ಚಿತ್ರದುರ್ಗ: ಚೆನ್ನೈನಿಂದ ಕೋಡಿಹಳ್ಳಿಗೆ 20 ದಿನದ ಹಸುಗೂಸು, ಬಾಣಂತಿ ಹಾಗೂ ಮೂರು ವರ್ಷದ ಮತ್ತೂಂದು ಮಗುವಿನೊಂದಿಗೆ ಆಗಮಿಸಿದ್ದ ವ್ಯಕ್ತಿ ವಿರುದಟಛಿ ತಳುಕು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸರ್ಕಾರದಿಂದ ಅನುಮತಿ ಪಡೆಯದೆ ಜಿಲ್ಲೆಗೆ ಆಗಮಿಸಿದ್ದು ಹಾಗೂ ಊರಿಗೆ ಬಂದ ನಂತರ ಮನೆಯಲ್ಲಿರದೆ ಹಲವು ಗ್ರಾಮಗಳಲ್ಲಿ ಸುತ್ತಾಡಿದ ಕಾರಣಕ್ಕೆ ಬೇರೆಯವರಿಗೆ ಸಂದೇಶ ಹೋಗಬೇಕು ಎಂಬ ಕಾರಣಕ್ಕೆ ದೂರು ದಾಖಲಿಸಲಾಗಿದೆ ಎಂದು ಸಂಸದ ಎ. ನಾರಾಯಣಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್‌ನ ಅಹಮದಾಬಾದ್‌ನಿಂದ ಜಿಲ್ಲೆಗೆ ಆಗಮಿಸಿದ ತಬ್ಲೀಘಿಗಳು ಚೆಕ್ ಪೋಸ್ಟ್‌ನಲ್ಲಿ ಸೇವಾಸಿಂಧು ಇ-ಪಾಸ್‌ಗೆ ಪ್ರವೇಶ ಪಡೆದಿದ್ದರು. ಈ ಕಾರಣಕ್ಕೆ ಅವರ ಮೇಲೆ ದೂರು ದಾಖಲಾಗಿಲ್ಲ. ಆದರೆ ಕೋಡಿಹಳ್ಳಿ ಮೂಲದ ವ್ಯಕ್ತಿ ಯಾರಿಗೂ ತಿಳಿಸದೆ ಗ್ರಾಮಕ್ಕೆ ಬಂದು ಈಗ ಪಾಸಿಟಿವ್ ವರದಿ ಬಂದಿರುವುದರಿಂದ ಕ್ರಮ ಜರುಗಿಸಲಾಗಿದೆ ಎಂದರು.
ರೈಲ್ವೆ ಅಂಡರ್‌ಪಾಸ್ ಕಾಮಗಾರಿ ಆರಂಭ: ಅಜ್ಜಂಪುರ ಬಳಿಯ ರೈಲ್ವೆ ಅಂಡರ್‌ಪಾಸ್ ಕಾಮಗಾರಿ ಆರಂಭಿಸುವ ಬಗ್ಗೆ ಲಾಕ್ ಡೌನ್ ಆರಂಭವಾದ ಮೊದಲ ವಾರದಲ್ಲೇ ಅ ಧಿಕಾರಿಗಳೊಂದಿಗೆ ಚರ್ಚಿಸಿದ್ದೆ. ಆದರೆ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿತ್ತು. ನಂತರ ಎಲ್ಲವನ್ನೂ ಬಗೆಹರಿಸಿ ಕಾಮಗಾರಿ ಆರಂಭಿಸುವ ಬಗ್ಗೆ ಪರಿಶೀಲನೆ ನಡೆಸಿದಾಗ ಅ ಧಿಕಾರಿಗಳು ಈ ವರ್ಷ ಆಗುವುದಿಲ್ಲ.
ಮಾಮೂಲಿಯಂತೆ ಒಂದೂವರೆ ಟಿಎಂಸಿ ನೀರು ಹರಿಸಿಕೊಳ್ಳಬಹುದು. ಮುಂದಿನ ವರ್ಷ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಈ ಕೆಲಸಕ್ಕೆ 90 ದಿನ ತಗುಲುತ್ತದೆ ಎಂದಿದ್ದರು. ಆದರೆ ಈ ಬಗ್ಗೆ ಬೇರೆ ಬೇರೆ ತಜ್ಞ ಇಂಜಿನಿಯರ್‌ಗಳೊಂದಿಗೆ ಚರ್ಚಿಸಿ ತ್ವರಿತವಾಗಿ ಮುಗಿಸಲು ಯಾವೆಲ್ಲಾ ತಂತ್ರಜ್ಞಾನಗಳಿವೆ ಎಂಬ ಮಾಹಿತಿ ಕಲೆ ಹಾಕಿದ್ದೆ. ರೈಲ್ವೆ ಖಾತೆ ರಾಜ್ಯ ಸಚಿವರನ್ನು ಭೇಟಿ ಮಾಡಿ ರೈಲು ಸಂಚಾರ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದಾಗಿ ತಿಳಿಸಿದರು.
ರೈಲ್ವೆ ಕೋಚ್‌ನ ಸಿಮೆಂಟ್ ಬ್ಲಾಕ್‌ಗಳ ಸಹಾಯದಿಂದ ಈಗ ಕೆಲಸ ಆರಂಭವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ನಿಗದಿತ ಅವ ಧಿಯಲ್ಲಿ ಕೆಲಸ ಪೂರ್ಣಗೊಂಡು ಜಿಲ್ಲೆಯ ಜನರಿಗೆ ಆದಷ್ಟು ಬೇಗ ಒಳ್ಳೆಯ ದಿನಗಳು ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರುಳಿ, ವಿಭಾಗೀಯ ಪ್ರಭಾರಿ ಜಿ.ಎಂ. ಸುರೇಶ್, ಮಾಜಿ ಅಧ್ಯಕ್ಷ ಸಿದ್ದೇಶ್ ಯಾದವ್, ನಗರಸಭೆ ಸದಸ್ಯ ಶಶಿಧರ, ನಾಗರಾಜ ಬೇದ್ರೆ ಮತ್ತಿತರರು ಇದ್ದರು.
ಕೋಡಿಹಳ್ಳಿ ಕೊರೊನಾ ಸೋಂಕಿತ ವ್ಯಕ್ತಿ ಸಂಚಾರ ಮಾಡಿ ಬಂದ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲೂ ಯಾಕೆ ತಡೆದು ತಪಾಸಣೆ ಮಾಡಿಲ್ಲ ಎನ್ನುವ ಬಗ್ಗೆಯೂ ಪರಿಶೀಲನೆ ನಡೆಯಲಿದೆ. ಲಾಕ್‌ಡೌನ್ ನಿಯಮ ಉಲ್ಲಂಘನೆ ಮಾಡಿ ಎಚ್.ಎಂ. ರೇವಣ್ಣ ನೇತೃತ್ವದಲ್ಲಿ ಸಭೆ ನಡೆಸಿದ ಬಗ್ಗೆಯೂ ಅಧಿಕಾರಿಗಳು ಪರಿಶೀಲಿಸಲಿದ್ದಾರೆ.
-ಎ. ನಾರಾಯಣಸ್ವಾಮಿ, ಸಂಸದ