ಸೇಡಂ: ಮನೆಗೊಂದು ನೌಕರಿ ಕೊಡುವುದಾಗಿ ಭರವಸೆ ನೀಡಿದ್ದ ವಾಸವದತ್ತಾ ಕಾರ್ಖಾನೆ ಮಾತಿಗೆ ತಪ್ಪಿದ ಕಾರಣ ಇಂಜೆಪಲ್ಲಿ ಗ್ರಾಮಸ್ಥರು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ದೂರು ಸಲ್ಲಿಸಿದ್ದಾರೆ.
2006-07ರಲ್ಲಿ ವಾಸವದತ್ತಾ ಸಿಮೆಂಟ್ ಕಾರ್ಖಾನೆಗೆ ಹೊಂದಿಕೊಂಡಿರುವ ಇಂಜೆಪಲ್ಲಿ ಗ್ರಾಮ ತೆರವುಗೊಳಿಸುವಂತೆ ಕಾರ್ಖಾನೆ ಆಡಳಿತ ಮಂಡಳಿ ಸೂಚಿಸಿತ್ತು. ಅಲ್ಲದೇ ಕುರಕುಂಟಾ ಕ್ರಾಸ್ ಬಳಿ ಹೊಸ ಮನೆ ನಿರ್ಮಿಸಿಕೊಡುವ ಮತ್ತು ಮನೆಗೊಂದು ನೌಕರಿ ನೀಡುವ ಭರವಸೆ ನೀಡಿತ್ತು.
ಆದರೆ 170 ಮನೆಗಳ ಪೈಕಿ ಕೇವಲ 60 ಮನೆಗಳನ್ನು ನಿರ್ಮಿಸಿರುವ ಕಾರ್ಖಾನೆ ಮಂಡಳಿ, ಬಡ ಜನರ ಮೇಲೆ ದಬ್ಟಾಳಿಕೆ ನಡೆಸುತ್ತಿದೆ. ಅತ್ತ ಹೊಸ ಸೂರಿಗೂ ಸೇರಲಾಗದೆ, ಇತ್ತ ಇರುವ ಮನೆಗಳನ್ನು ರಕ್ಷಿಸಿಕೊಳ್ಳಲಾಗದೆ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿನಿತ್ಯ ವಾಸವದತ್ತಾ ಸಿಮೆಂಟ್ ಕಾರ್ಖಾನೆ ನಡೆಸುವ ಬ್ಲಾಸ್ಟಿಂಗ್‌ನಿಂದ ಮನೆಗಳು ಬಿರುಕು ಬಿಡುತ್ತಿವೆ. ಮಕ್ಕಳು ಶಾಲೆಗಳಿಗೆ ತೆರಳಲು ಹೆದರುತ್ತಿದ್ದಾರೆ. ಮನೆಯಿಂದ ಹೊರಬರಬೇಕಾದರೆ ಜೀವ ಕೈಯಲ್ಲಿಟ್ಟುಕೊಂಡು ತಿರುಗಾಡುವ ಪರಿಸ್ಥಿತಿ ಇದೆ. ಅಲ್ಲದೇ ಸ್ಥಳೀಯ ಕನ್ನಡಿಗರಿಗೆ ನೌಕರಿ ನೀಡುವ ಬದಲು ಬೇರೆ ರಾಜ್ಯದವರಿಗೆ ನೌಕರಿ ನೀಡಿ, ಸ್ಥಳೀಯರಿಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದ್ದಾರೆ.
15 ದಿನಗಳ ಒಳಗಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲದಿದ್ದಲ್ಲಿ ಕಾರ್ಖಾನೆಗೆ ಬೀಗ ಜಡಿದು ಪ್ರತಿಭಟಿಸಲಾಗುವುದು. ನಿರಂತರ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ವೀರ ಕನ್ನಡಿಗರ ಸೇನೆ ಕಾರ್ಯಕರ್ತರು ಮತ್ತು ಇಂಜೇಪಲ್ಲಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.
ವೀರ ಕನ್ನಡಿಗರ ಸೇನೆ ರಾಜ್ಯಾಧ್ಯಕ್ಷ ಅಮೃತರಾವ್ ಪಾಟೀಲ ಸಿರನೂರ, ರಾಜ್ಯ ಉಪಾಧ್ಯಕ್ಷ ರವಿ ಒಂಟಿ, ಭೀಮಶಾ ಇಂಜಳ್ಳಿ, ಅರ್ಜುನ ಇಂಜಳ್ಳಿ, ಲಕ್ಷ್ಮಣ ತಳವಾರ, ಸಾಯಪ್ಪ ನಾಡೇಪಲ್ಲಿ, ಕಾಶಪ್ಪ ತಳವಾರ, ಗುಡಸಾಬ ಮುಲ್ಲಾ, ನಾಗರಾಜ ಸಜ್ಜನ್, ಶಿವಪ್ಪ ತಳವಾರ, ಅರ್ಜುನ ಇಂಜಳ್ಳಿ, ದ್ಯಾವಮ್ಮ ಇಂಜಳ್ಳಿ, ನರಸಮ್ಮ ಆಡಕಿ, ರಾಜಮ್ಮ ಇಂಜಳ್ಳಿ, ಸಿದ್ರಾಮಪ್ಪ ಪಾಟೀಲ, ಹಣಮಂತ ಇಂಜಳ್ಳಿ, ವಿಠ್ಠಲ ಇಂಜಳ್ಳಿ, ಸುಧೀರ ಇಂಜಳ್ಳಿ, ಅಶೋಕ ಇಂಜಳ್ಳಿ, ಇಮಾಮಸಾಬ, ಸುಕ್ರಮಿಯಾ, ಶಾಮಪ್ಪ, ಪರಶುರಾಮ, ಬಸವಣ್ಣ ದಿಗ್ಗಾವಿ, ನಾಗಪ್ಪ ರಂಜೋಳ, ಚಂದಪ್ಪ, ಶರಣಪ್ಪ, ಅಂಜಲಮ್ಮ, ಕಲ್ಲಪ್ಪ ಮಾಡೆನೂರ, ದೇವಿಂದ್ರಪ್ಪ ಡೋಣಗಾಂವ್, ಭರತ ಭೂಷಣ, ರಿಷಿ ವಾಡೇಕರ್, ಶಿವಕುಮಾರ ದೇವರಮನಿ ಮತ್ತಿತರರು ಈ ಸಂದರ್ಭದಲ್ಲಿದ್ದರು.