Advertisement

ನಟಿ ಮಿನಿಶಾ ಮೇಲೆ ಹಣ ಕಳುವು ಆರೋಪ ಕೇಳಿ ಬಂದಿತ್ತು: ಅಷ್ಟಕ್ಕೂ ಅಂದು ನಡೆದಿದ್ದೇನು ?

05:08 PM Jun 25, 2021 | Team Udayavani |

ಮುಂಬೈ: 2005 ರಲ್ಲಿ ಯಹಾನಾ ಸಿನಿಮಾ ಮೂಲಕ ಬಾಲಿವುಡ್ ಗೆ ಕಾಲಿಟ್ಟ ನಟಿ ಮಿನಿಶಾ ಲಾಂಬಾ ತಮ್ಮ ಕಷ್ಟದ ದಿನಗಳನ್ನು ಹೇಳಿಕೊಂಡಿದ್ದಾರೆ.

Advertisement

ಇತ್ತೀಚಿಗೆ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮಿನಿಶಾ, ಚಿತ್ರರಂಗಕ್ಕೆ ಕಾಲಿಟ್ಟ ಪ್ರಾರಂಭಿಕ ದಿನಗಳನ್ನು ಮೆಲುಕು ಹಾಕಿದ್ದಾರೆ. ಆ ಸಂದರ್ಭದಲ್ಲಿ ತಾವು ಎದುರಿಸಿ ಕಷ್ಟ, ಸವಾಲುಗಳನ್ನು ಹೇಳಿಕೊಂಡಿದ್ದಾರೆ.

ಬಣ್ಣದ ಲೋಕದಲ್ಲಿ ಮಿಂಚಬೇಕೆಂದು ಮಾಯಾನಗರಿ ಮುಂಬೈಗೆ ಅವಕಾಶಗಳನ್ನು ಅರಸಿ ಬಂದಿದ್ದ ಈ ನಟಿ, ಪಿಜಿ ಒಂದರಲ್ಲಿ ಉಳಿದುಕೊಂಡಿದ್ದರಂತೆ. ತಿಂಗಳಿಗೆ 5 ಸಾವಿರ ರೂ. ಬಾಡಿಗೆ ನೀಡಬೇಕಿತ್ತಂತೆ. ಒಂದು ದಿನ ಆ ಪಿಜಿ ಒಡತಿ, ಈಕೆಯ ಮೇಲೆ ಕಳ್ಳತನದ ಅಪವಾದ ಹೊರಿಸಿದರಂತೆ. ಇದಾದ ಎರಡು ದಿನಕ್ಕೆ ಆ ಪಿಜಿಯಿಂದ ಹೊರ ಬಂದರಂತೆ. ಕೆಲ ದಿನಗಳ ನಂತರ ಆ ಹಣ ಅಲ್ಲಿಯೇ ಇತ್ತು. ಆ ಕಬೋರ್ಡಿನಲ್ಲಿಯೇ ಹಣ ಸಿಕ್ಕಿತಂತೆ.

ಈ ಘಟನೆಯನ್ನು ನೆನಪು ಮಾಡಿಕೊಂಡಿರುವ ಮಿನಿಶಾ, ಅಂದು ಮಾಡದ ತಪ್ಪಿಗೆ ನನ್ನ ಹೆಸರಿಗೆ ಕಪ್ಪು ಚುಕ್ಕಿ ಅಂಟಿದಂತಾಗಿತ್ತು.  ನನಗೆ ಕಷ್ಟದ ದಿನಗಳಿದ್ದವು, ಆದರೆ, ಹಣ ಕಳ್ಳತನ ಮಾಡುವಷ್ಟು ಕೆಟ್ಟವಳು ನಾನಾಗಿರಲಿಲ್ಲ ಎಂದಿದ್ದಾರೆ.

ಇನ್ನು ಮಿನಿಶಾ ಲಾಂಬಾ, ರ್ಯಾನ್ ಥಾಮ್ ಎಂಬುವನ ಜೊತೆ ಜುಲೈ 6, 2015 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2020 ರಲ್ಲಿ ಪರಸ್ಪರ ಡಿವೋರ್ಸ್ ಕೊಡುವುದಾಗಿ ಘೋಷಿಸಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next