Advertisement

ನಟಿ ಸಂಜನಾ ಗರ್ಲಾನಿ ವಿರುದ್ಧ ಕ್ಯಾಬ್ ಚಾಲಕನಿಂದ ದೂರು

06:14 PM Oct 05, 2021 | Team Udayavani |

ಬೆಂಗಳೂರು: ಎಸಿ ವಿಚಾರವಾಗಿ  ಓಲಾ ಕ್ಯಾಬ್ ಚಾಲಕನ ವಿರುದ್ಧ ಸ್ಯಾಂಡಲ್ವುಡ್ ನಟಿ ಸಂಜನಾ ಗರ್ಲಾನಿ ಗರಂ ಆಗಿದ್ದಾರೆ. ಮಣಿ ಹೆಸರಿನ ಚಾಲಕನ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

Advertisement

ಕ್ಯಾಬ್ ಚಾಲಕ ಕಾರಿನಲ್ಲಿ ಎಸಿ ಹಾಕದೆ ಕಿರಿಕ್ ಮಾಡಿದ. ಇದರಿಂದ ತನಗೆ ತುಂಬಾ ತೊಂದರೆ ಆಗಿದೆ ಎಂದು ಸಂಜನಾ ಗಲ್ರಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಾಲಕನಿಂದ   ದೂರು :

ಸಂಜನಾ ಗರ್ಲಾನಿ ವಿರುದ್ಧ ಚಾಲಕ ಮಣಿ ಆರ್.ಆರ್. ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇಂದಿರಾನಗರದಿಂದ ಆರ್.ಆರ್. ನಗರಕ್ಕೆ ಹೋಗಬೇಕಿತ್ತು. ಆದರೆ, ಅವರು ಕೆಂಗೇರಿಗೆ ಕಾರ್ ಬುಕ್ ಮಾಡಿದರು. ಹೀಗಾಗಿ ಲೊಕೇಷನ್ ಬದಲಿಸುವಂತೆ ಚಾಲಕ ಮನವಿ ಮಾಡಿದ್ದ. ಲೊಕೇಷನ್ ಬದಲಾವಣೆ ಮಾಡದೆ ಕಿರಿಕ್ ಮಾಡಿದ್ದಾರೆ ಎಂದು ಮಣಿ ದೂರು ನೀಡಿದ್ದಾರೆ. ತನಗೆ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು  ಕ್ಯಾಬ್ ಚಾಲಕ ಮಣಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next