Advertisement
ಪೊಲೀಸ್ ವಿಭಾಗಕ್ಕೆ ಶೇ. 70 ದೂರುಗಳು: ಐಟಿ-ಬಿಟಿ, ಸಿಲಿಕಾನ್ ಸಿಟಿ ಎಂಬ ಖ್ಯಾತಿ ಪಡೆದಿರುವ ರಾಜ್ಯ ರಾಜಧಾನಿಯಲ್ಲೇ ಅತೀ ಹೆಚ್ಚು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಪೈಕಿ ಶೇ.70 ಪ್ರಕರಣಗಳು ಬೆಂಗಳೂರು ಪೊಲೀಸ್ ವಿಭಾಗಕ್ಕೆ ಸೇರಿದ್ದಾಗಿದೆ. ಬೆಂಗಳೂರಿನ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗದ ಪೊಲೀಸರು ಪ್ರತ್ಯೇಕವಾಗಿ ತಮ್ಮ ವಿಭಾಗದ ಹೆಸರಿನಲ್ಲಿ ಅಧಿಕೃತ ಟ್ವಿಟರ್, ಫೇಸ್‌ಬುಕ್ ಖಾತೆ ತೆರೆದಿದ್ದಾರೆ. ಇದರ ನಿರ್ವಹಣೆಗೂ ಕೆಲ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲಾಗಿದೆ. ಈ ಖಾತೆಗಳಿಗೆ ಸಾರ್ವಜನಿಕರಿಂದ ಹೆಚ್ಚಿನ ಸಂಖ್ಯೆಯಲ್ಲಿ ದೂರುಗಳು ಬರುತ್ತಿವೆ. ಸಾರ್ವಜನಿಕರು ತಮಗಾದ ಅನ್ಯಾಯದ ಬಗ್ಗೆ ವಿಡಿಯೋ ಮಾಡಿ ಸಂಬಂಧಿಸಿದ ಪೊಲೀಸ್ ವಿಭಾಗದ ಟ್ವಿಟರ್, ಫೇಸ್‌ಬುಕ್ ಖಾತೆಗೆ ಟ್ಯಾಗ್ ಮಾಡಿ ನ್ಯಾಯ ಕೇಳುತ್ತಿದ್ದಾರೆ. ಇದರಿಂದ ಜನ ಸಾಮಾನ್ಯರ ತೊಂದರೆ ಉನ್ನತ ಅಧಿಕಾರಿಗಳ ಗಮನಕ್ಕೆ ತರಲು, ಪರಿಹಾರಕ್ಕೆ ಮನವಿ ಮಾಡಲು ಹಾಗೂ ಪ್ರಶ್ನಿಸಲು ಸಹಕಾರಿಯಾಗಿದೆ. ತೊಂದರೆಗೆ ಸಿಲುಕಿರುವವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡ ಕೆಲ ಹೊತ್ತಿನಲ್ಲೇ ವೈರಲ್ ಆಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಸಾರ್ವಜನಿಕ ಆಕ್ರೋಶಗಳು ಬುಗಿಲೇಳಲು ಪ್ರಾರಂಭವಾಗುತ್ತಿದ್ದಂತೆ ಆರೋಪಿ ಎಷ್ಟೇ ಪ್ರಭಾವಿಯಾದರೂ ಪೊಲೀಸರಿಗೆ ಆತನ ವಿರುದ್ಧ ಕ್ರಮವಹಿಸುವ ಅನಿವಾರ್ಯತೆ ನಿರ್ಮಾಣವಾಗುತ್ತಿದೆ.
Related Articles
- ನಿಮ್ಮ ಫೋನ್, ಪರ್ಸ್ ಮತ್ತು ಯಾವುದೇ ಅತಿಮುಖ್ಯವಾದ ದಾಖಲೆಗಳು ಕಳೆದುಹೋದಲ್ಲಿ “ಇ-ಲಾಸ್ಟ್ ರಿಪೋರ್ಟ್’ ಮೊಬೈಲ್ ಅಪ್ಲಿಕೇಶನ್ ಮೂಲಕ ದೂರು ದಾಖಲಿಸಬಹುದು. ನಗರದಲ್ಲಿ ಸಂಚಾರ ನಿಯಮ ಉಲ್ಲಂ ಸಿರುವುದು ಗಮನಕ್ಕೆ ಬಂದರೆ ಪಬ್ಲಿಕ್ ಐ ಆ್ಯಪ್ ಮೂಲಕ ಪೊಲೀಸರಿಗೆ ಮಾಹಿತಿ ನೀಡಬಹುದು.
- ಪೊಲೀಸ್ ಸಿಬ್ಬಂದಿ ಕಿರುಕುಳ ಕೊಟ್ಟರೆ, ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ ಪೊಲೀಸ್ ವಿಭಾಗದ ಅಧಿಕೃತ ಟ್ವಿಟರ್, ಫೇಸ್ ಬುಕ್ ಮೂಲಕ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬಹುದು.
- ಸಂಚಾರ ಸಮಸ್ಯೆ, ಅಪರಾಧ ಪ್ರಕರಣಗಳಲ್ಲಿ ಅಮಾಯಕರಿಗೆ ಅನ್ಯಾಯ ಆಗಿ ನ್ಯಾಯ ಸಿಗದಿದ್ದರೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಕರಣ ಬೆಳಕಿಗೆ ತರಲು ಅವಕಾಶಗಳಿವೆ.
Advertisement
ಸದ್ದು ಮಾಡಿದ ಕೆಲ ಪ್ರಕರಣ :
- ಜ.17ರಂದು ಸ್ಕೂಟರ್‌ಗೆ ಜೋತುಬಿದ್ದ ವೃದ್ದನನ್ನು ಎಳೆದೊಯ್ದು ಅಮಾನವೀಯವಾಗಿ ವರ್ತಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಯುವಕನ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು.
- 2022 ಡಿ.8 ರಂದು ರಾತ್ರಿ 12.30ಕ್ಕೆ ಸ್ನೇಹಿತನ ಜನ್ಮದಿನ ಕಾರ್ಯಕ್ರಮ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದ ದಂಪತಿಯನ್ನು ತಡೆದ ಸಂಪಿಗೆಹಳ್ಳಿ ಠಾಣೆಯ ಹೊಯ್ಸಳ ವಾಹನದ ಇಬ್ಬರು ಕಾನ್‌ಸ್ಟೇಬಲ್‌ಗಳು ಬೆದರಿಸಿ 1 ಸಾವಿರ ರೂ. ಪಡೆದಿದ್ದರು. ಈ ಕುರಿತು ನೊಂದ ಕಾರ್ತಿಕ್ ಪಾತ್ರಿ ಎಂಬುವವರು ಸರಣಿ ಟ್ವೀಟ್ ಮಾಡಿದ್ದರು. ಇದು ರಾಜ್ಯಾದ್ಯಂತ ವೈರಲ್ ಆಗಿ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಹೆಡ್‌ಕಾನ್ ಸ್ಟೆಬಲ್ ರಾಜೇಶ್ ಹಾಗೂ ಕಾನ್‌ಸ್ಟೇಬಲ್ ನಾಗೇಶ್ ಅವರನ್ನು ಅಮಾನತುಪಡಿಸಲಾಗಿತ್ತು.
- 2022 ನ.26 ರಂದು ಶಂಕರ್ ಮಿಶ್ರಾ ನ್ಯೂಯಾರ್ಕ್‌ನಿಂದ ದೆಹಲಿಗೆ ಏರ್ ಇಂಡಿಯಾ ವಿಮಾನದಲ್ಲಿ ಬರುತ್ತಿದ್ದಾಗ ಕುಡಿದ ಮತ್ತಿನಲ್ಲಿ ವಯಸ್ಸಾದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಆತನ ವಿರುದ್ಧ ದೂರು ದಾಖಲಿಸಿಕೊಂಡು ಬಂಧಿಸಲಾಗಿತ್ತು.
- 2023 ಜ.13ರಂದು ಎಚ್‌ಎಸ್‌ಆರ್ ಲೇಔಟ್‌ನಲ್ಲಿ ರ್ಯಾಪಿಡೋ ವಾಹನದಲ್ಲಿ ಹೋಗುತ್ತಿದ್ದಾಗ ಪೊಲೀಸರು ಅಡ್ಡಗಟ್ಟಿ ಬ್ಯಾಗ್ ಪರಿಶೀಲಿಸಿ ಗಾಂಜಾ ಇದೆ ಎಂದು ಹೇಳಿ 2,500 ರೂ. ಪಡೆದಿದ್ದಾರೆ ಎಂದು ಆರೋಪಿಸಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಟ್ವೀಟ್ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತನಿಖೆಗೆ ಆದೇಶಿಸಿದ್ದಾರೆ.
- 2023 ಜ.21 ಕಸವನಹಳ್ಳಿ ಕಡೆಯ ರಸ್ತೆಗಳಲ್ಲಿ ಎಮ್ಮೆಗಳ ಕಾಟ ಜೋರಾಗಿದ್ದು, ರಸ್ತೆಗಳಲ್ಲಿ ಓಡಾಡುವ ಎಮ್ಮೆಗಳಿಂದ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಕ್ರಮಕ್ಕೆ ಕೆಲ ಟೆಕಿಗಳು ಟ್ವೀಟ್ ಮಾಡಿ ಸಂಚಾರ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.
- ಬೆಂಗಳೂರಿನ ರಸ್ತೆಯೊಂದರಲ್ಲಿ ಅಳವಡಿಸಿದ್ದ ಹೊಸ ಟ್ರಾಫಿಕ್ ಫಲಕವನ್ನು ಪ್ರಶ್ನಿಸಿ ಆ.1ರಂದು ವ್ಯಕ್ತಿಯೊಬ್ಬರು ಟ್ವೀಟ್ ಮೂಲಕ ಪೊಲೀಸರನ್ನು ಪ್ರಶ್ನಿಸಿದ್ದರು. ಇದನ್ನು ಹೋಪ್‌ಫಾರ್ಮ್ ಸಿಗ್ನಲ್‌ಗೆ ಕೊಂಚ ಮೊದಲು ಈ ಸಿಂಬಲ್ ಅಳವಡಿಸುವುದಾಗಿ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.
- ಕಬ್ಬನ್‌ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿ ಎರಡು ಹುಡುಗರ ಗುಂಪುಗಳ ನಡುವೆ ಹುಡುಗಿ ಪ್ರೀತಿಯ ವಿಚಾರಕ್ಕೆ ಕಿತ್ತಾಡಿಕೊಂಡಿರುವ ವಿಡಿಯೋ ಸೆ.20ರಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿ ಭಾರಿ ಸುದ್ದಿಯಾಗಿದ್ದವು.
- 2022 ಡಿ.18ರಂದು ಜೆಪಿ ನಗರದ ನಿವಾಸಿ ನೆಮೋ ಎಂಬಾತ ತನ್ನ ಮನೆಯ ಪಕ್ಕದಲ್ಲಿ ಸಾಕು ಕೋಳಿಗಳು ಕೂಗುವುದರಿಂದ ತಮಗೆ ನಿದ್ರಿಸಲೂ ಸಾಧ್ಯವಾಗುತ್ತಿಲ್ಲ. 2 ವರ್ಷದ ಮಗುವಿಗೆ ನಿದ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾನೆ. ಇದು ಅಚ್ಚರಿಗೆ ಕಾರಣವಾಗಿತ್ತು.
- 2022 ಡಿ.21ರಂದು ಮಾರತಹಳ್ಳಿ ಪಬ್‌ವೊಂದರಲ್ಲಿ ತಡರಾತ್ರಿ 12 ಗಂಟೆ ನಂತರ ಜೋರಾಗಿ ಡಿಜೆ ಸೌಂಡ್ ಹಾಕುತ್ತಾರೆ. ಪ್ರತಿನಿತ್ಯ ಪಬ್‌ನಿಂದ ಸಮಸ್ಯೆಯಾಗುತ್ತಿದೆ ಎಂದು ಟ್ವೀಟ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು ಕ್ರಮಕ್ಕೆ ಮುಂದಾಗಿದ್ದರು.
- ಕೆಲ ದಿನಗಳ ಹಿಂದೆ ಸಿಐಡಿ ಪೊಲೀಸರನ್ನು ತಳ್ಳಿ ಪರಾರಿಯಾಗಿದ್ದ ಪಿಎಸ್‌ಐ ಹಗರಣದ ಅಭ್ಯರ್ಥಿಯು ಜ.21ರಂದು ಫೇಸ್‌ಬುಕ್‌ನಲ್ಲಿ ಪ್ರತ್ಯಕ್ಷನಾಗಿ ಕೆಲ ನಾಯಕರು ಹಗರಣದಲ್ಲಿ ನನ್ನನ್ನು ಸಿಲುಕಿಸಿದ್ದಾರೆ ಎಂದು ಹೇಳಿಕೊಂಡಿದ್ದಾನೆ.