Advertisement

ವಂಚನೆ ಆರೋಪ: ನಟ ಶಾರುಖ್‌ ವಿರುದ್ಧ ಕೇಸು

03:45 AM Jun 29, 2017 | Team Udayavani |

ನವದೆಹಲಿ: ಆನ್‌ಲೈನ್‌ ಮೂಲಕ ಒಂದು ವಂಚನೆ ಎಸಗಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಬಾಲಿವುಡ್‌ ನಟ ಶಾರುಖ್‌ ಖಾನ್‌ ಮತ್ತು ನಟ ನವಾಜುದ್ದೀನ್‌ ಸಿದ್ದಿಕಿ ಅವರ ವಿರುದ್ಧ ಕೇಸು ದಾಖಲಿಸಿದೆ. 

Advertisement

ಗಾಜಿಯಾಬಾದ್‌ ಮೂಲದ ಅನುರಾಗ್‌ ಜೈನ್‌ ಮತ್ತು ಸಂದೇಶ್‌ ವರ್ಮಾ ಎಂಬುವರ ಮಾಲೀಕತ್ವದ ವೆಬ್‌ವರ್ಕ್‌ ಟ್ರೇಡ್‌ ಲಿಂಕ್ಸ್‌ ಕಂಪನಿ ಆಡ್ಸ್‌ಬುಕ್‌ ಡಾಟ್‌ ಕಾಮ್‌ ಹೆಸರಿನ ವೆಬ್‌ಸೈಟ್‌ ಹೊಂದಿದ್ದು, ಅದರ ಜಾಹೀರಾತು ರಾಯಭಾರಿಗಳಾಗಿ ಇಬ್ಬರೂ ನಟರು ಕಾಣಿಸಿಕೊಂಡಿದ್ದರು. ಜಾಹೀರಾತು ನೋಡಿ ಜನತೆ ಇದರಲ್ಲಿ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿದ್ದರು. ಜೈನ್‌ ಮತ್ತು ವರ್ಮಾ ಇಬ್ಬರೂ, ತಮ್ಮ ವೆಬ್‌ಸೈಟ್‌ನಲ್ಲಿನ ಜಾಹೀರಾತುಗಳನ್ನು ಪ್ರತಿ ಬಾರಿ ಕ್ಲಿಕ್ಕಿಸಿ ಹಣ ಗಳಿಸಿರಿ ಎಂಬ ಆಸೆ ಹುಟ್ಟಿಸಿ 2 ಲಕ್ಷ ಜನರಿಂದ ಸುಮಾರು 500 ಕೋಟಿ ರೂ. ಅಕ್ರಮವಾಗಿ ಸಂಗ್ರಹಿಸಿದ್ದಾಗಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next