರ ಲ್ಯಾವಿಗೆರೆ, ಎಲ್.ಚಂದ್ರಪ್ಪ, ಆನಂದ್ ಭೀಮನೇರಿ, ರಾಘವೇಂದ್ರ, ಶ್ರೀನಾಥ್ ಹಾಜರಿದ್ದರು.