Advertisement

ಬಿಜೆಪಿಯಿಂದ ರಮ್ಯಾ ವಿರುದ್ಧ ದೂರು

12:28 PM Feb 08, 2018 | |

ಬೆಂಗಳೂರು: ಐಟಿ ಕಾಯ್ದೆ ಮತ್ತು ಫೇಸ್‌ಬುಕ್‌ ನಿಯಮ ಉಲ್ಲಂಘಿಸಿ ಸಾಮಾಜಿಕ ಜಾಲ ತಾಣದಲ್ಲಿ ನಕಲಿ ಖಾತೆ ತೆರೆಯಲು ಉತ್ತೇಜನ ನೀಡಿದ ಆರೋಪದ ಮೇಲೆ ಎಐಸಿಸಿ ಸಮಾಜಿಕ ಜಾಲತಾಣ ಮತ್ತು ಡಿಜಿಟಲ್‌ ಕಮ್ಯೂನಿಕೇಷನ್‌ ಮುಖ್ಯಸ್ಥೆ ದಿವ್ಯಸ್ಪಂದನಾ (ನಟಿ ರಮ್ಯಾ) ವಿರುದ್ಧ ಬಿಜೆಪಿ ಐಟಿ ಘಟಕದಿಂದ ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಲಾಗಿದೆ.

Advertisement

ರಮ್ಯಾ ಅವರು ಕಾಂಗ್ರೆಸ್‌ ಕಾರ್ಯಕರ್ತರಿಗೆ ಫೇಸ್‌ಬುಕ್‌ನಲ್ಲಿ ನಕಲಿ ಖಾತೆ ತೆರೆಯುವುದು ಹೇಗೆ ಎಂಬುದನ್ನು ಹೇಳಿಕೊಡುತ್ತಿರುವ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ನಕಲಿ ಖಾತೆ ಹೇಗೆ ತೆರೆಯುವ ಮತ್ತು ಅದರ ನಿರ್ವಹಣೆ ಹೇಗೆ ಎಂಬುದನ್ನು ಕಾರ್ಯಕರ್ತರಿಗೆ ತಿಳಿಸುತ್ತಿರುವ ಮಾಹಿತಿ ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಇದು 2000ನೇ ಸಾಲಿನ ಐಟಿ ಕಾಯ್ದೆ ಮತ್ತು ಫೇಸ್‌ಬುಕ್‌ ನೀತಿ ನಿಯಮಗಳಿಗೆ ವಿರುದ್ಧವಾಗಿದೆ. 

ಎಐಸಿಸಿ ಸಮಾಜಿಕ ಜಾಲತಾಣ ಮತ್ತು ಡಿಜಿಟಲ್‌ ಕಮ್ಯೂನಿಕೇಷನ್‌ ಮುಖ್ಯಸ್ಥೆಯಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವ ರಮ್ಯಾ ಸಮಾಜವನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಕಾನೂನಿನನ್ವಯ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಕೋರಲಾಗಿದೆ. 

ರಾಜ್ಯ ಬಿಜೆಪಿ ವಕ್ತಾರರಾದ ಸುರೇಶ್‌ ಕುಮಾರ್‌, ಡಾ.ವಾಮನ್‌ ಆಚಾರ್ಯ, ಸಹ ವಕ್ತಾರರಾದ ಎಸ್‌.ಪ್ರಕಾಶ್‌, ಮಾಳವಿಕಾ ಅವಿನಾಶ್‌, ಸಿ.ಮಂಜುಳಾ, ಬಿಜೆಪಿ ಸಮಾಜಿಕ ಜಾಲತಾಣ ನಿರ್ವಾಹಕ ಬಾಲಾಜಿ ಇತರರು ಬುಧವಾರ ನಗರ ಪೊಲೀಸ್‌ ಆಯುಕ್ತ ಸುನಿಲ್‌ ಕುಮಾರ್‌ ಸಿಂಗ್‌ ಅವರಿಗೆ ಈ ದೂರು ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next